ಎಲಾನ್ ಮಸ್ಕ್ ಉದ್ಯೋಗ ಆಫರ್
ಎಲಾನ್ ಮಸ್ಕ್ ಅಂದ್ರೆ ಪ್ರಪಂಚದಲ್ಲಿ ಯಾರಿಗೆ ಗೊತ್ತಿಲ್ಲ ಹೇಳಿ? ಟೆಸ್ಲಾ ಕಂಪನಿಯ ಸಿಇಒ ಎಲಾನ್ ಮಸ್ಕ್ ಕಂಪನಿಯಲ್ಲಿ ಕೆಲಸಕ್ಕಾಗಿ ಜನ ಮುಗಿ ಬೀಳುತ್ತಾರೆ. ಎಲೆಕ್ಟ್ರಿಕ್ ವಾಹನಗಳಲ್ಲಿ ಟೆಸ್ಲಾ ಕಾರುಗಳಿಗೆ ಇರುವ ಕ್ರೇಜ್ ಅಷ್ಟಿಷ್ಟಲ್ಲ.
ಟೆಸ್ಲಾ
ಆದ್ರೆ ಇದೀಗ ಎಲಾನ್ ಮಸ್ಕ್ ಟೆಸ್ಲಾ ಕಂಪನಿ ವಿನೂತನ ಉದ್ಯೋಗವನ್ನು ಪ್ರಕಟಿಸಿದೆ. ದಿನಕ್ಕೆ ಏಳು ಗಂಟೆ ನಡೆದರೆ 28,000 ರೂ. (340 ಅಮೆರಿಕನ್ ಡಾಲರ್) ಸಂಬಳ ಕೊಡ್ತೀವಿ ಅಂತಿದೆ. ಅಂದ್ರೆ ಗಂಟೆಗೆ 4 ಸಾವಿರ ರೂ. ನಿಮ್ಮದಾಗುತ್ತೆ.
ಎಲಾನ್ ಮಸ್ಕ್
ಈ ಕೆಲಸಕ್ಕೆ ಆಫೀಸಿಗೆ ಹೋಗುವ ಅಗತ್ಯವೂ ಇಲ್ಲ. ಪ್ರತಿ ದಿನ ನಿಗದಿತ ಸಮಯ ನಡೆಯುವುದೇ ಕೆಲಸ. ಅಷ್ಟೇ ಅಲ್ಲ ವೈದ್ಯಕೀಯ ವಿಮೆ, ಪಿಂಚಣಿ ಮುಂತಾದ ಸೌಲಭ್ಯಗಳೂ ಇರುತ್ತವೆ. ಈ ಉದ್ಯೋಗ ಮಾಡೋರು ಅಮೆರಿಕದಲ್ಲಿರಬೇಕು.
ಅಷ್ಟೇ ಅಲ್ಲ, ಈ ಕೆಲಸಕ್ಕೆ ಕನಿಷ್ಠ ವಿದ್ಯಾರ್ಹತೆ 5ನೇ ತರಗತಿ ಪಾಸಾದ್ರೆ ಸಾಕು. 'ಡೇಟಾ ಕಲೆಕ್ಷನ್ ಆಪರೇಟರ್' ಎಂದು ಕರೆಯಲ್ಪಡುವ ಈ ಉದ್ಯೋಗವು, ಮೋಷನ್ ಕ್ಯಾಪ್ಚರ್ ತಂತ್ರಜ್ಞಾನವನ್ನು ಬಳಸಿಕೊಂಡು ಹ್ಯೂಮನಾಯ್ಡ್ ರೋಬೋಟ್‌ಗಳಿಗೆ ತರಬೇತಿ ನೀಡಲು ಟೆಸ್ಲಾ ಮಾಡುತ್ತಿರುವ ಪ್ರಯತ್ನದ ಭಾಗ.
ಈ ಕೆಲಸದಲ್ಲಿ ಸೇರುವ ಉದ್ಯೋಗಿಗಳು ಮೋಷನ್ ಕ್ಯಾಪ್ಚರ್ ಸೂಟ್, ವರ್ಚುಯಲ್ ರಿಯಾಲಿಟಿ ಹೆಡ್‌ಸೆಟ್‌ಗಳನ್ನು ಧರಿಸಿ ತಿರುಗಾಡಬೇಕಾಗುತ್ತದೆ. ಇದಕ್ಕಾಗಿ ಗಂಟೆಗೆ ಸುಮಾರು 4,000 ರೂ. (48 ಡಾಲರ್) ಪಾವತಿಸಲಾಗುತ್ತದೆ. ರೋಬೋಟ್‌ಗಳ ಕಾರ್ಯಕ್ಷಮತೆಯನ್ನು ಸುಧಾರಿಸಲು ಡೇಟಾ ಸಂಗ್ರಹಿಸಲು ಮತ್ತು ವಿಶ್ಲೇಷಿಸಲು ಈ ಉದ್ಯೋಗವನ್ನು ಸೃಷ್ಟಿಸಲಾಗಿದೆ.
ಅರ್ಜಿದಾರರು ಈ ಡೇಟಾವನ್ನು ಸಂಗ್ರಹಿಸಿ ವಿಶ್ಲೇಷಿಸಬೇಕಾಗುತ್ತದೆ. ನಂತರ ತಮ್ಮ ಅವಲೋಕನಗಳ ಆಧಾರದ ಮೇಲೆ ವಿವರಣಾತ್ಮಕ ವರದಿ ಕೊಡಬೇಕು. ಈ ಪೋಸ್ಟಿಗೆ ಅರ್ಜಿ ಸಲ್ಲಿಸುವವರು ಡೇಟಾ ಸಂಗ್ರಹಣೆ, ವಿಶ್ಲೇಷಣೆಯಲ್ಲಿ ಪರಿಣತಿ ಹೊಂದಿರಬೇಕು.
ಡೇಟಾ ಕಲೆಕ್ಷನ್ ಆಪರೇಟರ್
ಅರ್ಜಿದಾರರು ಅರ್ಹತೆ ಪಡೆಯಲು ಕೆಲವು ಟಾಸ್ಕ್ ಪೂರೈಸಬೇಕು. 5'7" ನಿಂದ 5'11" ಎತ್ತರ ಇರಬೇಕು. ಜೊತೆಗೆ ವರ್ಚುಯಲ್ ರಿಯಾಲಿಟಿ ತಂತ್ರಜ್ಞಾನದಲ್ಲಿ ಅನುಭವ ಹೊಂದಿರಬೇಕು. ಅಮೆರಿಕದ ನಿವಾಸಿಗಳಾಗಿರುವುದು ಅನಿವಾರ್ಯ.
ಅರ್ಹತೆ ಮತ್ತು ಕೌಶಲ್ಯ ಅವಲಂಬಿಸಿ ಗಂಟೆಗೆ 2,120 ರೂ. ನಿಂದ 4,000 ರೂ. ವರೆಗೆ ಸಂಬಳ ನೀಡಲಾಗುತ್ತದೆ. ರೊಬೊಟಿಕ್ಸ್, ಕೃತಕ ಬುದ್ಧಿಮತ್ತೆ ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿರುವವರಿಗೆ ಈ ಉದ್ಯೋಗವು ಒಂದು ವಿಶಿಷ್ಟ ಅವಕಾಶವನ್ನು ಒದಗಿಸುತ್ತದೆ ಎಂದು ತಜ್ಞರು ಹೇಳುತ್ತಾರೆ.