9 ರಿಂದ 5 ಗಂಟೆಯ ಕೆಲಸ ಸಾಕಾಗಿದ್ಯಾ? ಈ ಸ್ಕಿಲ್ಸ್ ಇದ್ರೆ ಮನೆಯಲ್ಲೇ ಕೂತು ಗಳಿಸಿ

First Published | Mar 29, 2024, 5:35 PM IST

ನಿಮಗೂ ಕೂಡ 9 ರಿಂದ 5 ಗಂಟೆಯವರೆಗಿನ ಕೆಲಸ ಮಾಡಿ ಸಾಕಾಗಿ ಹೋಗಿದ್ಯಾ? ಹಾಗಿದ್ರೆ ಇಲ್ಲಿದೆ ನಿಮಗೆ ಅನುಕೂಲವಾಗುವಂತಹ ಕೆಲಸಗಳ ಪಟ್ಟಿ ಇಲ್ಲಿದೆ. ಇವುಗಳನ್ನು ಆಯ್ಕೆ ಮಾಡಬಹುದು. 
 

ಪ್ರತಿದಿನ ಅದೇ ಕೆಲಸ. ಬೆಳಗ್ಗೆ ಎದ್ದೇಳು 9 ಗಂಟೆಗೆ ಕೆಲಸಕ್ಕೆ ಹೋಗು, ಅಲ್ಲಿ ಕತ್ತೆಯಂತೆ ಇಡೀ ದಿನ ದುಡಿಯೋದು, ಸಂಜೆ 6 ಗಂಟೆಗೆ ವಾಪಾಸ್ ಬರೋದು. ಪ್ರತಿದಿನ ಇದನ್ನು ಮಾಡಿ ನಿಮಗೂ ಜೀವನದಲ್ಲಿ ಬೋರ್ ಎನಿಸಿರಬಹುದು ಅಲ್ವಾ? ಹಾಗಿದ್ರೆ ಅಂತಹ ಕೆಲಸ ಬಿಟ್ಟು, ನಿಮಗೆ ಟ್ಯಾಲೆಂಟ್ ಇದ್ರೆ, ಇಲ್ಲಿ ಹೇಳಿರೋ ಇಂಟ್ರೆಸ್ಟಿಂಗ್ ಕೆಲಸವನ್ನು ನೀವು ಟ್ರೈ ಮಾಡಬಹುದು. ನಿಮಗೆ ಬೇಕೆಂದಾಗ ಮಾತ್ರ ಕೆಲಸ ಮಾಡುವ ಅವಕಾಶ ಇಲ್ಲಿದೆ. 

ಫ್ರೀಲಾನ್ಸ್ ರೈಟರ್ (Freelance Writing)
ನೀವು ಉತ್ತಮ ಬರಹಗಾರರಾಗಿದ್ರೆ ಬ್ಲಾಗ್ ಮತ್ತು ಬೇರೆ ಬೇರೆ ವೆಬ್‌ಸೈಟ್, ಪತ್ರಿಕೆ, ಮ್ಯಾಗಝಿನ್‌ಗಳಿಗೆ ನೀವು ಬರೆಯುವ ಮೂಲಕ ಹಣ ಗಳಿಕೆ ಮಾಡಬಹುದು.

Tap to resize

ಅಫಿಲಿಯೇಟ್ ಮಾರ್ಕೆಟಿಂಗ್ (Affiliate Marketing)
ಬೇರೆ ಬೇರೆ ಕಂಪನಿಗಳ, ಬ್ರಾಂಡ್ ಗಳ ಉತ್ಪನ್ನಗಳನ್ನು ಪ್ರಚಾರ ಮಾಡಿ ಮತ್ತು ಪ್ರತಿ ಮಾರಾಟಕ್ಕೆ ಕಮಿಷನ್ಸ್ ಗಳಿಸಬಹುದು. ಇದನ್ನು ಮನೆಯಲ್ಲಿ ಕುಳಿತುಕೊಂಡೇ ಮಾಡಬಹುದು. 

ಆನ್ಲೈನ್ ಕೋರ್ಸ್ (​Online Courses)
ಯುಡೆಮಿ ಅಥವಾ ಸ್ಕಿಲ್ಸ್ ಫ್ಯೂಚರ್‌ನಂಥ ಪ್ಲಾಟ್‌ಫಾರ್ಮ್‌ಗಳಲ್ಲಿ ಕೋರ್ಸ್‌ಗಳನ್ನು ರಚಿಸಿ ಮತ್ತು ಮಾರುವ ಮೂಲಕ ಹಣ ಗಳಿಸಬಹುದು. 

ಕನ್ಸಲ್ಟಿಂಗ್ (Consulting)
ಮಾರ್ಕೆಟಿಂಗ್ (Marketing), ಫೈನಾನ್ಸ್ (Finance), ಅಥವಾ ಬಿಸಿನೆಸ್ ಸ್ಟ್ರಾಟಜಿಯಂತಹ (Business Strategy( ಕ್ಷೇತ್ರಗಳಲ್ಲಿ ನೀವು ಪರಿಣತಿ ಹೊಂದಿದ್ದರೆ, ಕನ್ಸಲ್ಟೆಂಟ್ ಆಗಿ ನೀವು ಕೆಲಸ ಮಾಡಬಹುದು. ಆ ಮೂಲಕ ಕೈತುಂಬಾ ಹಣ ಸಂಪಾದಿಸಬಹುದು. 

ಸಾಮಾಜಿಕ ಮಾಧ್ಯಮ ನಿರ್ವಹಣೆ (Social Media Management)
ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಎಲ್ಲಾ ಕಂಪನಿಗಳಿಗೆ ಸೋಶಿಯಲ್ ಮೀಡಿಯಾ ಮ್ಯಾನೇಜರ್ ಅಗತ್ಯವಿದೆ. ನೀವು ಸೋಶಿಯಲ್ ಮೀಡಿಯಾ ಎಕ್ಸ್ ಪರ್ಟ್ ಆಗಿದ್ರೆ ಈ ಕೆಲಸವನ್ನು ಆಯ್ಕೆ ಮಾಡಬಹುದು. 

ಡಿಜಿಟಲ್ ಉತ್ಪನ್ನಗಳು (Digital Products)
ಮುದ್ರಣಗಳು ಅಥವಾ ಟೆಂಪ್ಲೇಟ್ ಗಳಂತಹ ಡಿಜಿಟಲ್ ಉತ್ಪನ್ನಗಳನ್ನು ರಚಿಸಿ ಮತ್ತು ಮಾರಾಟ ಮಾಡುವ ಮೂಲಕ ಸುಲಭವಾಗಿ ಹಣ ಗಳಿಸಬಹುದು. 

ರಿಮೋಟ್ ಕೋಚಿಂಗ್ (Remote Coaching)
ಫಿಟ್ನೆಸ್ ಅಥವಾ ಲೈಫ್ ಕೋಚಿಂಗ್ ನಂತಹ ಕ್ಷೇತ್ರಗಳಲ್ಲಿ ಕೋಚಿಂಗ್ ಸೇವೆಗಳನ್ನು ನೀಡುವ ಮೂಲಕ ಸಹ ಹಣ ಸಂಪಾದನೆ ಮಾಡಬಹುದು.

Latest Videos

click me!