ಎಕ್ಸ್ ಅಂದರೆ ಈ ಹಿಂದಿನ ಟ್ವಿಟ್ಟರ್ ಮಾಲೀಕ ಎಲಾನ್ ಮಸ್ಕ್ ಅವರ ಕಂಪನಿ ಸ್ಪೇಸ್‌ಎಕ್ಸ್‌ನಲ್ಲಿ 14 ವರ್ಷದ ಹುಡುಗನನ್ನು ಸಾಫ್ಟ್‌ವೇರ್ ಎಂಜಿನಿಯರ್ ಆಗಿ ನೇಮಿಸಲಾಗಿದೆ. ಈ ಬಾಲಕ ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಕ್ವಾಜಿ ಸಾಂಟಾ ಕ್ಲಾರಾ ವಿಶ್ವವಿದ್ಯಾಲಯದ (SCU) ಸ್ಕೂಲ್ ಆಫ್ ಎಂಜಿನಿಯರಿಂಗ್‌ನ ಪದವೀಧರರಾಗಿದ್ದಾನೆ.
ಹೌದು, 9ನೇ ವಯಸ್ಸಿಗೆ ಬಾಂಗ್ಲಾದೇಶ ಮೂಲದ ಕೈರಾನ್ ಕ್ವಾಜಿ ಅಮೆರಿಕದ ಲಾಸ್ ಪೊಸಿಟಾಸ್ ಸಮುದಾಯ ಕಾಲೇಜಿನಲ್ಲಿ ಸೇರಿಕೊಂಡನು ಮತ್ತು ಅಸೋಸಿಯೇಟ್ ಆಫ್ ಸೈನ್ಸ್ (ಗಣಿತಶಾಸ್ತ್ರ) ನಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಪದವಿ ಪಡೆದಿದ್ದಾನೆ. ಕಂಪನಿಯ 'ತಾಂತ್ರಿಕವಾಗಿ ಸವಾಲಿನ' ಮತ್ತು 'ಮೋಜಿನ' ಸಂದರ್ಶನ ಪ್ರಕ್ರಿಯೆಯಲ್ಲಿ ಉತ್ತೀರ್ಣರಾದ ನಂತರ ಕೈರಾನ್ ಕ್ವಾಜಿಗೆ ಈ ಕೆಲಸವನ್ನು ನೀಡಲಾಯಿತು.
ಅಗಾಧ ಬುದ್ಧಿಶಾಲಿ ಮತ್ತು ಅತ್ಯಂತ ಬುದ್ಧಿವಂತ ಹುಡುಗನಾಗಿರೋ ಕ್ವಾಜಿ ಚಿಕ್ಕ ವಯಸ್ಸಿನಲ್ಲೇ ಸುದ್ದಿ ಮತ್ತು ಪ್ರಸ್ತುತ ವ್ಯವಹಾರಗಳಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡಿದ್ದ. ಕೇವಲ 2 ವರ್ಷಕ್ಕೆ ಸಂಪೂರ್ಣ ವಾಕ್ಯಗಳನ್ನು ಮಾತನಾಡಲು ಆತನಿಗೆ ಸಾಧ್ಯವಾಗಿದೆ. ಇನ್ನು, ರೇಡಿಯೋದಲ್ಲಿ ಕೇಳಿದ ಸುದ್ದಿಗಳನ್ನು ನರ್ಸರಿಯಲ್ಲಿ ಸಹಪಾಠಿಗಳೊಂದಿಗೆ ಹಂಚಿಕೊಳ್ಳುತ್ತಿದ್ದ ಎಂದೂ ತಿಳಿದುಬಂದಿದೆ.
ಮೂರನೇ ತರಗತಿಯನ್ನು ತಲುಪಿದ ನಂತರ, ಕ್ವಾಜಿಗೆ ತಾನು ಶಾಲೆಯಲ್ಲಿ ಏನನ್ನೂ ಕಲಿಯುತ್ತಿಲ್ಲ ಎಂದು ಅನಿಸಲಾರಂಭಿಸಿತು. ನಂತರ ಅವನ ಪೋಷಕರು ಅವನನ್ನು ಸಮುದಾಯ ಕಾಲೇಜಿಗೆ ಸೇರಿಸಿದರು. ಅಸ್ಸಾಸಿನ್ಸ್ ಕ್ರೀಡ್ ಸರಣಿಯಂತಹ ಐತಿಹಾಸಿಕ ಅವಧಿಗಳಲ್ಲಿ ಹೊಂದಿಸಲಾದ ಆಟಗಳನ್ನು ಕ್ವಾಜಿ ಆನಂದಿಸುತ್ತಾನೆ. ಹಾಗೆ, ಫಿಲಿಪ್ ಕೆ. ಡಿಕ್ ಅವರ ವೈಜ್ಞಾನಿಕ ಕಾಲ್ಪನಿಕ ಕಥೆಗಳನ್ನು ಮತ್ತು ಪತ್ರಕರ್ತ ಮೈಕೆಲ್ ಲೂಯಿಸ್ ಅವರ ಕೃತಿಗಳನ್ನು ಓದುವುದನ್ನು ಆನಂದಿಸುತ್ತಾನೆ. ಅಷ್ಟೇ ಅಲ್ಲದೆ, ಆರ್ಥಿಕ ಬಿಕ್ಕಟ್ಟು ಮತ್ತು ಬಿಹೇವರಿಯಲ್ ಫೈನಾನ್ಸ್ ವಿಷಯದಲ್ಲೂ ಪರಿಣತಿ ಹೊಂದಿದ್ದಾನೆ.
ಕೈರಾನ್ ಕ್ವಾಜಿ ಕ್ಯಾಲಿಫೋರ್ನಿಯಾದಲ್ಲಿ ಬಾಂಗ್ಲಾದೇಶದ ಪೋಷಕರಾದ ಮುಶ್ತಾಹಿದ್ ಕ್ವಾಜಿ ಮತ್ತು ಜುಲಿಯಾ ಕ್ವಾಜಿಗೆ ಜನಿಸಿದ್ದಾನೆ. ಆತನ ತಂದೆ ಕೆಮಿಕಲ್ ಎಂಜಿನಿಯರ್ ಆಗಿದ್ದರು ಮತ್ತು ತಾಯಿ ವಾಲ್ ಸ್ಟ್ರೀಟ್ ಎಕ್ಸಿಕ್ಯೂಟಿವ್ ಆಗಿದ್ದಾರೆ ಎಂದು ತಿಳಿದುಬಂದಿದೆ.