100 ಕೋಟಿಗಿಂತ ಹೆಚ್ಚಿನ ವೇತನ ಪಡೆದು ಒಂದೇ ವರ್ಷಕ್ಕೆ ಕಂಪೆನಿಯಿಂದ ವಜಾಗೊಂಡ ಐಐಟಿ ಬಾಂಬೆ ವಿದ್ಯಾರ್ಥಿ!

First Published Sep 8, 2023, 4:26 PM IST

ವಿಶ್ವದ  ಅನೇಕ ದೊಡ್ಡ ಟೆಕ್ ಕಂಪನಿಗಳನ್ನು ಭಾರತೀಯ ಐಐಟಿ ಪದವೀಧರರು  ಮುನ್ನಡೆಸುತ್ತಿದ್ದಾರೆ. ಅಂತಹ ಐಐಟಿ ಬಾಂಬೆ ಪಾಸ್ ಔಟ್ ವಿದ್ಯಾರ್ಥಿಯೊಬ್ಬ ಬೃಹತ್ ಗಾತ್ರದ ಸಂಬಳದೊಂದಿಗೆ ಕಂಪೆನಿಯೊಂದಕ್ಕೆ ಸಿಇಒ ಆಗಿ ನೇಮಕಗೊಂಡರು. ಅದರೆ ಕಂಪೆನಿ 1 ವರ್ಷದೊಳಗೆ ಅವರನ್ನು ತೆಗೆದು ಹಾಕಿದಾಗ ಅವರ ವೇತನ 100 ಕೋಟಿಗಿಂತ ಹೆಚ್ಚಿತ್ತು. ಪ್ರಸ್ತುತ ಅವರು ಯಾವುದೇ ಕಂಪೆನಿಯಲ್ಲಿ ಕೆಲಸಕ್ಕಿಲ್ಲ.

 ಐಐಟಿ ಬಾಂಬೆ ಪದವೀಧರ ಪರಾಗ್ ಅಗರ್ವಾಲ್ ವೇತನವು ಅವರನ್ನು ಟ್ವಿಟ್ಟರ್ ನೇಮಕ ಮಾಡುವಾಗ ಸುಮಾರು 8 ಕೋಟಿ ರೂಪಾಯಿಗಳಟ್ಟು ವೇತನ ಜೊತೆಗೆ ಅವರು ಸುಮಾರು 94 ಕೋಟಿ ರೂಪಾಯಿ ಮೌಲ್ಯದ ನಿರ್ಬಂಧಿತ ಸ್ಟಾಕ್ ಘಟಕಗಳನ್ನು ಸಹ ಪಡೆದರು.  ಅವರ ಒಟ್ಟಾರೆ ಸಂಬಳದ ಪ್ಯಾಕೇಜ್ 100 ಕೋಟಿ ರೂ.ಗಿಂತ ಹೆಚ್ಚಿತ್ತು ಆದರೆ ದುರದೃಷ್ಟವಶಾತ್ ಅವರನ್ನು ಸೇರಿದ ಒಂದು ವರ್ಷದೊಳಗೆ ಅವರನ್ನು ಕೆಲಸದಿಂದ ವಜಾಗೊಳಿಸಲಾಯಿತು. 

 ವಿಶ್ವದ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್  44 ಶತಕೋಟಿ ಡಾಲರ್‌ ಬೃಹತ್ ಒಪ್ಪಂದಕ್ಕೆ ಮೈಕ್ರೋ-ಬ್ಲಾಗಿಂಗ್ ಪ್ಲಾಟ್‌ಫಾರ್ಮ್  ಟ್ವೀಟ್ಟರ್ ಅನ್ನು ಸ್ವಾಧೀನಪಡಿಸಿಕೊಂಡ ನಂತರ,  ಟ್ವಿಟರ್ ಸಿಇಒ ಆಗಿದ್ದ ಪರಾಗ್ ಅಗರ್ವಾಲ್  ಅವರನ್ನು ಹುದ್ದೆಯಿಂದ ವಜಾಗೊಳಿಸಲಾಯ್ತು. ಎಲಾನ್ ಮಸ್ಕ್ ಕಂಪನಿಯನ್ನು ತನ್ನ ವಶಕ್ಕೆ ಪಡೆದ ನಂತರ ಪರಾಗ್ ಅಗರ್ವಾಲ್ ಅವರನ್ನು ವಜಾ ಮಾಡಿದರು. 

 ಅಜ್ಮೀರ್‌ನಲ್ಲಿ ಜನಿಸಿದ ಪರಾಗ್ ಅಗರವಾಲ್ ಸುಶಿಕ್ಷಿತ ಕುಟುಂಬದ ಭಾಗವಾಗಿದ್ದರು. ಅವರ ತಂದೆ ಭಾರತೀಯ ಪರಮಾಣು ಶಕ್ತಿ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿದ್ದರು ಮತ್ತು ಅವರ ತಾಯಿ ನಿವೃತ್ತ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿದ್ದಾರೆ. ಅಗರವಾಲ್ 77 ಅಖಿಲ ಭಾರತ ಶ್ರೇಣಿಯನ್ನು (AIR) ಪಡೆದುಕೊಂಡ ನಂತರ 2005 ರಲ್ಲಿ IIT ಬಾಂಬೆಯಿಂದ ಪದವಿಯನ್ನು ಪೂರ್ಣಗೊಳಿಸಿದರು. ನಂತರ ಅವರು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ವಿಜ್ಞಾನದಲ್ಲಿ ಪಿಎಚ್‌ಡಿ ಮಾಡಲು ಯುನೈಟೆಡ್ ಸ್ಟೇಟ್ಸ್‌ಗೆ ಹೋದರು. 

 ಟ್ವಿಟರ್‌ನಿಂದ ನಿರ್ಗಮಿಸಿದ ನಂತರ, ಪರಾಗ್ ಅಗರವಾಲ್ ಬೇರೆ ಯಾವುದೇ ಕಂಪನಿಗೆ ಸೇರಿಲ್ಲ. ಅವರ ಲಿಂಕ್ಡ್‌ಇನ್ ಬಯೋ ಕೇವಲ 'ಟ್ವಿಟರ್‌ನಲ್ಲಿ ಮಾಜಿ ಸಿಇಒ' ಎಂದು ಓದುತ್ತದೆ. ಪರಾಗ್ ಅಗರವಾಲ್ ಅವರು ವೆಂಚರ್ ಕ್ಯಾಪಿಟಲ್ ಫರ್ಮ್ ಆಂಡ್ರೆಸೆನ್ ಹೊರೊವಿಟ್ಜ್‌ನಲ್ಲಿ ಸಾಮಾನ್ಯ ಪಾಲುದಾರರಾಗಿರುವ ವಿನೀತಾ ಅಗರ್‌ವಾಲಾ ಅವರನ್ನು ವಿವಾಹವಾಗಿದ್ದಾರೆ. ಇವರಿಗೆ ಇಬ್ಬರು ಮಕ್ಕಳು.

 ಟ್ವೀಟರ್‌ ಖರೀದಿಸುವುದಕ್ಕೂ ಮುನ್ನ ಪರಾಗ್‌ ಅವರನ್ನು 2022ರಲ್ಲಿ ಔತಣಕೂಟದ ನೆಪದಲ್ಲಿ ಭೇಟಿಯಾಗಿದ್ದೆ. ಪರಾಗ್‌ ಅವರ ವ್ಯಕ್ತಿತ್ವ ನನ್ನನ್ನು ಪ್ರಭಾವಿಸಲಿಲ್ಲ. ಪರಾಗ್‌ ಒಳ್ಳೆಯ ವ್ಯಕ್ತಿಯೇ ಆಗಿದ್ದರು. ಆದರೆ ಸಿಇಒ ಆಗಲು ಅದು ಕಾರಣವಾಗುವುದಿಲ್ಲ. ಸಿಇಒ ಆಗಲು ಎಲ್ಲ ಜನರೂ ಮೆಚ್ಚಿಕೊಳ್ಳಬೇಕು ಎಂದೇನೂ ಇಲ್ಲ. ಟ್ವೀಟರ್‌ಗೆ ಬೆಂಕಿ ಉಸಿರಾಡುವ ಡ್ರ್ಯಾಗನ್‌ ಬೇಕಾಗಿತ್ತು (ಆಕ್ರಮಣಶೀಲ ವ್ಯಕ್ತಿತ್ವದವರು). ಆದರೆ ಪರಾಗ್‌ ಅದಾಗಿರಲಿಲ್ಲ ಎಂದು ಮಸ್ಕ್ ತನ್ನ ಜೀವನಗಾಥೆ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.

ಖ್ಯಾತ ಗಾಯಕಿ  ಶ್ರೇಯಾ ಘೋಷಾಲ್ ಮತ್ತು ಪರಾಗ್ ಬಾಲ್ಯ ಸ್ನೇಹಿತರು. ಹೀಗಾಗಿ ಟ್ವಿಟ್ಟರ್ ಸಿಇಓ ಆದಾಗ ಶ್ರೇಯಾ ವಿಶ್ ಮಾಡಿ ಸಂತಸ ಹಂಚಿಕೊಂಡಿದ್ದರು.
 

click me!