ರತನ್ ಟಾಟಾ ಈ ಮಾತುಗಳು ಯಶಸ್ಸಿಗೆ ಪ್ರೇರಣೆ ನೀಡುತ್ತೆ !

First Published | Mar 31, 2024, 5:36 PM IST

ರತನ್ ಟಾಟಾ ಅವರು ತಮ್ಮ ಯಶಸ್ಸಿನಿಂದ ಭಾರತೀಯರಿಗೆ ಮಾತ್ರವಲ್ಲದೆ ಪ್ರಪಂಚದಾದ್ಯಂತದ ಜನರಿಗೆ ತಲೆಮಾರುಗಳಿಂದ ಸ್ಫೂರ್ತಿ ನೀಡಿದ್ದಾರೆ. ಜೀವನದಲ್ಲಿ ಯಶಸ್ಸು ಪಡೆಯಲು ನೀವು ಸಹ ರತನ್ ಟಾಟಾ ಅವರ ಸಲಹೆ ಪಾಲಿಸಿ. 

ರತನ್ ಟಾಟಾ (Ratan Tata) ಭಾರತದ ಆರ್ಥಿಕ ಜಗತ್ತಿನ ದೊರೆ ಎಂದರೆ ತಪ್ಪಾಗಲಾರದು. ಇವರು ತಲೆಮಾರುಗಳಿಂದ, ಹಲವು ತಲೆಮಾರುಗಳಿಗೆ ಸ್ಫೂರ್ತಿ ನೀಡಿದ್ದಾರೆ. ಅವರ ಶಿಕ್ಷಣ, ಆರೋಗ್ಯ ಮತ್ತು ಅಭಿವೃದ್ಧಿ, ಅವರ ಜೀವನ, ಲೋಕೋಪಕಾರಿ ಕಾರ್ಯಗಳು ಭಾರತೀಯ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತಂದಿವೆ. ಅವರ ಕೆಲವು ಸ್ಪೂರ್ತಿದಾಯಕ ಅಂಶಗಳು ಇಲ್ಲಿವೆ. ಇವು ನಿಮ್ಮ ಜೀವನದಲ್ಲೂ ಸ್ಪೂರ್ತಿ ತುಂಬಬಹುದು. 
 

ತಪ್ಪು ಮನಸ್ಥಿತಿ: ಕಬ್ಬಿಣವನ್ನು ಅದರ ಸ್ವಂತ ತುಕ್ಕು ಹೊರತುಪಡಿಸಿ ಬೇರೇನೂ ನಾಶಮಾಡಲು ಸಾಧ್ಯವಿಲ್ಲ, ಅದೇ ರೀತಿ ಒಬ್ಬ ವ್ಯಕ್ತಿಗೆ ಅವನ ಸ್ವಂತ ತಪ್ಪು ಮನಸ್ಥಿತಿಯನ್ನು (bad mood) ಹೊರತುಪಡಿಸಿ ಯಾರೂ ಸಹ ಆತನಿಗೆ ಹಾನಿ ಮಾಡಲು ಸಾಧ್ಯವಿಲ್ಲ. 

Tap to resize

ಜೀವನದಲ್ಲಿನ ತೊಂದರೆಗಳ ಬಗ್ಗೆ: ಜೀವನದ ಏರಿಳಿತಗಳು ಜೀವನದಲ್ಲಿ ಮುಂದೆ ಸಾಗಲು ಮತ್ತು ಯಶಸ್ಸಿನ ಮೆಟ್ಟಿಲುಗಳನ್ನು (steps of success) ಹತ್ತಲು ಪ್ರೇರೇಪಿಸುತ್ತದೆ. ಏಕೆಂದರೆ ಇಸಿಜಿಯಲ್ಲಿಯೂ ಸಹ ಸರಳ ರೇಖೆಯು ಜೀವನದ ಅಂತ್ಯವನ್ನು ತೋರಿಸುತ್ತದೆ.

ಸೋಲಿಗೆ ಹೆದರಬೇಡಿ: ಸೋಲಿಗೆ ಎಂದಿಗೂ ಹೆದರಬೇಡಿ. ಜೀವನದಲ್ಲಿ ಯಶಸ್ಸನ್ನು (success) ಸವಿಯಲು ಮತ್ತು ಮುಂದೆ ಸಾಗಲು ಸೋಲು ಉತ್ತಮ ಮಾರ್ಗವಾಗಿದೆ.
 

ಕಠಿಣ ಪರಿಶ್ರಮ: ವಿಷಯಗಳನ್ನು ವಿಧಿಗೆ ಬಿಡುವುದರಲ್ಲಿ ನನಗೆ ನಂಬಿಕೆಯಿಲ್ಲ ಎನ್ನುವ ರತನ್ ಟಾಟಾ, ಕಠಿಣ ಪರಿಶ್ರಮ (hard work) ಮತ್ತು ಸಿದ್ಧತೆಯಲ್ಲಿ ನನಗೆ ನಂಬಿಕೆ ಇದೆ ಎಂದರು. ಅದರಂತೆ ನಡೆದರು.

ನಾಯಕತ್ವ: ತಮ್ಮ ಸಹಾಯಕರು ಮತ್ತು ಮಿತ್ರರಿಗಿಂತ ಉತ್ತಮವಾಗಿ ಜನರೊಂದಿಗೆ ತಮ್ಮನ್ನು ಸುತ್ತುವರೆದಿರುವವರು ಉತ್ತಮ ನಾಯಕರು (leadership).  ನಾಯಕನಾಗುವವನು ಯಾವಾಗಲೂ ಎಲ್ಲರನ್ನೂ ತನ್ನ ಜೊತೆ ಮುಂದುವರೆಯಲು ಅನುಮತಿಸಬೇಕು.

ಪ್ಯಾಷನ್ ಬಗ್ಗೆ: ನೀವು ಕನಸಿನಿಂದ ಪ್ರಾರಂಭಿಸಿ ಉತ್ಸಾಹದಿಂದ ಕೆಲಸ ಮಾಡಿದಾಗ, ಯಶಸ್ಸು ಬರುತ್ತದೆ. ಅಂದರೆ ನಿಮ್ಮ ಸಣ್ಣ ಕನಸನ್ನು  ಪೂರೈಸಲು ಉತ್ಸಾಹದಿಂದ ಕೆಲಸ ಮಾಡಿದಾಗ ಮಾತ್ರ ಯಶಸ್ಸು ಸಿಗಲು ಸಾಧ್ಯವಾಗುತ್ತೆ.

ಯಶಸ್ಸು ಮತ್ತು ವೈಫಲ್ಯವನ್ನು ಎದುರಿಸೋದು: ಯಶಸ್ಸನ್ನು ಎಂದಿಗೂ ನಿಮ್ಮ ತಲೆಗೆ ಹೋಗಲು ಬಿಡಬೇಡಿ ಮತ್ತು ಸೋಲು ನಿಮ್ಮ ಹೃದಯವನ್ನು ಮುರಿಯಲು ಎಂದಿಗೂ ಬಿಡಬೇಡಿ. ಸೋಲನ್ನು ಸಂತೋಷದಿಂದ ಸ್ವೀಕರಿಸಿ, ಮತ್ತೆ ಪ್ರಯತ್ನ ಮಾಡಿದ್ರೆ ಯಶಸ್ಸು ಖಚಿತ. 

Latest Videos

click me!