ಫ್ರೀ ಬಸ್​ ಜೊತೆ ಮಹಿಳೆಯರಿಗೆ ಚಿನ್ನ, ದುಡ್ಡು , ರೇಷ್ಮೆ ಸೀರೆ, ಸಿಲಿಂಡರ್‌ ಎಲ್ಲವೂ ಉಚಿತ- ಏನಿದು ಸ್ಕೀಮ್​?

Published : Mar 09, 2026, 07:55 PM IST

 'ತಮಿಳಿಗ ವೆಟ್ರಿ ಕಳಗಂ' ಪಕ್ಷದ ಮೂಲಕ 'ಅಣ್ಣನ್ ಸೀರ್' ಎಂಬ ವಿಶೇಷ ಯೋಜನೆಯನ್ನು ಘೋಷಿಸಿದ್ದಾರೆ. ಈ ಯೋಜನೆಯಡಿ ಮದುವೆಗೆ 8 ಗ್ರಾಂ ಚಿನ್ನ, ವರ್ಷಕ್ಕೆ 6 ಉಚಿತ ಸಿಲಿಂಡರ್‌ಗಳು ಮತ್ತು ಹೆಣ್ಣುಮಕ್ಕಳ ಶಿಕ್ಷಣಕ್ಕೆ ಆರ್ಥಿಕ ಸಹಾಯದಂತಹ ಹಲವು ಉಚಿತ ಕೊಡುಗೆಗಳನ್ನು ನೀಡುವ ಭರವಸೆ ನೀಡಿದ್ದಾರೆ. 

PREV
17
ಫ್ರೀ ಫ್ರೀ

ಮದುವೆಯಾಗುವ ಮಹಿಳೆಗೆ 8 ಗ್ರಾಂ ಚಿನ್ನದ ಜೊತೆಗೆ ರೇಷ್ಮೆ ಸೀರೆ, ಜನಿಸುವ ಪ್ರತಿ ಹೆಣ್ಣು ಮಗುವಿಗೆ ಬಂಗಾರದ ಉಂಗುರ, ಯಜಮಾನಿಗೆ 2,500 ರೂಪಾಯಿ ನಗದು, ವರ್ಷಕ್ಕೆ 6 ಎಲ್‌ಪಿಜಿ ಸಿಲಿಂಡರ್ ಎಲ್ಲವೂ ಫ್ರೀ ಫ್ರೀ ಫ್ರೀ. ಉಚಿತ ಗ್ಯಾರೆಂಟಿಗಳ ಸುರಿಮಳೆ, ಮಹಿಳೆಯರು ಫುಲ್‌ ಖುಷ್‌!

27
ರಾಜಕಾರಣಿ ಘೋಷಣೆ

ಹಾಗೆಂದು ಇದು ಸರ್ಕಾರದ ಗ್ಯಾರೆಂಟಿ ಅಲ್ಲ, ಬದಲಿಗೆ ರಾಜಕಾರಣಿಯೊಬ್ಬರು ಕೊಟ್ಟಿರೋ ಗ್ಯಾರೆಂಟಿ. ಇದೇನು ಚುನಾವಣೆ ಸದ್ಯಕ್ಕೆ ಇಲ್ವಲ್ಲ, ಇದೇನು ಗ್ಯಾರೆಂಟಿ ಅಂತೀರಾ, ಹೀಗೆ ಉಚಿತ ಘೋಷಣೆ ಮಾಡಿರುವುದು ದಳಪತಿ ವಿಜಯ್‌!

37
ಮಹಿಳೆಯರು ಗರಂ

ಅತ್ತ ಪತ್ನಿ ಸಂಗೀತಾ ಜೊತೆಗಿನ 27 ವರ್ಷಗಳ ದಾಂಪತ್ಯ ಜೀವನಕ್ಕೆ ಎಳನೀರುಬಿಡುವುದು, ಇತ್ತ ನಟಿ ತ್ರಿಷಾ ಜೊತೆಗಿನ ಸಂಬಂಧದ ಸುದ್ದಿ... ಇವುಗಳಿಗೆ ದಳಪತಿ ಬಗ್ಗೆಮಹಿಳೆಯರು ಸಿಕ್ಕಾಪಟ್ಟೆ ಗರಂ ಆಗಿದ್ದಾರೆ. ಅವರನ್ನು ತಣಿಸುವುದಕ್ಕಾಗಿ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ನಾಯಕನೂ ಆಗಿರುವ ನಟ ಹೀಗೆಲ್ಲಾ ಆಫರ್‌ಗಳನ್ನು ಘೋಷಿಸಿರುವುದಾಗಿ ಹೇಳಲಾಗುತ್ತಿದೆ.

47
ಹೆಣ್ಣುಮಕ್ಕಳೇ ಟಾರ್ಗೆಟ್‌

ಇದಕ್ಕೆ ಕಾರಣ ಹತ್ತಿರದಲ್ಲಿಯೇ ಇರುವ ವಿಧಾನಸಭಾ ಚುನಾವಣೆ. ಚುನಾವಣೆ ಎಂದರೆ ಸಾಕು, ಹೆಣ್ಣುಮಕ್ಕಳೇ ರಾಜಕಾರಣಿಗಳ ಟಾರ್ಗೆಟ್‌. ಏಕೆಂದರೆ ಅವರ ದೃಷ್ಟಿಯಲ್ಲಿ ಹೆಣ್ಣುಮಕ್ಕಳೇ ಉಚಿತಕ್ಕೆ ಹೆಚ್ಚು ಬೇಗನೇ ಮೋಡಿಗೆ ಒಳಗಾಗುವವರು, ಒಂದರ್ಥದಲ್ಲಿ, ಆಸೆಬುರುಕರು. ಇದೇ ಕಾರಣಕ್ಕೆ ರಾಜ್ಯ ಯಾವುದೇ ಇರಲಿ, ಅಲ್ಲಿ ಘೋಷಣೆಯಾಗಿರುವ ಇಂಥ ಉಚಿತಗಳು ಹೆಣ್ಣುಮಕ್ಕಳ ಪರವಾಗಿಯೇ ಇರುತ್ತದೆ, ಅದನ್ನೇ ದಳಪತಿ ವಿಜಯ್‌ ಕೂಡ ಮಾಡಿದ್ದಾರೆ.

57
‘ಅಣ್ಣನ್ ಸೀರ್‌’

‘ಅಣ್ಣನ್ ಸೀರ್‌’ ಎಂಬ ವಿಶೇಷ ಸ್ಕೀಮ್‌ ಇದಾಗಿದ್ದು, ಇದರಲ್ಲಿ ದಳಪತಿ ಇವನ್ನೆಲೆಲಾ ಘೋಷಿಸಿದ್ದಾರೆ. ಇದರ ಜೊತೆಗೆ, ಶಾಲಾ ಶಿಕ್ಷಣದ ಮಧ್ಯದಲ್ಲೇ ಬಾಲಕಿಯರು ಓದು ಬಿಡದಂತೆ ಮಾಡಲು ‘ಕಾಮರಾಜರ್ ಕಲ್ವಿ ಉರುದಿ ಯೋಜನೆ’ ಅಡಿಯಲ್ಲಿ ಪ್ರತಿ ವರ್ಷ 15,000 ರೂಪಾಯಿ ಆರ್ಥಿಕ ಸಹಾಯ ನೀಡಲು ವಿಜಯ್ ಮುಂದಾಗಿದ್ದಾರೆ.

67
ಅನ್ನಪೂರ್ಣಿ ಸೂಪರ್ ಸಿಕ್ಸ್

‘ಅನ್ನಪೂರ್ಣಿ ಸೂಪರ್ ಸಿಕ್ಸ್’ ಸ್ಕೀಮ್ ಅನ್ವಯ ಪ್ರತಿ ಕುಟುಂಬಕ್ಕೆ ವರ್ಷಕ್ಕೆ ಆರು ಉಚಿತ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳು ನೀಡಲಾಗುತ್ತದೆ ಎಂದು ವಿಜಯ್ ಘೋಷಿಸಿದ್ದಾರೆ. ಮಹಿಳೆಯರ ವಿರುದ್ಧ ನಡೆಯುವ ಅಪರಾಧಗಳಿಗೆ ಶೂನ್ಯ ಸಹಿಷ್ಣುತೆ ನೀತಿ ಅನುಸರಿಸುವುದಾಗಿಯೂ ನಟ ಹೇಳಿದ್ದಾರೆ.

77
ಉಚಿತ ಪ್ರಯಾಣ

ಮಹಿಳೆಯರಿಗೆ ರಾಜ್ಯದ ಎಲ್ಲಾ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ನೀಡುವುದಾಗಿ ವಿಜಯ್ ಭರವಸೆ ನೀಡಿದ್ದಾರೆ. ಜೊತೆಗೆ ರೇಷನ್ ಅಂಗಡಿಗಳು, ಶಾಲೆಗಳು ಮತ್ತು ಕಾಲೇಜುಗಳ ಮೂಲಕ ಉಚಿತ ಸ್ಯಾನಿಟರಿ ಪ್ಯಾಡ್‌ಗಳನ್ನು ವಿತರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories