ಗಂಡನ ಚಿತೆ ಆರುವ ಮುನ್ನವೇ ಸುನೇತ್ರಾ ಪವಾರ್ ದಿಢೀರ್ ಪ್ರಮಾಣವಚನ! ಹಿಂದಿದೆ 4 ಪ್ರಮುಖ ಕಾರಣ!

Naveen Kodase   | Kannada Prabha
Published : Feb 01, 2026, 06:12 AM IST

ಮುಂಬೈ: ಮಹಾರಾಷ್ಟ್ರ ಡಿಸಿಎಂ ಅಜಿತ್‌ ಪವಾರ್ ತೀರಿ ಹೋದ ಮೂರೇ ದಿನಕ್ಕೆ ಸುನೇತ್ರಾ ಪವಾರ್ ಅವರು ಉಪಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸಿದ್ದೇಕೆ? ಈ ಬಗ್ಗೆ ಎನ್‌ಸಿಪಿ (ಎಸ್ಪಿ) ಅಧ್ಯಕ್ಷ ಶರದ್ ಪವಾರ್ ಅವರನ್ನೂ ಸಂಪರ್ಕಿಸಿಲ್ಲ ಏಕೆ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಇಲ್ಲಿವೆ 4 ಕಾರಣ 

PREV
16
ಮಹಾರಾಷ್ಟ್ರ ಉಪಮುಖ್ಯಮಂತ್ರಿಯಾಗಿ ಸುನೇತ್ರಾ ಪ್ರಮಾಣವಚನ ಸ್ವೀಕಾರ

ಎನ್‌ಸಿಪಿ ನಾಯಕ ಅಜಿತ್‌ ಪವಾರ್‌ ಅವರ ಅನಿರೀಕ್ಷಿತ ಅಗಲಿಕೆಯಿಂದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನ ತೆರವಾಗಿರುವ ಹಿನ್ನೆಲೆಯಲ್ಲಿ ಅವರ ಪತ್ನಿ ಸುನೇತ್ರಾ ಪವಾರ್‌ (62) ಅವರು ಡಿಸಿಎಂ ಆಗಿ ಶನಿವಾರ ಸಂಜೆ ಪ್ರಮಾಣವಚನ ಸ್ವೀಕರಿಸಿದರು.

26
ಸುನೇತ್ರಾ ಡಿಸಿಎಂ ಆಗಲು ಕಾರಣವೇನು?

ಸುನೇತ್ರಾ ಡಿಸಿಎಂ ಆಗುವ ಈ ನಿರ್ಧಾರವನ್ನು ಎನ್ಸಿಪಿ (ಅಜಿತ್ ಬಣ) ಕಾರ್ಯಾಧ್ಯಕ್ಷ ಪ್ರಫುಲ್ ಪಟೇಲ್ (ಕಾರ್ಯನಿರ್ವಾಹಕ ಅಧ್ಯಕ್ಷರು) ಮತ್ತು ಪಕ್ಷದ ರಾಜ್ಯಾಧ್ಯಕ್ಷ ಸುನಿಲ್ ತತ್ಕರೆ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.

36
ದಿಢೀರ್ ಪ್ರಮಾಣವಚನಕ್ಕೆ ಕಾರಣಗಳೇನು ಎನ್ನುವುದನ್ನು ನೋಡುವುದಾರೇ,

ಕಾರಣ-1

ವಿಲೀನವಾದರೆ ಶರದ್ ಪವಾರ್‌ ಬಣದ ಪ್ರಭಾವ ಹೆಚ್ಚಾಗಬಹುದು. ತಮ್ಮ ಪ್ರಭಾವ ಹೊರಟು ಹೋಗಬಹುದು ಎಂಬ ಆತಂಕ ಅಜಿತ್‌ ಬಣದ ನಾಯಕರಲ್ಲಿತ್ತು. ಹೀಗಾಗಿ ಸುನೇತ್ರಾ ಅವರನ್ನು ಡಿಸಿಎಂ ಮಾಡಲು ಅಜಿತ್‌ ಆಪ್ತರು ಮನವೊಲಿಸಿದರು.

46
ಕಾರಣ-2

ಶರದ್ ಪವಾರ್ ಇತ್ತೀಚೆಗೆ ಯಾವುದೇ ಸಂದರ್ಭದಲ್ಲೂ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದಿದ್ದರು. ಹೀಗಾಗಿ ಏಕೀಕೃತ ಎನ್‌ಸಿಪಿ, ಸರ್ಕಾರದಿಂದ ಹೊರಬಂದರೆ ತಾವು ಅಧಿಕಾರ ಕಳೆದುಕೊಳ್ಳಬೇಕಾಗುತ್ತದೆ ಎಂದು ಅಜಿತ್‌ ಆಪ್ತರು ಆತಂಕಗೊಂಡಿದ್ದರು

56
ಕಾರಣ-3

ಗಮನಾರ್ಹವಾಗಿ, ಮಹಾಯುತಿಗೆ ಸೇರುವ ಮೊದಲು, ಅಜಿತ್‌ ಬಣದ ನಾಯಕರ ಮೇಲೆ ಅನೇಕರು ಸಿಬಿಐ, ಇಡಿ ಮತ್ತು ಭ್ರಷ್ಟಾಚಾರ ನಿಗ್ರಹ ದಳದಂತಹ ಸಂಸ್ಥೆಗಳ ಕೇಸು ಇದ್ದವು. ಸರ್ಕಾರ ಸೇರಿದ ನಂತರ ಇವುಗಳಿಗೆ ಬ್ರೇಕ್‌ ಬಿದ್ದಿದೆ. ಏಕೀಕೃತ ಎನ್‌ಸಿಪಿ ಮಹಾಯುತಿಯಿಂದ ಹೊರಬಂದರೆ, ತಮ್ಮ ಕಾನೂನು ತೊಂದರೆಗಳು ಮತ್ತೆ ಉದ್ಭವಿಸಬಹುದು ಎಂಬ ಭಯ ಅಜಿತ್‌ ಆಪ್ತರಲ್ಲಿದೆ.

66
ಕಾರಣ-4

ಸುನೇತ್ರಾ ಡಿಸಿಎಂ ಆದರೆ ಸರ್ಕಾರದ ಮೇಲೆ ಅಜಿತ್‌ ಹೊಂದಿದ್ದ ಹಿಡಿತವೇ ಈಗಲೂ ಮುಂದುವರಿಯುತ್ತದೆ. ತಮ್ಮದೇ ಆದ ಪ್ರಾಬಲ್ಯವನ್ನು ಕಾಯ್ದುಕೊಳ್ಳುವುದು ಸುಲಭವಾಗುತ್ತದೆ ಎಂದು ಅಜಿತ್‌ ಬಣದ ನಾಯಕರ ನಂಬಿಕೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories