ಭಾರತದ ಮೊದಲ ಪ್ರಧಾನಿ ಯಾರು? ಬಿಜೆಪಿ ಅಭ್ಯರ್ಥಿ ನಟಿ, ಕಂಗನಾ ಉತ್ತರಕ್ಕೆ ಶಾಕ್ ಆದ ನೆಟ್ಟಿಗರು

First Published | Apr 6, 2024, 1:01 PM IST

ಹಿಮಾಚಲ ಪ್ರದೇಶದ ಮಂಡಿಯಿಂದ ಲೋಕಸಭಾ ಚುನಾವಣೆಗೆ ಕಣಕ್ಕೆ ಇಳಿದಿರುವ ಬಾಲಿವುಡ್ ನಟಿ ವಿವಾದಾತ್ಮಕ ಹೇಳಿಕೆಗಳಿಂದಲೇ ಹೆಸರಾಗಿರುವ ಕಂಗನಾ ರಣಾವತ್ ಅವರು ಈಗ ಮತ್ತೊಂದು ಕಾರಣಕ್ಕೆ ಸುದ್ದಿಯಲ್ಲಿದ್ದಾರೆ.

ಹಿಮಾಚಲ ಪ್ರದೇಶದ ಮಂಡಿಯಿಂದ ಲೋಕಸಭಾ ಚುನಾವಣೆಗೆ ಕಣಕ್ಕೆ ಇಳಿದಿರುವ ಬಾಲಿವುಡ್ ನಟಿ ವಿವಾದಾತ್ಮಕ ಹೇಳಿಕೆಗಳಿಂದಲೇ ಹೆಸರಾಗಿರುವ ಕಂಗನಾ ರಣಾವತ್ ಅವರು ಈಗ ಮತ್ತೊಂದು ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. 

ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಕಂಗನಾ, ಭಾರತದ ಮೊದಲ ಪ್ರಧಾನ ಮಂತ್ರಿ ಸುಭಾಷ್ ಚಂದ್ರ ಬೋಸ್ ಎಂದು ಹೇಳುವ ಮೂಲಕ ನೋಡುಗರನ್ನು ಅಚ್ಚರಿಗೆ ತಳ್ಳಿದ್ದಾರೆ. 

Tap to resize

ನಟಿಯಾಗಿದ್ದು, ಪ್ರಸ್ತುತ ರಾಜಕಾರಣಿಯಾಗಿ ಬದಲಾಗಿರುವ  ಪದ್ಮಶ್ರೀ ಪುರಸ್ಕೃತ ಕಂಗನಾ ರಣಾವತ್, ಮಂಡಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

ಜೂನ್ 1 ರಂದು 7ನೇ ಹಂತದಲ್ಲಿ ಇಲ್ಲಿ ಚುನಾವಣೆ ನಡೆಯಲಿದ್ದು, ಜೂನ್ 4 ರಂದು ಫಲಿತಾಂಶ ಪ್ರಕಟವಾಗಲಿದೆ. ಈ ಮಧ್ಯೆ ಕಂಗನಾ ಅವರು ಭಾರತದ ಮೊದಲ ಪ್ರಧಾನಿ ಸುಭಾಷ್ ಚಂದ್ರ ಬೋಸ್ ಎಂದು ಹೇಳುತ್ತಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. 

'ಮೊದಲು ಇದನ್ನು ಸ್ಪಷ್ಟಪಡಿಸಲು ನನಗೆ ಬಿಡಿ, ನಾವು ಸ್ವಾತಂತ್ರ್ಯ ಪಡೆದಾಗ ಭಾರತದ ಮೊದಲ ಪ್ರಧಾನಿ ಸುಭಾಷ್ ಚಂದ್ರ ಬೋಸ್ ಎಲ್ಲಿ ಹೋಗಿದ್ದರು?' ಎಂದು ಕಂಗನಾ ಕೇಳಿದ್ದಾರೆ.

ಈ ವೇಳೆ ಸಂದರ್ಶನ ಮಾಡುತ್ತಿದ್ದವರು ಮಧ್ಯ ಪ್ರವೇಶಿಸಿ ಆಕೆಯನ್ನು ಸರಿಪಡಿಸಲು ಪ್ರಯತ್ನಿಸಿದರೂ ಅವರಿಗೆ ಮಾತನಾಡಲು ಅವಕಾಶ ನೀಡದೇ ಮುಂದುವರೆಸಿದ ಕಂಗನಾ 'ಇಲ್ಲ, ದಯವಿಟ್ಟು ಇದನ್ನು ಇಂದು ಸ್ಪಷ್ಟಪಡಿಸಿ. ಅವರು ಎಲ್ಲಿಗೆ ಹೋಗಿದ್ದರು' ಎಂದು ಪ್ರಶ್ನಿಸಿದ್ದಾರೆ.

ಈ ವೀಡಿಯೋ ವೈರಲ್ ಆಗಿದ್ದು, ಕೆಲವರು ಕಂಗನಾರನ್ನ ಬೆಂಬಲಿಸಿ ಅವಿಭಜಿತ ಭಾರತದ ಮೊದಲ ಪ್ರಧಾನಿ ಸುಭಾಷ್ ಚಂದ್ರ ಬೋಸ್ ಆಗಿದ್ದರು ಎಂದಿದ್ದಾರೆ. ಆದರೆ ಬಹುತೇಕರು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಕಂಗನಾ ಅಜ್ಞಾನಕ್ಕೆ ಬೆಚ್ಚಿಬಿದ್ದಿದ್ದಾರೆ. 

ಆಕೆ ಎಲ್ಲಿ ಓದಿದ್ದಾಳೆ ಎಂದು ಒಬ್ಬರು ಪ್ರಶ್ನೆ ಮಾಡಿದ್ದಾರೆ.  ಮಂಡಿ ಲೋಕಸಭಾ ಕ್ಷೇತ್ರದ ಜನ ಯೋಚಿಸಿ ಮತ ಚಲಾಯಿಸುವಂತೆ ನಾನು ದೇವರಲ್ಲಿ ಪ್ರಾರ್ಥಿಸುವೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 

ಅಂದಹಾಗೆ ಸ್ವಾತಂತ್ರ ಹೋರಾಟಗಾರ, ಅಪ್ರತಿಮ ದೇಶ ಭಕ್ತ ಸುಭಾಷ್ ಚಂದ್ರ ಬೋಸ್ ಅವರು ಭಾರತಕ್ಕೆ ಸ್ವಾತಂತ್ರ ಬರುವುದಕ್ಕೂ ಮೊದಲೇ 1945ರ ಆಗಸ್ಟ್ 18 ರಂದು ಸಾವನ್ನಪ್ಪಿದ್ದಾರೆ. ಭಾರತಕ್ಕೆ ಸ್ವಾತಂತ್ರ ಸಿಕ್ಕಿದ್ದು, 1947ರ ಆಗಸ್ಟ್ 15 ರಂದು ಹಾಗೂ 1951ರಲ್ಲಿ ಜವಾಹರ್ ಲಾಲ್ ನೆಹರೂ ಅವರು ಭಾರತದ ಮೊದಲ ಪ್ರಧಾನ ಮಂತ್ರಿಯಾಗಿ ಆಯ್ಕೆಯಾದರು ಹಾಗೂ 1964ರವರೆಗೆ ಪ್ರಧಾನಿಯಾಗಿ ಕಾರ್ಯ ನಿರ್ವಹಿಸಿದ್ದರು.

Latest Videos

click me!