ಲೋಕಸಭಾ ಚುನಾವಣಾ ಪ್ರಚಾರಕ್ಕೆ ಧುಮುಕಿದ ಡಿಕೆಶಿ ಪತ್ನಿ ಉಷಾ! ಮೈದುನ ಡಿಕೆ ಸುರೇಶ್ ಪರ ಮತಯಾಚನೆ

Published : Apr 05, 2024, 10:44 PM ISTUpdated : Apr 10, 2024, 03:12 PM IST

ಕರ್ನಾಟಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಅವರ ಪತ್ನಿ ಉಷಾ ಶಿವಕುಮಾರ ಇಂದು ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಮೈದುನ ಡಿಕೆ ಸುರೇಶ್ ಪರವಾಗಿ ಮತಯಾಚನೆ ಮಾಡಿದರು.

PREV
15
ಲೋಕಸಭಾ ಚುನಾವಣಾ ಪ್ರಚಾರಕ್ಕೆ ಧುಮುಕಿದ ಡಿಕೆಶಿ ಪತ್ನಿ ಉಷಾ! ಮೈದುನ ಡಿಕೆ ಸುರೇಶ್ ಪರ ಮತಯಾಚನೆ

ಲೋಕಸಭಾ ಚುನಾವಣೆ ಇನ್ನೇನು ಕೆಲವೇ ದಿನಗಳು ಉಳಿದಿರುವ ಹಿನ್ನೆಲೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಪತ್ನಿ ಉಷಾ ಶಿವಕುಮಾರ್ ಸಹ ಮೈದುನನ ಪರ ಪ್ರಚಾರದ ಅಖಾಡಕ್ಕೆ ಇಳಿದಿದ್ದಾರೆ. 

25

ಇಂದು ರಾಜರಾಜೇಶ್ವರಿ ನಗರದಿಂದ ಪ್ರಚಾರ ಶುರು ಮಾಡಿದ್ದಾರೆ. ಜೆಪಿ ಪಾರ್ಕ್ ಮತ್ತು ಸುಂದರ್ ನಗರದಲ್ಲಿ ಮೈದುನ, ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಡಿ ಕೆ ಸುರೇಶ್ ಅವರ ಪರವಾಗಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು.

35

ಪ್ರಚಾರಕ್ಕೆ ಮೊದಲು ರಾಜರಾಜೇಶ್ವರಿ ನಗರದ ಸುಬ್ರಮಣ್ಯ ದೇಗುಲದಲ್ಲಿ ಶುಕ್ರವಾರ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಬೆಂಬಲಿಗರೊಂದಿಗೆ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಚಾರ ಆರಂಭಿಸಿದರು. 

45

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಈ ಬಾರಿ ಭಾರೀ ಪೈಪೋಟಿಯೇ ನಡೆಯಲಿದೆ ಕಾರಣ ಮೈತ್ರಿ ಅಭ್ಯರ್ಥಿಯಾಗಿ ಡಾ ಮಂಜುನಾಥ ಸ್ಪರ್ಧಿಸಿದ್ದಾರೆ. ಹೀಗಾಗಿ ಡಿಕೆ ಸುರೇಶ್ ಗೆಲ್ಲಲೇಬೇಕಾಗಿದೆ. ಅದಕ್ಕಾಗಿ ಡಿಸಿಎಂ ಶಿವಕುಮಾರ ಅವರ ಪತ್ನಿಯೇ ಪ್ರಚಾರಕ್ಕಿಳಿದಿದ್ದಾರೆ. ಗೆಲುವಿಗಾಗಿ ದೇವರಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

55

ರಣ ಬಿಸಲಿನ ನಡುವೆ ಬೆಂಬಲಿಗರೊಂದಿಗೆ ದಣಿವರಿಯದೆ ಮನೆ ಮನೆಗೆ ತೆರಳಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಮೈದುನನಿಗೆ ಮತ ನೀಡುವಂತೆ ಮತದಾರರಲ್ಲಿ ಕೈಮುಗಿದು ಮನವಿ ಮಾಡಿದರು  ಜೆಪಿ ಪಾರ್ಕ್ ಮತ್ತು ಸುಂದರ್ ನಗರದಲ್ಲಿ ಮೈದುನ, ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಡಿ ಕೆ ಸುರೇಶ್ ಅವರ ಪರವಾಗಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು.

Read more Photos on
click me!

Recommended Stories