ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ರಾಜೀನಾಮೆ ಸಲ್ಲಿಸಲಿದ್ದು, ಈ ಬೆಳವಣಿಗೆಯನ್ನು ಅವರು ಈ ಹಿಂದೆ ರಾಘವೇಂದ್ರ ಸ್ವಾಮಿಗಳ ಫೋಟೋವನ್ನು ತಿರಸ್ಕರಿಸಿದ ಘಟನೆಗೆ ಹೋಲಿಸಲಾಗುತ್ತಿದೆ. ರಾಯರನ್ನು ಅವಮಾನಿಸಿದವರಿಗೆ ಅಧಿಕಾರ ಯೋಗ ಕೊನೆಯಾಗುತ್ತದೆ ಎಂದು ನಟ ಜಗ್ಗೇಶ್ ಅಂದು ನುಡಿದಿದ್ದ ಭವಿಷ್ಯ ವೈರಲ್ ಆಗಿದೆ.
ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರಿಗೆ ಇರುವುದು ಇನ್ನು ಕೆಲವೇ ಗಂಟೆಗಳು. ಆ ಬಳಿಕ ಅವರು ಮಾಜಿ ಆಗಲಿದ್ದಾರೆ ಎನ್ನಲಾಗುತ್ತಿದೆ. ಇಂದು ಅರ್ಥಾತ್ ಮೇ 28ರ ಗುರುವಾರ ಮಧ್ಯಾಹ್ನ 3 ಗಂಟೆಗೆ ಅವರು ರಾಜೀನಾಮೆ ಸಲ್ಲಿಸುವುದು ನಿಚ್ಚಳವಾಗಿದೆ. ಕೊನೆಯವರೆಗೂ ಇದು ಸಸ್ಪೆನ್ಸ್ ಚಿತ್ರದ ರೀತಿಯಲ್ಲಿಯೇ ಮುಂದುವರೆಯುತ್ತಿದೆ.
26
ಸಿದ್ದರಾಮಯ್ಯಗೆ ಶಾಪ?
ಇದರ ನಡುವೆಯೇ, ಇದೇ ವರ್ಷ ಜನವರಿಯಲ್ಲಿ ನಡೆದ ಘಟನೆಯೊಂದು ಇದೀಗ ಮತ್ತೆ ವೈರಲ್ ಆಗುತ್ತಿದೆ. ಆ ಘಟನೆಯೇ ಗುರುವಾರದ ಶಾಪವಾಗಿ ಸಿದ್ದರಾಮಯ್ಯ ಅವರು ಅಧಿಕಾರ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ ಎನ್ನ್ಉವ ಮಾತುಗಳು ಜಾಲತಾಣಗಳಲ್ಲಿ ಕೇಳಿಬರುತ್ತಿವೆ.
36
ಸಾರ್ವಜನಿಕರ ಅಹವಾಲು
ಅಷ್ಟಕ್ಕೂ ಅಂದು ಸಿದ್ದರಾಮಯ್ಯನವರು ಸಿಎಂ ನಿವಾಸದಿಂದ ಹೊರಗೆ ಬರುತ್ತಿದ್ದಂತೆ ಕಾರಿನಲ್ಲಿ ಕುಳಿತುಕೊಂಡು ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದ್ದರು. ಈ ಮಧ್ಯೆ ವ್ಯಕ್ತಿಯೊಬ್ಬರು ರಾಘವೇಂದ್ರ ಸ್ವಾಮಿಗಳ ಫೋಟೋ ನೀಡುತ್ತಾರೆ. ಆದ್ರೆ ಮುಖ್ಯಮಂತ್ರಿಗಳು ಕೋಪದಿಂದಲೇ ರಾಘವೇಂದ್ರ ಸ್ವಾಮಿಗಳ ಫೋಟೋ ಪಡೆದುಕೊಳ್ಳದೇ ಹಿಂದಿರುಗಿಸಿದ್ದರು.
ಇದೇ ವೇಳೆ ಮತ್ತೋರ್ವ ವ್ಯಕ್ತಿ ನೀಡುವ ಚಾಣಕ್ಯ ನೀತಿ ಹೆಸರಿನ ಪುಸ್ತಕವನ್ನು ಸಿಎಂ ಸಿದ್ದರಾಮಯ್ಯ ತೆಗೆದುಕೊಳ್ಳುತ್ತಾರೆ. ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಬಳಿಕ ಮುಖ್ಯಮಂತ್ರಿಗಳು ತೆರಳಿದ್ದರು. ಇದಕ್ಕೆ ತೀವ್ರವಾಗಿ ಅಸಮಾಧಾನ ವ್ಯಕ್ತಪಡಿಸಿದ್ದ ನಟ, ಸಂಸದ, ರಾಯರ ಭಕ್ತ ಜಗ್ಗೇಶ್ ಅವರು, ರಾಯರನ್ನು ಅಪಮಾನ ಮಾಡಿದ ಯಾರು ಉದ್ಧಾರವಾದ ಇತಿಹಾಸವಿಲ್ಲ ಎಂದಿದ್ದರು.
56
ಇಂಥ ವ್ಯಕ್ತಿ ಇದೇ ಮೊದಲು ಕಂಡಿದ್ದು
ರಾಯರ ಸಣ್ಣ ಕೃಪೆ ನಮ್ಮ ಮೇಲೆ ಬೀಳಲಿ ಎಂದು ಕೋಟ್ಯಂತರ ಭಕ್ತವೃಂದ ಜಪ ತಪ ವೈರಾಗ್ಯ ಉಪವಾಸದಿಂದ ಸೇವೆ ಮಾಡುತ್ತಾರೆ. ಭಕ್ತಿಯಿಂದ ಬಂದದ್ದು ಹೀಗೆ ತಿರಸ್ಕರಿಸಿದ ಪ್ರಥಮ ವ್ಯಕ್ತಿಯನ್ನು ನಾನು ನನ್ನ ಬದುಕಲ್ಲಿ ಕಂಡಿದ್ದು, ರಾಯರಿದ್ದಾರೆ, ಎದ್ದು ಬರುತ್ತಾರೆ, ಯೋಗ ಕೊನೆಯಾಗುವ ದಿನಗಳು ಸಮೀಪಿಸಿವೆ ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದರು.
66
ಯೋಗ ಕೊನೆಯಾಗಲಿದೆ
ಭಕ್ತಿಯಿಂದ ರಾಯರ ಭಕ್ತರು ರಾಯರ ವಿಗ್ರಹ ಅಥವ ಮೃತ್ತಿಗೆ ಯಾರಿಗಾದರು ನೀಡಿದಾಗ ಭಕ್ತಿಯಿಂದ ಪಡೆಯಬೇಕು. ಒಂದು ವೇಳೆ ಅದನ್ನು ತಿರಸ್ಕರಿಸಿದರೆ ಅಂತಹ ವ್ಯಕ್ತಿಗೆ ಯೋಗ ಕೊನೆ ಆಗುವ ದಿನಗಳು ಸಮೀಪಿಸಿದೆ ಎಂದರ್ಥ ಎಂದು ಎಕ್ಸ್ ಖಾತೆ ಮೂಲಕ ಜಗ್ಗೇಶ್ ವಿಡಿಯೋ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅದೀಗ ನಿಜವಾಗಿದೆ, ರಾಯರ ದಿನವಾಗಿರುವ ಗುರುವಾರವೇ ಮನಸ್ಸಿಲ್ಲದ ಮನಸ್ಸಿನಿಂದ ರಾಜೀನಾಮೆ ಮಾಡಬೇಕಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ!
ರಾಯರನ್ನ ಅಪಮಾನ ಮಾಡಿದ ಯಾರು ಉದ್ಧಾರ ಆದ ಇತಿಹಾಸವಿಲ್ಲಾ! ರಾಯರ ಸಣ್ಣ ಕೃಪೆ ನಮ್ಮಮೇಲೆ ಬೀಳಲಿ ಎಂದು ಕೋಟ್ಯಂತರ ಭಕ್ತವೃಂದ ಜಪತಪವೈರಾಗ್ಯ ಉಪವಾಸದಿಂದ ಸೇವೆಮಾಡುತ್ತಾರೆ, ಭಕ್ತಿಯಿಂದ ಬಂದದ್ದು ಹೀಗೆ ತಿರಸ್ಕರಿಸಿದ ಪ್ರಥಮ ವ್ಯೆಕ್ತಿಯನ್ನು ನಾನು ನನ್ನ ಬದುಕಲ್ಲಿ ಕಂಡದ್ದು ರಾಯರಿದ್ದಾರೆ🙏 ಎದ್ದುಬರುತ್ತಾರೆ🙏 ಕಾಯಬೇಕು..!! ಜೈಹಿಂದ್🙏 pic.twitter.com/WXdSsaZVvK
— ನವರಸನಾಯಕ ಜಗ್ಗೇಶ್ (@Jaggesh2) January 20, 2026
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.