ಬಿಜೆಪಿಯತ್ತ ಸಚಿನ್ ಪೈಲಟ್: ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರ ಪತನ?

First Published | Jul 12, 2020, 3:24 PM IST

ಮಧ್ಯಪ್ರದೇಶದ ಬೆನ್ನಲ್ಲೇ ಈಗ ರಾಜಸ್ಥಾನದಲ್ಲಿ ಇಬ್ಬರು ಕಾಂಗ್ರೆಸ್ ದಿಗ್ಗಜ ನಾಯಕರ ನಡುವೆ ಭಿನ್ನಮತ ಸ್ಫೋಟಗೊಂಡಿದೆ. ರಾಜಸ್ಥಾನ ಮುಖ್ಯಮಂತ್ರಿ ಅಅಶೋಕ್ ಗೆಹ್ಲೋಟ್ ಹಾಗೂ ಸಚಿನ್ ಪೈಲಟ್ ನಡುವೆ ಎಲ್ಲವೂ ಸರಿಯಾಗಿಲ್ಲ ಎಂಬುವುದು ಸದ್ಯ ನಡೆಯುತ್ತಿರುವ ಬೆಳವಣಿಗೆಯಲ್ಲಿ ಬಯಲಾಗಿದೆ. ಅಲ್ಲದೇ ಇವರು ಸದ್ಯ ಕಾಂಗ್ರೆಸ್‌ ಬಿಟ್ಟು ಬಿಜೆಪಿಗೆ ಸೇರುತ್ತಾರೆಂಬ ಮಾತುಗಳೂ ಜೋರಾಗಿವೆ. ಅಷ್ಟಕ್ಕೂ ರಾಜಸ್ಥಾನದಲ್ಇ ನಡೆಯುತ್ತಿರುವುದೇನು? ಈ ಭಿನ್ನಮತಕ್ಕೇನು ಕಾರಣ? ಇಲ್ಲಿದೆ ವಿವರ

ಈ ಹಿಂದೆ ಮಧ್ಯಪ್ರದೇಶದಲ್ಲಿ ನಡೆದಂತೆಯೇ ರಾಜಸ್ಥಾನದಲ್ಲೂ ಮುಖ್ಯಮಂತ್ರಿ ಗೆಹ್ಲೋಟ್ ಹಾಗೂ ಪೈಲಟ್ ನಡುವೆ ಅಸಮಾಧಾನ ಸ್ಪೋಟಗೊಂಡಿದೆ.
ರಾಜಸ್ಥಾನ ಕಾಂಗ್ರೆಸ್‌ ಪಕ್ಷದ ಪ್ರಮುಖ ನಾಯಕ ಹಾಗೂ ಡಿಸಿಎಂ ಆಗಿರುವ ಪೈಲಟ್ ಕೆಲ ಶಾಸಕರೊಂದಿಗೆ ಸದ್ಯ ಈ ವಿಚಾರವಾಗಿ ದೆಹಲಿ ತಲುಪಿದ್ದು, ಸೋನಿಯಾರನ್ನು ಭೇಟಿಯಾಗಲಿದ್ದಾರೆನ್ನಲಾಗಿದೆ.
Tap to resize

ಪೈಲಟ್ ಜೊತೆ ಸುಮಾರು ಹದಿನೇಳು ಶಾಸಕರೂ ದೆಹಲಿಗೆ ತೆರಳಿದ್ದಾರೆನ್ನಲಾಗಿದೆ.
ಇನ್ನು ಸಿಎಂ ಗೆಹ್ಲೋಟ್ ಹಾಗೂ ಪೈಲಟ್ ನಡುವಿನ ಭಿನ್ನಾಭಿಪ್ರಾಯ ಶಮನಗೊಳಿಸಲು ಕಾಂಗ್ರೆಸ್ ನಾಯಕರು ವಿಫಲರಾದರೆ ಪೈಲಟ್ ಬಿಜೆಪಿ ಸೇರಲಿದ್ದಾರೆನ್ನಲಾಗಿದೆ.
ಇನ್ನು ಶನಿವಾರವಷ್ಟೇ ಅಶೋಕ್ ಗೆಹ್ಲೋಟ್ ಬಿಜೆಪಿ ವಿರುದ್ಧ ಕಿಡಿ ಕಾರುತ್ತಾ ಸರ್ಕಾರ ಅಸ್ಥಿತಗೊಳಿಸಲು ಯತ್ನಿಸುತ್ತಿದ್ದಾರೆಂಬ ಆರೋಪ ಮಾಡಿದ್ದರು. ಹಾಗೂ ತಮ್ಮ ಶಾಸಕರ ಬಳಿ ಸಮರ್ಥನಾ ಪತ್ರ ನೀಡುವಂತೆ ಹೇಳಿದ್ದರು. ಆದರೆ ಸಿಎಂ ಆದೇಶ ಪೂರೈಸುವ ಮೊದಲೇ ಪೈಲಟ್ ಸೇರಿ ಅನೇಕ ನಾಯಕರು ದೆಹಲಿ ತಲುಪಿದ್ದಾರೆ.
ರಾಜಸ್ಥಾನ ಕಾಂಗ್ರೆಸ್ ಪಕ್ಷದೊಳಗೇ ನಾಯಕರನ್ನು ಒಡಕು ಮೂಡಿದೆ. ಸಿಎಂ ಹಾಗೂ ಡಿಸಿಎಂ ಇಬಬ್ಬರೂ ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗುತ್ತಿರುವುದೇ ಇದಕ್ಕೆ ಕಾರಣ ಎಂಬುವುದು ರಾಜಕೀಯ ವಿಶ್ಲೇಷಕರ ಮಾತಾಗಿದೆ.
ಮುಖ್ಯಮಂತ್ರಿ ಗೆಹ್ಲೋಟ್ ಬಿಜೆಪಿ ವಿರುದ್ಧ ಕಿಡಿ ಕಾರುತ್ತಾ ಕಾಂಗ್ರೆಸ್ ಹಾಗೂ ಪಕ್ಷೇತರ ಶಾಸಕರಿಗೆ ಆಮಿಷವೊಡ್ಡಿ ಸರ್ಕಾರ ಅಸ್ಥಿರಗೊಳಿಸುವ ಯತ್ನ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್‌ನಲ್ಲಿ ಹಿರಿಯ ಹಾಗೂ ಯುವ ನಾಯಕರ ನಡುವಿನ ಕಚ್ಚಾಟ ಇಂದು ನಿನ್ನೆಯದಲ್ಲ. ಈ ಹಿಂದೆ ಮಧ್ಯಪ್ರದೇಶದಲ್ಲೂ ಕಾಂಗ್ರೆಸ್‌ ನಾಯಕ ಕಮಲನಾಥ್‌ ಹಾಗೂ ಸಿಂಧಿಯಾ ನಡುವೆ ಭಿನ್ನಾಭಿಪ್ರಾಯ ಮೂಡಿತ್ತು.
ಸಿಂಧಿಯಾ ಹಾಗೂ ಕಮಲನಾಥ್‌ ನಡುವಿನ ಒಳಜಗಳ ಶಮನಗೊಳ್ಳದ ಹಿನ್ನೆಲೆ ಸಿಂಧಿಯಾ ರಾಜೀನಾಮೆ ಸಲ್ಲಿಸಿ ತಮ್ಮ ಬೆಂಬಲಿಗರೊಂದಿಗೆ ಬಿಜೆಪಿ ಪಕ್ಷವನ್ನು ಸೇರಿದ್ದರು. ಇದರಿಂದ ಕಾಂಗ್ರೆಸ್ ಸರ್ಕಾರ ಮುರಿದು ಬಿದ್ದು, ಬಿಜೆಪಿ ಬಹುಮತ ಸಾಬೀತುಪಡಿಸಿತ್ತು. ಬಳಿಕ ಬಿಜೆಪಿಯ ಶಿವರಾಜ್ ಸಿಂಗ್ ಚೌಹಾಣ್ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದರು.

Latest Videos

click me!