ಶೃಂಗೇರಿ ಆನೆಗೆ ಸೇಬು ತಿನ್ನಿಸಿದ ಪ್ರಿಯಾಂಕ ಗಾಂಧಿ: ಕೆಲವು ವಿಶೇಷ ಫೋಟೋಗಳು ಇಲ್ಲಿವೆ ನೋಡಿ.!

First Published | Apr 26, 2023, 5:47 PM IST

ಬೆಂಗಳೂರು (ಏ.26): ಕರ್ನಾಟಕ ವಿಧಾನಸಭಾ ಚುನಾವಣಾ ಪ್ರಚಾರ ಕಾರ್ಯಕ್ಕೆ ಅಖಿಲ ಭಾರತ ಕಾಂಗ್ರೆಸ್‌ ಅಮಿತಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಆಗಮಿಸಿದ್ದು, ಬುಧವಾರ ಶೃಂಗೇರಿ ಶಾರದಾ ದೇವಿ ದರ್ಶನ ಪಡೆದು, ಆನೆಗೆ ಸೇಬು ತಿನ್ನಿಸಿದರು. ರಾಜ್ಯದಲ್ಲಿ ಕಳೆದ 2 ದಿನಗಳಿಂದ ಪ್ರಿಯಾಂಕ ಗಾಂಧಿ ಕಾಣಿಸಿಕೊಂಡ ರೀತಿ ನೋಡಿದರೆ ನಿಜಕ್ಕೂ ಮಾಜಿ ಪ್ರಧಾನಮಂತ್ರಿ ಇಂದಿರಾಗಾಂಧಿ ನೆನಪಾಗುವುದರಲ್ಲಿ ಅನುಮಾನವೇ ಇಲ್ಲ. ಇನ್ನು ಪ್ರಿಯಾಂಕ ಗಾಂಧಿ ಅವರ ಕೆಲವು ವಿಶೇಷ ಫೋಟೋಗಳು ಇಲ್ಲಿವೆ ನೋಡಿ.

ಕಾಂಗ್ರೆಸ್‌ ವರಿಷ್ಠೆ ಪ್ರಿಯಾಂಕ ಗಾಂಧಿ ವಾದ್ರಾ ಅವರು ಬುಧವಾರ ಶೃಂಗೇರಿ ಶಾರದಾಪೀಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದುಕೊಂಡರು. 

ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳ ಪರ ಪ್ರಚಾರ ಮಾಡಲು ಆಗಮಿಸಿದ ಪ್ರಿಯಾಂಕ ಗಾಂಧಿ ದೇವರ ಮೊರೆ ಹೋಗಿದ್ದಾರೆ.

Tap to resize

ರಾಜ್ಯಕ್ಕೆ ಚುನಾವಣಾ ಪ್ರಚಾರ ಕಾರ್ಯಕ್ಕೆ ಆಗಮಿಸಿದ ಪ್ರಿಯಾಂಕ ಗಾಂಧಿ ವಾದ್ರಾ ಅವರು ಶೃಂಗೇರಿ ಶಾರದಾಪೀಠಕ್ಕೆ ಭೇಟಿ ನೀಡಿ, ಆನೆಗೆ ಸೇಬು ತಿನ್ನಿಸಿದರು. 

ಐತಿಹಾಸಿಕ ಪ್ರಸಿದ್ಧ ಶ್ರೀ ಶೃಂಗೇರಿ ಶಾರದಾಪೀಠಕ್ಕೆ ಭೇಟಿ ನೀಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ದೇವರಿಗೆ ನಮಿಸಿದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಮೈಸೂರಿನ ಪ್ರಸಿದ್ಧ ಮೈಲಾರಿ ಹೋಟೆಲ್‌ನಲ್ಲಿ ದೋಸೆ ಸವಿದು ಮಕ್ಕಳ ಜೊತೆ ಸಂತಸ ಹಂಚಿಕೊಂಡರು. ಈ ವೇಳೆ ರಣದೀಪ್‌ ಸಿಂಗ್ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಡಿಕೆ. ಶಿವಕುಮಾರ್ ಇದ್ದರು.

ಚಿತ್ರದುರ್ಗ ತಾಲೂಕಿನ ಹಿರಿಯೂರಿನಲ್ಲಿ ಪ್ರಿಯಾಂಕ ಗಾಂಧಿ ರೋಡ್‌ ಶೋನಲ್ಲಿ ಭಾಗಿಯಾಗುವ ಮುನ್ನ ಕಾಂಗ್ರೆಸ್ ಕಾರ್ಯಕರ್ತ ಕುರಿಮರಿಯನ್ನು ಕೊಡುಗೆಯಾಗಿ ನೀಡಿದನು.

ನಾಡಿದ ಧಾರ್ಮಿಕ ಕೇಂದ್ರವಾದ ಶೃಂಗೇರಿ ಶಾರದಾ ದೇವಾಲಯದಲ್ಲಿ ಭಕ್ತಿಪೂರ್ವಕವಾಗಿ ಪ್ರದಕ್ಷಿಣೆ ಹಾಕುವ ಮೂಲಕ ಕಾಂಗ್ರೆಸ್‌ ಗೆಲುವಿಗೆ ಬೇಡಿಕೊಂಡರು.

ಮೈಸೂರು ಜಿಲ್ಲೆಯ ಕೃಷ್ಣರಾಜನಗರ ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಅವರನ್ನು ಅಪಾರ ಜನಸ್ತೋಮ ಆತ್ಮೀಯವಾಗಿ ಸ್ವಾಗತಿಸಿತು. 

ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರಿನ ಪ್ರಸಿದ್ಧ ಮೈಲಾರಿ ಹೋಟೆಲ್‌ನಲ್ಲಿ ಕಾಂಗ್ರೆಸ್‌ ವಕ್ತಾರೆ ಪ್ರಿಯಾಂಕ ಗಾಂಧಿ ತಾವೇ ಸ್ವತಃ ಅಡುಗೆ ಮನೆಗೆ ಹೋಗುಇ ದೋಸೆಯನ್ನು ತಯಾರಿಸಿದರು.

Latest Videos

click me!