ಕಲಬುರಗಿ ಹೆಲಿಪ್ಯಾಡ್‌ನಲ್ಲಿ ಸರಳತೆ ಮೆರೆದು, ಮೋಡಿ ಮಾಡಿದ ಪ್ರಧಾನಿ

First Published May 2, 2023, 10:24 PM IST

ಕಲಬುರಗಿ (ಮೇ 2): ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಲಬುರಗಿ ನಗರದಲ್ಲಿ ರೋಡ್‌ ಶೋ ನಡೆಸಲು ಹೆಲಿಕಾಪ್ಟರ್‌ ಮೂಲಕ ಆಗಮಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಹೆಲಿಪ್ಯಾಡ್‌ನಲ್ಲಿ ಸ್ವಾಗತಿಸಲು ನಿಂತಿದ್ದ ಬಿಜೆಪಿ ಹಿರಿಯ ಕಾರ್ಯಕರ್ತ ಸೇವಲಾನಿ ಅವರಿಗೆ ಕೆಳಗಿದ್ದ ಊರುಗೋಲು ಎತ್ತಿಕೊಟ್ಟು ಸರಳತೆ ಮೆರೆದರು.

ಕಲಬುರಗಿ ಹೆಲಿಪ್ಯಾಡ್‌ನಲ್ಲಿ ನರೇಂದ್ರ ಮೋದಿ ಬಂದಾಗ ಕೈ ಯಲ್ಲಿದ್ದ ಊರುಗೋಲನ್ನು ಸೇವಲಾನಿ ಅವರು ಕೆಳಗಿಟ್ಟಿದ್ದರು. ಅದನ್ನು ಸ್ವತಃ ಪ್ರಧಾನಿ ಮೋದಿಯೇ ಎತ್ತಿ ಕೊಡಲು ಮುಂದಾದರು.

ಕಲಬುರಗಿ ಬಿಜೆಪಿ ಹಿರಿಯ ಕಾರ್ಯಕರ್ತ ಸೇವಲಾನಿ ಅವರ ಊರುಗೋಲನ್ನು ಸ್ವತಃ ಮೇಲೆತ್ತಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಕುಂಟುತ್ತಾ ನಮಸ್ಕರಿಸಲು ನಿಂತುಕೊಂಡಿದ್ದ, ಸೇವಲಾನಿಗೆ ಕೊಟ್ಟರು.

ಬಿಜೆಪಿ ಹಿರಿಯ ಮುಖಂಡ ಸೇವಲಾನಿಗೆ ಊರುಗೋಲನ್ನು ಪಿಎಂ ಮೋದಿ ಎತ್ತಿ ಕೊಡಲು ಮುಂದಾದಾಗ ಕಲಬುರಗಿ ಮಹಾನಗರ ಪಾಲಿಕೆ ಮೇಯರ್‌ ಕೂಡ ಸಹಾಯ ಮಾಡಲು ಮುಂದಾದರು.

ಮೂಳೆ ಮುರಿದು ತೊಂದರೆಯಲ್ಲಿದ್ದೀರಿ, ನಿಮ್ಮ ದೇಹಕ್ಕೆ ಆಧಾರವಾಗಿರೋ ಊರುಗೋಲನ್ನು ಸರಿಯಾಗಿಟ್ಟುಕೊಳ್ಳುವಂತೆ ಮೋದಿ ಕಿವಿಮಾತು ಹೇಳಿದರು.

ಕಲಬುರಗಿ ಮಹಾನಗರದಲ್ಲಿ ಮಂಗಳವಾರ ನಡೆದ ರೋಡ್‌ ಶೋನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರತ್ತ ಕೈ ಬೀಸಿದರು.

ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಲಬುರಗಿ ನಗರದಲ್ಲಿ ರೋಡ್‌ ಶೋ ನಡೆಸಿದ ಮತದಾರರಿಗೆ ಕೈಮುಗಿದು ವಂದಿಸಿದರು.

ದೇಶದ ಪ್ರಧಾನಮಂತ್ರಿ ಹಾಗೂ ತಮ್ಮ ನೆಚ್ಚಿನ ನಾಯಕನನ್ನು ನೋಡಿ ಕಣ್ತುಂಬಿಕೊಂಡ ಸಾವಿರಾರು ಜನರು, ಮೋದಿ ಮೋದಿ ಮೋದಿ ಎಂಬ ಘೋಷಣೆ ಕೂಗಿದರು.

click me!