ದರ್ಶನ್​ ಸಿಎಂ, ನಾನು ಡಿಸಿಎಂ: ರೈಲು, ವಿಮಾನ ಹಿಡಿದು ಎಲ್ಲಾ ಫ್ರೀ: ಪವಿತ್ರಾ ಗೌಡ ಲಾಯರ್​ ಭರ್ಜರಿ ಆಫರ್ಸ್​

Published : May 17, 2026, 11:37 AM IST

ನಟ ದರ್ಶನ್ ರಾಜಕೀಯಕ್ಕೆ ಬರಬೇಕೆಂಬುದು ಅಭಿಮಾನಿಗಳ ಆಸೆಯಾಗಿದ್ದು, ತಮಿಳುನಾಡಿನ ನಟ ವಿಜಯ್​ರಂತೆ ಕರ್ನಾಟಕದಲ್ಲೂ ನಟನೊಬ್ಬ ಸಿಎಂ ಆಗಬೇಕೆಂದು ಬಯಸಿದ್ದಾರೆ. ಇದರ ನಡುವೆ, ಪವಿತ್ರಾ ಗೌಡರ ವಕೀಲ ಬಾಲನ್, 'ದರ್ಶನ್ ಸಿಎಂ ಆದರೆ ನಾನು ಡಿಸಿಎಂ' ಎಂದು ರಾಜಕೀಯ ಉಚಿತ ಕೊಡುಗೆಗಳನ್ನು ವ್ಯಂಗ್ಯವಾಡಿದ್ದಾರೆ. 

PREV
16
ದರ್ಶನ್​ ಕೇಸ್​

ಸದ್ಯ ದರ್ಶನ್​ ಅವರು ಸುಪ್ರೀಂಕೋರ್ಟ್​ ಆದೇಶದ ಮೇರೆಗೆ ಇನ್ನೊಂದು ವರ್ಷ ಜೈಲಿನಲ್ಲಿಯೇ ಇರಬೇಕಿದೆ. ಅವರ ಅಭಿಮಾನಿಗಳು ಅವರು ಹೊರಗೆ ಬರುವುದನ್ನೇ ಕಾಯುತ್ತಿದ್ದಾರೆ. ಇದಾಗಲೇ ಹೊರಗೆ ಬಂದ ಮೇಲೆ ದರ್ಶನ್​ ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರೆ ಎಂದು ಜ್ಯೋತಿಷಿಗಳು ಹೇಳಿದ್ದಾರೆ. ಇದರ ನಡುವೆಯೇ, ತಮಿಳುನಾಡಿನಲ್ಲಿ ನಟ ಜೋಸೆಫ್​ ವಿಜಯ್​ ಅವರಂತೆಯೇ ಕರ್ನಾಟಕದಲ್ಲಿಯೂ ನಟನೊಬ್ಬ ಸಿಎಂ ಆಗಬೇಕು ಎನ್ನುವುದು ದರ್ಶನ್​ ಫ್ಯಾನ್ಸ್ ಆಸೆ.

26
ದಳಪತಿ ವಿಜಯ್​ ಘೋಷಣೆ

ದಳಪತಿ ವಿಜಯ್ ಅವರು ಚುನಾವಣೆಗೂ ಮುನ್ನ ಮಾಡಿರುವ ಘೋಷಣೆಗಳು ಗೊತ್ತಿದ್ದದ್ದೇ. ಅದಕ್ಕೆ ಅವರು 140 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಬೇಕಿದೆ. ಜನರ ದುಡ್ಡನ್ನು ಮುಟ್ಟುವುದಿಲ್ಲ ಎಂದಿರುವ 700 ಕೋಟಿ ರೂಪಾಯಿಗಳ ಒಡೆದ ವಿಜಯ್​. 140 ಸಾವಿರ ಕೋಟಿ ಫ್ರೀಬೀಸ್​ ಎಲ್ಲಿಂದ ಕೊಡುತ್ತಾರೆ ಎನ್ನುವುದನ್ನು ಜನರು ಕಾತರದಿಂದ ಕಾಯುತ್ತಿದ್ದಾರೆ.

36
ಪವಿತ್ರಾ ಗೌಡ ಲಾಯನಾನು ಡಿಸಿಎಂರ್​

ಇದರ ನಡುವೆಯೇ ಸಂದರ್ಶನವೊಂದರಲ್ಲಿ ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್​ ಜೊತೆ ಜೈಲಿನಲ್ಲಿ ಇರುವ ನಟಿ ಪವಿತ್ರ ಗೌಡ (Pavitra Gowda) ಅವರ ಲಾಯರ್​ ಬಾಲನ್​ ಅವರು ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನ ಇದೀಗ ವೈರಲ್​ ಆಗುತ್ತಿದೆ. ಹೇಗೆ ಫ್ರೀಬೀಸ್​ ಹೇಳಿ ಜನರನ್ನು ಮರುಳು ಮಾಡಲಾಗುತ್ತಿದೆ ಎನ್ನುವ ಬಗ್ಗೆ ಅವರು ಹೀಗೆ ಟಾಂಗ್​ ಕೊಟ್ಟಿದ್ದಾರೆ. ​

46
ನಾನು ಡಿಸಿಎಂ

ದರ್ಶನ್​ ಅವರು ಸಿಎಂ ಆಗಿ ನಾನು ಡಿಸಿಎಂ ಆಗಬೇಕು. ಸದ್ಯ ನನ್ನ ಬಳಿ ಲೋಕಲ್​ ಕಾರು ಇದೆ. ಆದ್ರೆ ರೋಲ್ಸ್​ ರಾಯ್​ ಕಾರು ತೆಗೆದುಕೊಳ್ಳುವ ಆಸೆ ಇದೆ. ಒಂದು ಕೋಟಿ ರೂಪಾಯಿ ಮನೆ ಇದೆ. ಆದ್ರೆ 120 ಕೋಟಿ ರೂಪಾಯಿ ಮನೆ ಕಟ್ಟಿಸುವ ಆಸೆ ಇದೆ. ಕ್ಯಾರಾವಾನ್​ ಹತ್ತಿ ಭಾಷಣ ಮಾಡುವ ಆಸೆ ಇದೆ ಎಂದು ಮೊದಲಿಗೆ ಬಾಲನ್ ಅವರು ಹೇಳಿದ್ದಾರೆ.

56
ಗರ್ಲ್​ಫ್ರೆಂಡ್​ ಕರ್ಕೊಂಡು

ನಾನು ಗರ್ಲ್​ಫ್ರೆಂಡ್​ ಕರೆದುಕೊಂಡು, ಇನ್ನೊಂದು ಗರ್ಲ್​ಫ್ರೆಂಡ್​ ಮದುವೆಗೆ ಹೋಗುವ ಆಸೆ ಇದೆ. ಎಲ್ಲರಿಗೂ ಸುಳ್ಳು ಹೇಳಿ ಮಹಿಳೆಯರಿಗೆ ಎಂಟು ಗ್ರಾಂ ಚಿನ್ನ, ಮದುವೆಗೆ ಎರಡು ಲಕ್ಷ ರೂಪಾಯಿ ಕೊಡ್ತೇನೆ. ಬಸ್ಸು ಮಾತ್ರವಲ್ಲ, ರೈಲು, ವಿಮಾನ ಎಲ್ಲವೂ ಫ್ರೀ ಫ್ರೀ ಎಂದಿದ್ದಾರೆ ಲಾಯರ್​ ಬಾಲನ್​

66
ದರ್ಶನ್ ಫ್ಯಾನ್​

ರೈಲಿನಿಂದ ಹಿಡಿದು ಜೈಲಿನವರೆಗೂ ಫ್ರೀ. ನಾನು ದರ್ಶನ್​ ಫ್ಯಾನ್​. ನನಗೆ ಬೇಕು ವೆರೈಟಿ ವೆರೈಟಿ ಫ್ಯಾನ್ಸ್​, ಅದ್ಕೇ ಜನರಿಗೆ ಕೊಡ್ತೇನೆ ಲೋನ್​ ಎಂದೆಲ್ಲಾ ಹೇಳಿರುವ ವಿಡಿಯೋ ವೈರಲ್ ಆಗುತ್ತಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories