ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ರಾಜ್ಯಪಾಲರಿಗೆ ದೂರು ಕೊಟ್ಟ ನಂತರ ಇಬ್ಬರು ಮುಖಾಮುಖಿ ಭೇಟಿ ಆಗಿರಲಿಲ್ಲ. ಆದ್ರೆ, ಇದೀಗ ಸಿಎಂ ಮತ್ತು ಸಚಿವ ಈಶ್ವರಪ್ಪ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಆದ್ರೆ, ಅಕ್ಕಪಕ್ಕ ಕುಳಿತರೂ ಮಾತಿಲ್ಲ ಕಥೆಯಿಲ್ಲ.
ತಮ್ಮ ಇಲಾಖೆಯಲ್ಲಿ ಸಿಎಂ ಹಸ್ತಕ್ಷೇಪ ಮಾಡುತ್ತಿದ್ದಾರೆಂದು ರಾಜ್ಯಪಾಲರಿಗೆ ದೂರು ಸಲ್ಲಿಸಿದ ಬಳಿಕ ಮೊದಲ ಬಾರಿಗೆ ಒಂದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಇಬ್ಬರೂ ಅಕ್ಕಪಕ್ಕ ಇದ್ದರೂ ಪರಸ್ಪರ ಮಾತನಾಡಲಿಲ್ಲ. ಈ ವಿಚಾರವಾಗಿ ಸಿಎಂ ಬಿಎಸ್‍ವೈ, ಈಶ್ವರಪ್ಪ ಅವರ ಮುನಿಸು ಮುಂದುವರೆದೆ.
ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಬೆಳ್ಳೂಡಿ ಮಠದ ವಿದ್ಯಾರ್ಥಿನಿಲಯ ಉದ್ಘಾಟನೆ ಸಮಾರಂಭಕ್ಕೆ ಸಿಎಂ ಆಗಮಿಸಿದ್ದರೆ, ತಮ್ಮ ಪುತ್ರ ಕಾಂತೇಶ್ ಜತೆ ನೂತನ ಹೊರಬೀರದೇವರ ಪ್ರತಿಷ್ಠಾಪನೆ, ಮಹಾಕುಂಭಾಭಿಷೇಕ ಕಾರ್ಯಕ್ರಮಕ್ಕೆ ಈಶ್ವರಪ್ಪ ಆಗಮಿಸಿದ್ದರು. ನಂತರ ನಡೆದ ವೇದಿಕೆ ಕಾರ್ಯಕ್ರಮದ ಒಂದೇ ವೇದಿಕೆಯಲ್ಲಿ ಸಿಎಂ ಹಾಗೂ ಈಶ್ವರಪ್ಪ ಅಕ್ಕಪಕ್ಕ ಕುಳಿತಿದ್ದರಾದರೂ ಮುಖಕೊಟ್ಟು ಮಾತನಾಡಲಿಲ್ಲ.
ತಮ್ಮ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಿದ್ದಕ್ಕೆ ಸಿಎಂ ವಿರುದ್ಧ ಮುನಿಸಿಕೊಂಡಿರುವ ಈಶ್ವರಪ್ಪ, ಕಾರ್ಯಕ್ರಮಕ್ಕೆ ಬಂದಾಗಲೂ ಸಿಎಂ ಸ್ವಾಗತಿಸದೇ ದೂರ ಉಳಿದಿದ್ದಾರೆ. ಈ ಮೂಲಕ ಬಹಿರಂಗವಾಗಿಯೇ ವೈಮನಸ್ಸು ಪ್ರದರ್ಶಿಸಿದಂತಾಗಿದೆ.
ಮತ್ತೊಂದೆಡೆ ತಮ್ಮ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದಕ್ಕೆ ಸಿಟ್ಟಾಗಿರುವ ಸಿಎಂ ಯಡಿಯೂರಪ್ಪ. ಹೀಗಾಗಿ, ಇಬ್ಬರ ಮಧ್ಯೆ ಉಂಟಾಗಿರುವ ಮೈಮನಸ್ಸು ಉಂಟಾಗಿದ್ದು, ಇದೀಗ ಇಬ್ಬರ ವೈಮನಸ್ಸು ಕನಕ ಪೀಠದ ಕಾರ್ಯಕ್ರಮದಲ್ಲಿ ಜಗಜ್ಜಾಹೀರಾಯ್ತು.