ಮಸ್ಕಿ ಉಪಚುನಾವಣೆ: ಎಲೆಕ್ಷನ್‌ ಖರ್ಚಿಗಾಗಿ ಕಾಂಗ್ರೆಸ್ ಅಭ್ಯರ್ಥಿಗೆ ದೇಣಿಗೆಯ ಮಹಾಪೂರ

First Published | Mar 19, 2021, 3:52 PM IST

ರಾಯಚೂರು ಜಿಲ್ಲೆಯ ಮಸ್ಕಿ ಕ್ಷೇತ್ರದ ಉಪ ಚುನಾವಣೆ ದಿನಾಂಕ ಘೋಷಣೆಯಾಗಿದ್ದು, ಏಪ್ರಿಲ್ 17ರಂದು  ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಕಾಂಗ್ರೆಸ್ ಮತ್ತು ಬಿಜೆಪಿ ಚುನಾವಣೆ ತಯಾರಿ ನಡೆಸಿವೆ. ಇದರ ಮಧ್ಯೆ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಲು ತೀರ್ಮಾನಿಸಿದ್ದು, ತ್ರಿಕೋನ ಸ್ಪರ್ಧೆ ಏರ್ಪಡುವುದು ಖಚಿತವಾಗಿದೆ. ಇನ್ನು ಕಾಂಗ್ರೆಸ್ ಅಭ್ಯರ್ಥಿಗೆ ಚುನಾವಣಾ ಪ್ರಚಾರದ ಖರ್ಚಿಗೆ ಹಣ ದೇಣಿಗೆ ನೀಡಿ ಬೆಂಬಲಿಸುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.

ಮಸ್ಕಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಆರ್. ಬಸನಗೌಡ ತುರ್ವಿಹಾಳ್ ಅವರಿಗೆ ಟಿಕೆಟ್ ಫಿಕ್ಸ್ ಆಗಿದ್ದು, ಚುನಾವಣಾ ಪ್ರಚಾರ ಕೂಡ ಭರ್ಜರಿ ನಡೆಸಿದ್ದಾರೆ.
undefined
ಮಸ್ಕಿ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯನ್ನು ಆಡಳಿತರೂಢ ಬಿಜೆಪಿಗೆ ಪ್ರತಿಷ್ಠೆಯಾದರೆ, ಕಾಂಗ್ರೆಸ್ ಅಭರ್ಥಿ ಆರ್.ಬಸನಗೌಡ ತುರ್ವಿಹಾಳ್ ಅವರಿಗೆ ಕ್ಷೇತ್ರದ ಹಲವೆಡೆ ಸಾರ್ವಜನಿಕರೇ ಚುನಾವಣಾ ಪ್ರಚಾರಕ್ಕೆ ಹಣ ದೇಣಿಗೆ ನೀಡುತ್ತಿದ್ದಾರೆ.
undefined

Latest Videos


ಚಿಕ್ಕ ಕಡಬೂರ್ ಗ್ರಾಮದಲ್ಲಿ ಮಸ್ಕಿ ಕ್ಷೇತ್ರದ ಉಪಚುನಾವಣೆ ಸಲುವಾಗಿ ಗ್ರಾಮದ ಹಿರಿಯ ಮುಖಂಡರು ಮತ್ತು ಯುವಕರು ಕಾಂಗ್ರೆಸ್ ಅಭ್ಯರ್ಥಿಯಾದ ಆರ್ ಬಸನಗೌಡ ತುರುವಿಹಾಳ ಇವರಿಗೆ 25000 ದೇಣಿಗೆ ನೀಡುವುದರ ಮೂಲಕ ಬೆಂಬಲ ಸೂಚಿಸಿದರು
undefined
ಕುರುಕುಂದಾ ಗ್ರಾಮದಲ್ಲಿ ಮಸ್ಕಿ ಕ್ಷೇತ್ರದ ಉಪಚುನಾವಣೆ ಸಲುವಾಗಿ ಗ್ರಾಮದ ಹಿರಿಯ ಮುಖಂಡರು ಮತ್ತು ಯುವಕರು ಕಾಂಗ್ರೆಸ್ ಅಭ್ಯರ್ಥಿಯಾದ ಆರ್ ಬಸನಗೌಡ ತುರುವಿಹಾಳ ಇವರಿಗೆ 25000 ದೇಣಿಗೆ ನೀಡುವುದರ ಮೂಲಕ ಬೆಂಬಲ ಸೂಚಿಸಿದರು
undefined
ಇನ್ನು ಹಂಪನಾಳ ಗ್ರಾಮದಲ್ಲಿ ಮಸ್ಕಿ ಕ್ಷೇತ್ರದ ಉಪಚುನಾವಣೆ ಸಲುವಾಗಿ ಗ್ರಾಮಸ್ಥರು ಹಾಗೂ ತಾಯಂದಿರು ಕಾಂಗ್ರೆಸ್ ಅಭ್ಯರ್ಥಿಯಾದ ಆರ್ ಬಸನಗೌಡ ತುರುವಿಹಾಳ ಇವರಿಗೆ ದೇಣಿಗೆ ನೀಡಿದರು ಆಶೀರ್ವಾದ ಮಾಡಿದರು.
undefined
ಹಳ್ಳಿಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ಅವರಿಗೆ ಭರ್ಜರಿ ಬೆಂಬಲ ವ್ಯಕ್ತವಾಗುತ್ತಿದೆ.
undefined
ಚುನಾವಣಾ ಪ್ರಚಾರಕ್ಕೆ ಗ್ರಾಮಕ್ಕೆ ಭೇಟಿ ಕೊಡುವ ಸಂದರ್ಭದಲ್ಲಿ ಅಭಿಮಾನಿಗಳು ಡೊಳ್ಳಿನ ಮೂಲಕ ಸ್ವಾಗತ ಕೋರಿರುವ ದೃಶ್ಯ
undefined
ಮಸ್ಕಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಪ್ರತಾಪಗೌಡ ಪಾಟೀಲ, ಕಾಂಗ್ರೆಸ್‌ನಿಂದ ಬಸನಗೌಡ ತುರ್ವಿಹಾಳ ಅವರು ಅಭ್ಯರ್ಥಿಯಾಗಲಿದ್ದಾರೆ. 2018ರ ಚುನಾವಣೆಯಲ್ಲಿ ಪ್ರತಾಪಗೌಡ ಪಾಟೀಲ ಕಾಂಗ್ರೆಸ್‌ನಲ್ಲಿದ್ದರು. ಬಸನಗೌಡ ತುರ್ವಿಹಾಳ ಬಿಜೆಪಿಯಲ್ಲಿದ್ದರು. ಈಗ ಇಬ್ಬರು ಪಕ್ಷಗಳು ಅದಲು ಬದಲಾಗಿವೆ. ಆದ್ದರಿಂದ, ಉಪಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ.
undefined
ಮಸ್ಕಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಪಕ್ಷಕ್ಕೆ ಆದ್ಯತೆಯೋ?, ವ್ಯಕ್ತಿಗೋ? ಎಂಬುದು ತಿಳಿಯಬೇಕಿದೆ. ಪ್ರತಾಪಗೌಡ ಪಾಟೀಲ, ಬಸನಗೌಡ ತುರ್ವಿಹಾಳ ಪುನಃ ಎದುರಾಳಿಗಳಾಗಿದ್ದು, ಜನರು ಯಾರ ಬೆಂಬಲಕ್ಕೆ ನಿಲ್ಲಲಿದ್ದಾರೆ? ಎಂದು ಕಾದು ನೋಡಬೇಕಿದೆ.
undefined
click me!