ಕಾರಣ 1: ಪ್ರಸ್ತುತ ರಾಜ್ಯ ರಾಜಕಾರಣದಲ್ಲಿ ಸಿ.ಡಿ. ಪ್ರಕರಣ ದೊಡ್ಡಮಟ್ಟದಲ್ಲಿ ಸಂಚನ ಮೂಡಿಸಿದ್ದು, ಇದು ಬೆಳಗಾವಿ ಲೋಕಸಭಾ ಬೈ ಎಲೆಕ್ಷನ್ ಮೇಲೆ ಪರಿಣಾಮ ಬೀರುತ್ತೆ. ಮಂಗಳಾ ಸುರೇಶ್ ಅಂಗಡಿ ಅವರನ್ನ ಆಯ್ಕೆ ಮಾಡಿದ್ರೆ, ಸಿ.ಡಿ. ವಿಚಾರ ಪ್ರಸ್ತಾಪಕ್ಕೆ ಬರುವುದಿಲ್ಲ ಎನ್ನುವ ಲೆಕ್ಕಾಚಾರ.
undefined
ಕಾರಣ 2: ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಸುರೇಶ್ ಅಂಗಡಿ ಅಜಾತಶತ್ರುವಾಗಿದ್ರು. ಅವರ ನಿಧನದಿಂದ ಕ್ಷೇತ್ರ ತೆರವಾಗಿದೆ. ಕ್ಷೇತ್ರದಲ್ಲಿ ಸುರೇಶ್ ಅಂಗಡಿ ಕುಟುಂಬದ ಮೇಲೆ ಅನುಕಂಪವಿದೆ. ಈ ನಿಟ್ಟಿನಲ್ಲಿ ಅನುಕಂಪವನ್ನು ಉಳಿಸಿಕೊಳ್ಳಲು ಅಂಗಡಿ ಕುಟುಂಬಕ್ಕೆ ಮಣೆ ಹಾಕಿದ್ರೆ, ಗೆಲುವು ಸುಲಭವಾಗಲಿದೆ ಎಂಬುದು ಒಂದು ಕಾರಣ.
undefined
ಕಾರಣ 3: ಬೇರೆಯವರಿಗೆ ಕೊಟ್ಟರೇ ಇತರೆ ಟಿಕೆಟ್ ಆಕಾಂಕ್ಷಿಗಳ ಅಸಮಾಧಾನಕ್ಕೆ ಕಾರಣವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಸುರೇಶ್ ಅಂಗಡಿ ಅವರ ಕುಟುಂಬಕ್ಕೆ ಟಿಕೆಟ್ ಕೊಟ್ಟರೆ ಪಕ್ಷದಲ್ಲಿ ಆಂತರಿಕವಾಗಿ ಯಾವುದೇ ಗೊಂದಲ ಇರುವುದಿಲ್ಲ.
undefined
ಕಾರಣ 4: ಮಂಗಳಾ ಅಂಗಡಿಗೆ ಟಿಕೆಟ್ ಕೊಟ್ಟರೆ, ಗೆಲುವು ನಿರಾಯಾಸವಾಗಿ ಸಿಗಲಿದೆ ಎಂಬುದು ಬಿಜೆಪಿ ಹೈಕಮಾಂಡ್ ನಾಯಕರ ಲೆಕ್ಕಾಚಾರ ಎನ್ನಲಾಗಿದೆ.
undefined
ಕಾರಣ 3: ಮಂಗಳಾ ಅಂಗಡಿ ಅವರಿಗೆ ಟಿಕೆಟ್ ಕೊಟ್ಟರೆ, ಸಿ.ಡಿ. ಆರೋಪದ ಬಗ್ಗೆ ಉಪ-ಚುನಾವಣೆಯ ಆಖಾಡದಲ್ಲಿ ಚರ್ಚೆ ಮಾಡುವ ಅಗತ್ಯವೇ ಇರುವುದಿಲ್ಲ. ಯಾಕಂದ್ರೆ ಸಿ.ಡಿ. ವಿಚಾರ ಚರ್ಚೆಗೆ ಬರುವುದಿಲ್ಲ. ಆ ವಿಚಾರ ಮಂಗಳಾ ಅಂಗಡಿ ಅವರ ಮೇಲೆ ಯಾವುದೇ ಪರಿಣಾಮ ಬೀರಲ್ಲ. ಕಾಂಗ್ರೆಸ್ ಒಂದು ವೇಳೆ ಸಿ.ಡಿ. ವಿಚಾರವನ್ನು ಪ್ರಸ್ತಾಪ ಮಾಡಿದ್ದೇ ಅದ್ರೆ, ಅದು ಕಾಂಗ್ರೆಸ್‌ಗೆ ತಿರುಗು ಬಾಣವಾಗುತ್ತದೆ. ಏಕೆಂದರೆ, ರಮೇಶ್ ಜಾರಕಿಹೊಳಿ ವಿರುದ್ಧ ಆರೋಪ ಕೇಳಿ ಬಂದಿದ್ದು, ಅವರ ಸಹೋದರ ಸತೀಶ್ ಜಾರಕಿಹೊಳಿ ಉಪ-ಚುನಾವಣೆಯ ಆಖಾಡದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ.
undefined