ಡಿಕೆಶಿ ಮುಖ್ಯಮಂತ್ರಿ ಆಗುತ್ತಲೇ ನಟಿ ರಮ್ಯಾ ರಾಜಕೀಯಕ್ಕೆ ರೀ-ಎಂಟ್ರಿ? ಮೋಹಕತಾರೆ ಹೇಳಿದ್ದೇನು

Published : Jun 03, 2026, 09:06 PM IST

ಡಿ.ಕೆ.ಶಿವಕುಮಾರ್ ಅವರ ಮುಖ್ಯಮಂತ್ರಿ ಪದಗ್ರಹಣ ಸಮಾರಂಭದಲ್ಲಿ ನಟಿ ರಮ್ಯಾ ಭಾಗವಹಿಸಿದ್ದರು. ಡಿಕೆಶಿ ಅವರ ಶ್ರಮಕ್ಕೆ ಫಲ ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದ ಅವರು, ತಮ್ಮ ರಾಜಕೀಯ ಮರುಪ್ರವೇಶದ ಕುರಿತ ಪ್ರಶ್ನೆಗೆ 'ಕಾಲ ಕೂಡಿ ಬರಬೇಕು' ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದ್ದಾರೆ.

PREV
16
ಡಿಕೆಶಿ ಪದಗ್ರಹಣ

ಇಂದು ಡಿ.ಕೆ.ಶಿವಕುಮಾರ್​ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಈ ಕಾರ್ಯಕ್ರಮಕ್ಕೆ ಹಲವಾರು ಸೆಲೆಬ್ರಿಟಿಗಳು ಆಗಮಿಸಿ, ಮುಖ್ಯಮಂತ್ರಿ ಪದಗ್ರಹಣ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

26
ರಾಜಕೀಯದಿಂದ ದೂರ

ಅವರಲ್ಲಿ ಒಬ್ಬರು ಮೋಹಕ ತಾರೆ ರಮ್ಯಾ (ದಿವ್ಯಾ ಸ್ಪಂದನಾ) ಒಬ್ಬರು. ಕುತೂಹಲ ಎನ್ನಿಸುವಂತೆ ರಮ್ಯಾ ಹಿಂದೊಮ್ಮೆ ಸಂಸದೆಯಾಗಿ ಆಯ್ಕೆಗೊಂಡವರು. ಆದರೆ, ಅವರ ರಾಜಕೀಯ ಜೀವನ ಅಲ್ಲಿಯೇ ಅಂತ್ಯವಾಯಿತು. ಮತ್ತೆ ಅವರನ್ನು ರಾಜಕಾರಣಿಯಾಗಿ ನೋಡಲು ಜನರು ಇಷ್ಟಪಡಲಿಲ್ಲ. ಆದ್ದರಿಂದ ಸದ್ಯ ರಾಜಕೀಯದಿಂದ ದೂರ ಇದ್ದಾರೆ ನಟಿ.

36
ಶ್ರಮಕ್ಕೆ ಫಲ ಸಿಕ್ಕಿದೆ

ಇಂದು ಡಿ.ಕೆ.ಶಿವಕುಮಾರ್​ ಅವರ ಪದಗ್ರಹಣ ಕಾರ್ಯಕ್ರಮಕ್ಕೆ ಬಂದಾಗ ಮಾಧ್ಯಮಗಳ ಜೊತೆ ಮಾತನಾಡಿದ ನಟಿ, ಡಿಕೆ ಶಿವಕುಮಾರ್‌ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕಾರ ಮಾಡ್ತಿರೋದು ಖುಷಿ ಆಗ್ತಿದೆ. ಬಹಳ ವರ್ಷದಿಂದ ಅವರು ಪಟ್ಟ ಕಷ್ಟಕ್ಕೆ ಫಲ ಸಿಕ್ಕಿದೆ ಎಂದರು. ನಿಮ್ಮ ಬಳಿಯೂ ಡಿಕೆಶಿ ಸಿಎಂ ಆಗ್ಬೇಕು ಅನ್ನೋ ಬಗ್ಗೆ ಹೇಳಿಕೊಂಡಿದ್ರಾ ಎಂಬ ಪ್ರಶ್ನೆಗೆ ಉತ್ತರಿಸಿದ ರಮ್ಯಾ, ಖಂಡಿತಾ ಹಲವು ಬಾರಿ ಹೇಳಿಕೊಂಡಿದ್ದರು ಎಂದಿದ್ದಾರೆ.

46
ರಾಜಕೀಯಕ್ಕೆ ಎಂಟ್ರಿ?

ಕೂಡಲೇ ಅವರಿಗೆ ಡಿಕೆಶಿ ಮುಖ್ಯಮಂತ್ರಿ ಆದ ಹಿನ್ನೆಲೆಯಲ್ಲಿ, ಮತ್ತೊಮ್ಮೆ ರಾಜಕೀಯಕ್ಕೆ ಎಂಟ್ರಿ ಕೊಡುವ ಸಾಧ್ಯತೆ ಇದೆಯೇ, ರಾಜ್ಯಸಭೆಗೂ ನಿಮ್ಮ ಹೆಸರು ಕೇಳಿಬರ್ತಿದೆ ಎನ್ನುವ ಪ್ರಶ್ನೆ ಎದುರಾಯಿತು.

56
ಕಾಲ ಕೂಡಿ ಬರಬೇಕು

ಅದಕ್ಕೆ ನಟಿ, ನೋ ನೋ, ಇಲ್ಲ ಸದ್ಯ ಆ ರೀತಿ ಏನೂ ಇಲ್ಲ. ನಾನೀಗ ಬಂದಿರೋದು ಡಿಕೆ ಶಿವಕುಮಾರ್‌ ಅವರ ಫ್ಯಾಮಿಲಿಗೋಸ್ಕರ. ಇಷ್ಟು ವರ್ಷ ಕಷ್ಟಪಟ್ಟಿರುವುದರ ಫಲ ಅವರಿಗೆ ಈಗ ಸಿಕ್ಕಿದೆ. ಅದನ್ನ ನೋಡಿ ಸೆಲಬ್ರೇಟ್‌ ಮಾಡೋಕೆ ಬಂದಿದ್ದೇನೆ. ನಾನು ಮತ್ತೆ ಸಕ್ರಿಯ ರಾಜಕಾರಣಕ್ಕೆ ಮರಳಲು ಕಾಲ ಕೂಡಿಬರಬೇಕು. ಎಲ್ಲದಕ್ಕೂ ಸಮಯ ಬೇಕಲ್ಲ ಎಂದಿದ್ದಾರೆ.

66
ಏನೀ ಮಾತಿನ ಅರ್ಥ

ಅಲ್ಲಿಗೆ ಸದ್ಯದ ಮಟ್ಟಿಗೆ ರಾಜಕೀಯಕ್ಕೆ ಎಂಟ್ರಿ ಇಲ್ಲ ಎಂದು ನಟಿ ಹೇಳಿದ್ದರೂ, ಕಾಲ ಕೂಡಿ ಬರಬೇಕು ಎನ್ನುವ ಮಾತನ್ನೂ ಸೇರಿಸಿರುವ ಹಿನ್ನೆಲೆಯಲ್ಲಿ, ಮತ್ತೊಮ್ಮೆ ರಾಜಕಾರಣದಲ್ಲಿ ಪರೀಕ್ಷೆಗೆ ಒಡ್ಡಿಕೊಳ್ಳಲು ನಟಿ ಸನ್ನದ್ಧರಾಗಿದ್ದಾರೆ ಎಂದೇ ಹೇಳಲಾಗುತ್ತಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories