ವಿಡಿಯೋ ವೈರಲ್ ಹಿನ್ನೆಲೆ ಹಾಸನದಲ್ಲಿ ಮತದಾನ ಮಾಡಿದ ದಿನವೇ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೊರಟಿದ್ದಾರೆ. ಕೆಂಪೇಗೌಡ ವಿಮಾನ ನಿಲ್ದಾಣದಿಂದ ಜರ್ಮನಿಯ ಪ್ಲಾಂಕ್ ಪರ್ಟ್ ಗೆ ಪ್ರಯಾಣ ಬೆಳೆಸಿದ್ದಾರೆ. ಇತ್ತ ರಾಜ್ಯ ಸರ್ಕಾರ ಪ್ರಕರಣದ ತನಿಖೆಗೆ ಎಸ್ ಐಟಿ ತಂಡ ರಚನೆ ಮಾಡಿದೆ. ಐಪಿಎಸ್ ಅಧಿಕಾರಿ ಬಿಜಯ್ ಕುಮಾರ್ ಸಿಂಗ್ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿದ್ದು, ಐಪಿಎಸ್ ಅಧಿಕಾರಿಗಳಾದ ಸುಮನ್ ಡಿ ಪೆನ್ನೆಕರ್ ಮತ್ತು ಸೀಮಾ ಲಾಠ್ಕರ್ ಸದಸ್ಯರಾಗಿ ನೇಮಕರಾಗಿದ್ದಾರೆ.
ಇದು ದೇಶದ ಇತಿಹಾಸದಲ್ಲೇ ದೊಡ್ಡ ಲೈಂಗಿಕ ಹಗರಣ. ನೂರಾರು ಹೆಚ್ಚು ಮಕ್ಕಳನ್ನು ಅತ್ಯಾಚಾರ ಮಾಡಿರೋದು ಖಂಡನೀಯ. ಮಾಜಿ ಪ್ರಧಾನಿಗಳ ಮೊಮ್ಮಗ ಈ ರೀತಿ ಮಾಡಿರೋದು ದೊಡ್ಡ ತಪ್ಪು. ಇಷ್ಟೆಲ್ಲ ಮಗ ಮಾಡಿದ್ರೂ ಅವರಿಗೆ ಗೊತ್ತೇ ಇಲ್ವಾ? ಅಥವಾ ಗೊತ್ತಿದ್ರೂ ಈ ಕೃತ್ಯಕ್ಕೆ ಪ್ರೋತ್ಸಾಹ ನೀಡುತ್ತಿದ್ರಾ? ಅವರ ತಾಯಿ, ತಂದೆ ಇದಕ್ಕೆಲ್ಲ ಉತ್ತರ ಕೊಡ್ಬೇಕು. ಅವರ ಕುಟುಂಬಕ್ಕೆ ಅಧಿಕಾರ ಇದ್ದರೆ ಸಾಕು. ಅಪ್ಪನಿಗೆ PWD ಇಲಾಖೆಯೇ ಬೇಕು, ಚಿಕ್ಕಪ್ಪ, ಮಗ, ಅತ್ತೆ, ಸೊಸೆ ಎಲ್ಲರಿಗೂ ಅಧಿಕಾರ ಬೇಕು. ಸಿಬಿಐ ಏನು ಮಾಡ್ತಾ ಇತ್ತು? ಸುಮೋಟೊ ಕೇಸ್ ದಾಖಲಿಸಿಕೊಳ್ಳಬೇಕಿತ್ತು. ಕೂಡಲೇ ಈ ಬಗ್ಗೆ ತನಿಖೆ ಆಗ್ಬೇಕು, ನಾವು ಉನ್ನತ ಮಟ್ಟದ ತನಿಖೆಗೆ ನೀಡ್ತೇವೆ ಎಂದು ಸಚಿವ ಕೃಷ್ಣಬೈರೇಗೌಡ ಆಗ್ರಹಿಸಿದ್ದಾರೆ.
ಪ್ರಜ್ವಲ್ ರೇವಣ್ಣ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ ನಡೆಸಿತು. ಕಾಂಗ್ರೆಸ್ ಮುಖಂಡ ಎಸ್. ಮನೋಹರ್ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಗಿದ್ದು, ಮಹಿಳೆಯರು ಪ್ರಜ್ವಲ್ ರೇವಣ್ಣ ಪ್ರತಿಕೃತಿಗೆ ಪೊರಕೆ ಏಟು ಹಾಕಿದರು. ದೇವೇಗೌಡ್ರು ಹಾಗೂ ಹೆಚ್ಡಿಕೆ ಮುಖವಾಡ ಹಾಕಿ ಅಣಕು ಪ್ರದರ್ಶನ ಮಾಡಿದರು. ವಿಕೃತಿ ಕಾಮಿ ಪ್ರಜ್ವಲ್ ರೇವಣ್ಣನಿಗೆ ಧಿಕ್ಕಾರ ಎಂದು ಘೋಷಣೆ ಕೂಗಿದರು. ಗಲ್ಲಿಗೇರಿಸಿ ಗಲ್ಲಿಗೇರಿಸಿ ಪ್ರಜ್ವಲ್ ರೇವಣ್ಣನ ಗಲ್ಲಿಗೇರಿಸಿ ಎಂದ ಕೈ ಕಾರ್ಯಕರ್ತರು , ದೇವೇಗೌಡರ ಕುಟುಂಬವನ್ನು ಗಡಿಪಾರು ಮಾಡಿ ಎಂದು ಘೋಷಣೆ ಕೂಗಿದರು.
ಮಹಿಳಾ ಆಯೋಗಕ್ಕೆ ಹಾಸನ ಜಿಲ್ಲೆಯ ನೊಂದ ಮಹಿಳೆಯರು ಪತ್ರ ಬರೆದಿದ್ದಾರೆ. ಕ್ರಮ ಕೈಗೊಳ್ಳುವಂತೆ ಮಹಿಳಾ ಆಯೋಗ ಸಿಎಂಗೆ ನನಗೆ ಪತ್ರ ಬರೆದಿದ್ದಾರೆ. ಪ್ರಜ್ವಲ್ ರೇವಣ್ಣ ದೇಶ ಬಿಟ್ಟಿದ್ದಾರೆ ಎಂಬ ಸುದ್ದಿ ಬಂದಿದೆ. ಹೀಗಾಗಿ SIT ಕ್ರಮಕೈಗೊಳ್ಳಲಿದೆ, ಅವರನ್ನು ಕರೆ ತರುವ ಪ್ರಯತ್ನ ಮಾಡಿ, ತನಿಖೆ ಪ್ರಾರಂಭಿಸುತ್ತೇವೆ. ಪೆನ್ ಡ್ರೈವ್ ವಿಚಾರ ಈಗ ಬಂದಿದೆ, ಹೀಗಾಗಿ ಈಗ ಕ್ರಮ ಕೈಗೊಂಡಿದ್ದೇವೆ. ಪೆನ್ ಡ್ರೈವ್ ವಿಚಾರ ತನಿಖೆಯಲ್ಲಿ ಹೊರ ಬರುತ್ತೆ. ಯಾರ ಪಾತ್ರ ಇದೆ ಅನ್ನೊದು ತಿಳಿಯುತ್ತೆ- ಡಾ. ಜಿ ಪರಮೇಶ್ವರ್, ಗೃಹ ಸಚಿವರು.
ಪ್ರಜ್ವಲ್ ರೇವಣ್ಣ SIT ತನಿಖೆ ವಿಚಾರಕ್ಕೆ ಪ್ರತಿಕ್ರಿಯಿಸದ ಆರ್. ಅಶೋಕ್, ದೇವೇಗೌಡರು ದೊಡ್ಡ ನಾಯಕರಿದ್ದಾರೆ ಅವರು ನೋಡ್ಕೊಳ್ತಾರೆ. ಇಷ್ಟು ಡೈವರ್ಟ್ ಮಾಡೋದು ಬೇಡ ಎಂದರು.
ಇನ್ನು ಡಿಸಿಎಂ ಡಿಕೆ ಶಿವಕುಮಾರ್, ಬಿಜೆಪಿ ನಾಯಕರನ್ನು ರಾಜ್ಯದ ಅನ್ಯಾಯದ ಬಗ್ಗೆ ಕೇಳಬೇಕು. ಶೋಭಕ್ಕ, ಯಡಿಯೂರಪ್ಪ, ವಿಜಯೇಂದ್ರ ಇವರಿಗೆ ನೀವು ಪ್ರಶ್ನೆ ಮಾಡಬೇಕು. ನಮ್ಮನ್ನು ಕೇಳಿದ್ರೆ ಏನು ಉತ್ತರ ಹೇಳೋಣ. ಎಲ್ಲೆಲ್ಲೋ ಬಾಯಿ ಬಿಡ್ತಾರೆ, ಆದ್ರೆ ಈಗ ಮೌನವಾಗಿದ್ದಾರೆ. ಯಾಕೆ ಅವರು ಬಾಯಿ ಬಿಡ್ತಾಯಿಲ್ಲ, ಎಲ್ಲೆಲ್ಲೋ ಬಾಯಿ ಬಿಡ್ತಾರೆ ಎಲ್ಲೆಲ್ಲೋ ಟ್ವೀಟ್ ಮಾಡ್ತಾರೆ. ಇದು ಆರ್ಡಿನರಿ ಮನುಷ್ಯನದ್ದಾ...? ದೇಶದ ಒಬ್ಬ ಸಂಸತ್ ಸದಸ್ಯನ ವಿಚಾರವಿದು. ಒಬ್ಬ ಶಾಸಕರ ವಿಚಾರ ಮಾಜಿ ಮಂತ್ರಿಗಳ ವಿಚಾರ ಅವರು ಉತ್ತರ ಕೊಡಬೇಕು ಇದಕ್ಕೆ ನಾವೇನು ಉತ್ತರ ಕೊಡಬೇಕು. ರಾಜ್ಯ ತಲತಗ್ಗಿಸುವಂತೆ ಆಗಿದೆ ದೆಹಲಿಯಿಂದ ಎಷ್ಟು ಕರೆ ಬರ್ತಾ ಇದ್ದಾವೆ ಗೊತ್ತಾ..? ಬಿಜೆಪಿಯವರು ಉತ್ತರ ಕೊಡಬೇಕು ಇದ್ದಕ್ಕೆ. ಅದೇನು ಮಾಡುತ್ತಾರೋ ಮೊದಲು ಹೇಳಲೇ ಅವರು ಎಂದಿದ್ದಾರೆ.
ಅಶ್ಲೀಲ ವಿಡಿಯೋ ವೈರಲ್ ವಿಚಾರಕ್ಕೆ ಸಂಬಂಧಿಸಿದಂತೆ 23/04/2024 ರಂದೇ ಸೈಬರ್ ಕ್ರೈಂ ಠಾಣೆಗೆ ವಕೀಲರೊಬ್ಬರಿಂದ ದೂರು ದಾಖಲಾಗಿದೆ. 21/04/2924 ರ ಸಂಜೆ ಪೆನ್ ಡ್ರೈವ್ ಹಾಗೂ ಸಿಡಿಗಳ ಮೂಲಕ ವೀಡಿಯೋ ವೈರಲ್ ಆಗಿತ್ತು. ಹಾಸನ ಎನ್ ಡಿ ಎ. ಮೈತ್ರಿ ಅಭ್ಯರ್ಥಿ ಪ್ರಜ್ವಲ್ ಮಣಿಸಲು ಅವರ ಮುಖವನ್ನ ಮಾರ್ಫ್ ಪೋಟೋ ವಿಡಿಯೋ ಮಾಡಿ ಮತದಾರರಿಗೆ ಹಂಚಿಕೆ ಮಾಡಿದ್ದಾರೆ. ಅಪಪ್ರಚಾರ ಮಾಡಿ ಎನ್ ಡಿ ಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಸೋಲಿಸಲು ಪ್ರಯತ್ನ ಮಾಡಿದ್ದಾರೆಂದು ವಕೀಲ ದೂರು ನೀಡಿದ್ದಾರೆ. ಈ ಸಂಬಂಧ ವಕೀಲ ಬೇಲೂರು ತಾ ಅರೇಹಳ್ಳಿ ಮೂಲದ ನವೀನ್ ಗೌಡ ಎಂಬ ವ್ಯಕ್ತಿ ಮೇಲೆ ಎಫ್‌ಐಆರ್ ದಾಖಲು ಮಾಡಿದ್ದಾರೆ.
ಕಾಮುಕ ಪ್ರಜ್ವಲ್ ರೇವಣ್ಣ. ಮುಗ್ದರನ್ನ ಅತ್ಯಾಚಾರ ಅವರ ವಿಡಿಯೋ ಮಾಡಿಕೊಂಡಿದ್ದಾನೆ. ಮಹಿಳೆಯರ ರಕ್ಷಣೆ ಮಾಡುತ್ತೇವೆ ಅಂದ ದೇವೇಗೌಡರು ಕುಟುಂಬ ಇವತ್ತು ಇದೆಯಾ? ಬಿಜೆಪಿ ಇಂತಹವರ ಜೊತೆ ದೋಸ್ತಿ ಮಾಡಿದೆ ನಾಚಿಕೆ ಆಗಬೇಕು. ದೇವೇಗೌಡರು ಮುಂದೆ ಬಂದು ಪ್ರಜ್ವಲ್ ರನ್ನ ಗಲ್ಲಿಗೆ ಹಾಕಿ ಅಂತ ಬಹಿರಂಗವಾಗಿ ಹೇಳಬೇಕು. ಬಿಜೆಪಿಯಲ್ಲಿ ಯಾರು ಹೆಣ್ಣು ಮಕ್ಕಳು ಇಲ್ಲವಾ? ಮಹಿಳೆಯರ ಮೇಲೆ ಅತ್ಯಾಚಾರ ಆಗಿದೆ. ಯಾರು ಮಾತಾಡ್ತಿಲ್ಲ. ಶೋಭಾ ಕರಂದ್ಲಾಜೆ ಎಲ್ಲಿ ಇದ್ದಾರೆ. ಕರ್ನಾಟಕದಲ್ಲಿ ಇರೋ ಇಲಾಖೆಗೆಗಳು ಸ್ವಯಂ ಪ್ರೇರಿತವಾಗಿ ದೂರು ಹಾಕಬೇಕು. ಪ್ರಜ್ವಲ್ ರೇವಣ್ಣರನ್ನ ವಿದೇಶಕ್ಕೆ ಕಳಿಸಿರೋದು ಮೋದಿ ಅವರು. ಮೋದಿ ಬೇಟಿ ಬಚಾವೋ.. ಬೇಟಿ ಪಡಾವೋ ಅಂತೀರಾ. ಮಹಿಳೆಯರ ವಿರೋಧ ಪಕ್ಷ ಬಿಜೆಪಿ, ಜೆಡಿಎಸ್ ಎಂದರು.
ಕಾಂಗ್ರೆಸ್ ಮಹಿಳಾ ನಾಯಕಿಯರಾದ ಕವಿತಾ ರೆಡ್ಡಿ, ಮಂಜುಳಾ ನಾಯ್ಡು, ಭವ್ಯ ನರಸಿಂಹಮೂರ್ತಿ, ಕವಿತಾ ವಸಂತ ಜಂಟಿ ಸುದ್ದಿಗೋಷ್ಠಿ ನಡೆಸಿ ಖಂಡಿಸಿದ್ದು, ಮಹಿಳಾ ನಾಯಕಿಯರಾಗಿ ಮಾತನಾಡಲು ನಮಗೆ ನಾಚಿಕೆ ಆಗುತ್ತಿದೆ. ಯಾವ ರೀತಿಯಲ್ಲಿ ಮಾತನಾಡಬೇಕು ಗೊತ್ತಾಗುತ್ತಿಲ್ಲ. ವಿಡಿಯೋ ಹೊಳೆಯೆ ಹರಿಯುತ್ತಿದೆ. ಮಹಿಳೆಯನ್ನು ಎರಡನೇ ದರ್ಜೆ ನಾಗರಿಕರ ತರಹ ನೋಡ್ತಾ ಇದ್ದಾರೆ. 50% ಮಹಿಳೆಯರು ದೇಶದಲ್ಲಿ ಇದ್ದೇವೆ. 40 ಸಾವಿರ ಮಹಿಳೆಯರು ಮಿಸ್ಸಿಂಗ್ ಆಗಿದ್ದಾರೆ. ರಾಜಕಾರಣಿಗಳು ಮಹಿಳೆಯರನ್ನು ಟಾರ್ಗೆಟ್ ಮಾಡ್ತಿದ್ದಾರೆ. ಮೋದಿ, ಕುಮಾರಸ್ವಾಮಿ ಮಹಿಳೆಯರ ಬಗ್ಗೆ ಮಾತನಾಡಿದ್ದಾರೆ. ಹೆಣ್ಣುಮಕ್ಕಳ ತಾಳಿ ಬಗ್ಗೆ ಮೋದಿ ಮಾತನಾಡಿದ್ದಾರೆ. ಕುಮಾರಸ್ವಾಮಿ ಹೇಳಿದ್ರು ಹೆಣ್ಣು ಮಕ್ಕಳು ದಾರಿ ತಪ್ಪುತ್ತಿದ್ದಾರೆ. ಇವತ್ತು ವಿಡಿಯೋ ಎಲ್ಲ ಕಡೆ ಹರಿದಾಡುತ್ತಿದೆ. ಹೆಣ್ಣುಮಕ್ಕಳ ಜೀವನದ ಬಗ್ಗೆ ಯಾರು ಯೋಚನೆ ಮಾಡ್ತಾರೆ. ಹೆಣ್ಣುಮಕ್ಕಳಿಗೆ ಯಾರು ರಕ್ಷಣೆ ಕೊಡ್ತಾರೆ. ಪ್ರಜ್ವಲ್ ರೇವಣ್ಣ ದೊಡ್ಡ ಮನೆಯಿಂದ ಬಂದವರು. ದೇವೇಗೌಡರು ಈ ದೇಶ ಆಳಿದವರು. ಇಂತಹ ಮನೆತನದ ವಿರುದ್ಧ ಹೇಗೆ ಹೋರಾಡಬೇಕಿದೆ. ಬಿಜೆಪಿಗರು ಯಾರು ಕೂಡ ಈ ಬಗ್ಗೆ ಮಾತನಾಡುತ್ತಿಲ್ಲ ಎಂದು ಕಿಡಿಕಾರಿದ್ದಾರೆ.
ಪ್ರಜ್ವಲ್ ವಿದೇಶಕ್ಕೆ ಹೋಗಿರೋದು ನನಗೆ ಗೋತ್ತಿಲ್ಲ. ತಪ್ಪು ಯಾರು ಮಾಡಿದ್ರೂ ತಪ್ಪೇ. ನನ್ನ ಮಗ ಆಗಲಿ ಇನ್ನೊಬ್ಬರಾಗಲಿ. ಉಪ್ಪು ತಿಂದವರು ನೀರು ಕುಡಿಯಬೇಕು. ತಪ್ಪು ಮಾಡಿಲ್ಲ ಅಂತಲೂ ನಾನು ವಾದ ಮಾಡಲ್ಲ. ತಪ್ಪು ಆಗಿದೆ ಅಂತಲೂ ಹೇಳಲ್ಲ. ತನಿಖೆ ಆಗುತ್ತೆ, ತನಿಖೆ ಆದ್ಮೇಲೆ ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತೆ. ಪ್ರಜ್ವಲ್ ರೇವಣ್ಣ ಬಿಜೆಪಿಗಷ್ಟೇ ಅಲ್ಲ, ನಮಗೂ ಸಂಬಂಧವಿಲ್ಲ. ಅವರ ವೈಯುಕ್ತಿಕವಾದ ವಿಚಾರ ಎಂದ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೆಗೌಡ