ರಾಜ್ಯದ ಮುಂದಿನ ಸಿಎಂ ಕಾಕ್ರೋಚ್​ ಜನತಾ ಪಕ್ಷದ ಕ್ರಿಶ್​: ಪ್ರಮಾಣ ವಚನಕ್ಕೂ ಸಿದ್ಧತೆ- ವಿಡಿಯೋ ವೈರಲ್​

Published : May 22, 2026, 07:25 PM IST

ಸೋಷಿಯಲ್ ಮೀಡಿಯಾದಲ್ಲಿ 'ಕಾಕ್ರೋಚ್ ಜನತಾ ಪಕ್ಷ'ದ ಹವಾ ಜೋರಾಗಿದ್ದು, ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಹೆಸರಿನ ಟೀ-ಶರ್ಟ್ ಬಿಡುಗಡೆ ಮಾಡಿದ್ದರೆ, 'ಹಿಟ್ ಜನತಾ ಪಕ್ಷ'ದ ವಿಡಿಯೋವೊಂದು ವೈರಲ್ ಆಗಿ ತಿರುಗೇಟು ನೀಡುತ್ತಿದೆ.

PREV
15
ದೊಡ್ಡ ಮಟ್ಟದ ಹವಾ

ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ಕಾಕ್ರೋಚ್​ ಜನತಾ ಪಕ್ಷದ (Cockroach Janata Party) ಹವಾ ಸಿಕ್ಕಾಪಟ್ಟೆ ಜೋರಾಗಿದೆ. ವಿದೇಶದಲ್ಲಿ ಕುಳಿತು ಭಾರತದ ಪರಿವರ್ತನೆ ಮಾಡುವ ಹಿಂದಿನ ಉದ್ದೇಶ ಏನು, ಜೆನ್ Zಗಳನ್ನು ಛೂ ಬಿಟ್ಟು ಭಾರತದಲ್ಲಿ ಅಶಾಂತಿ ನೆಲೆಸುವಂತೆ ಮಾಡುವುದಾ ಎನ್ನುವ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಚರ್ಚೆ ಏನೇ ಇದ್ದರೂ, ಸದ್ಯ ದೇಶದಲ್ಲಿ ಬದಲಾವಣೆ ಕೋರುವ ದೊಡ್ಡ ವರ್ಗವೇ ಇದೆ ಎನ್ನುವುದು ಫಾಲೋವರ್ಸ್​ ಸಂಖ್ಯೆಯಿಂದ ತಿಳಿದುಬರುತ್ತಿದೆ.

25
ಪರ-ವಿರುದ್ಧ ರೀಲ್ಸ್​

ಇದರ ನಡುವೆಯೇ ಸೋಷಿಯಲ್​ ಮೀಡಿಯಾದಲ್ಲಿ ಕಾಕ್ರೋಚ್​ ಜನತಾ ಪಕ್ಷದ ಪರ, ವಿರುದ್ಧ ಮೀಮ್ಸ್​, ರೀಲ್ಸ್​ಗಳು ಸಿಕ್ಕಾಪಟ್ಟೆ ವೈರಲ್​ ಆಗುತ್ತಿವೆ. ಕಂಟೆಂಟ್​ ಕ್ರಿಯೇಟರ್ಸ್​ಗೆ ಇದು ದೊಡ್ಡ ಹಬ್ಬವಾಗಿದೆ. ಟ್ರೆಂಡಿಂಗ್​ನಲ್ಲಿ ಈ ಸುದ್ದಿ ಇರುವ ಕಾರಣ, ಮೀಮ್ಸ್​ ರೀಲ್ಸ್​ ಮೂಲಕ ಸಕತ್​ ಲೈಕ್ಸ್​, ಕಮೆಂಟ್ಸ್​ ಪಡೆಯುತ್ತಿದ್ದಾರೆ.

35
ಸಿದ್ದರಾಮಯ್ಯ ಟೀ-ಷರ್ಟ್​ ಬಿಡುಗಡೆ

ಅಷ್ಟಕ್ಕೂ ಬಿಜೆಪಿಯನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಿಂದಿಕ್ಕಿದ ಕಾರಣದಿಂದ ಕಾಂಗ್ರೆಸ್ಸಿಗರಂತೂ ಖುಷಿಯಿಂದ ಕುಣಿಯುತ್ತಿದ್ದಾರೆ. ಕರ್ನಾಟಕದಲ್ಲಿಯೂ ಇದರ ಹವಾ ಜೋರಾಗಿಯೇ ಇದ್ದು, ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡ ಕಾಕ್ರೋಚ್​ ಜನತಾ ಪಕ್ಷದ ಹೆಸರಿನಲ್ಲಿ ಟೀ-ಶರ್ಟ್​ ಬಿಡುಗಡೆ ಮಾಡಿದ್ದಾರೆ.

45
ಪ್ರಮಾಣ ವಚನ ಸ್ವೀಕಾರ

ಇದರ ಬೆನ್ನಲ್ಲೇ ವಿಡಿಯೋ ಒಂದು ವೈರಲ್​ ಆಗುತ್ತಿದೆ. ಇದು ಎಐ ವಿಡಿಯೋ. ಇದರಲ್ಲಿ, ಮಹಿಳೆಯೊಬ್ಬರು ಕಾಕ್ರೋಚ್​ ಜನತಾ ಪಕ್ಷದ ವತಿಯಿಂದ ಕ್ರಿಷ್​ ಅವರನ್ನು ಯೂತ್ಸ್​ ಕರ್ನಾಟಕದ ಮುಖ್ಯಮಂತ್ರಿಯಾಗಿ ಘೋಷಣೆ ಮಾಡಲಾಗಿದೆ. ಅವರು ಪ್ರಮಾಣ ವಚನ ಸ್ವೀಕರಿಸಲು ಬರಬೇಕು ಎಂದು ಕೇಳಿಕೊಂಡಿದ್ದಾರೆ.

55
ಇಲ್ಲೊಂದು ಟ್ವಿಸ್ಟ್​

ಇದನ್ನು namreels ಇನ್​ಸ್ಟಾಗ್ರಾಮ್​ ಪುಟದಲ್ಲಿ ಶೇರ್​ ಮಾಡಲಾಗಿದೆ. ಆದರೆ ಇಲ್ಲೊಂದು ಟ್ವಿಸ್ಟ್​ ನೀಡಲಾಗಿದೆ. ಆ ಸಿಎಂ ಅಭ್ಯರ್ಥಿ ಬರುತ್ತಿದ್ದಂತೆಯೇ ಇನ್ಮುಂದೆ ಜಿರಳೆ ರಾಜ್ಯದ ಸಿಎಂ, ದೇಶದ ಪಿಎಂ ಎಂದಿದ್ದಾರೆರ. ಆಗ ಟುಸ್​ ಎಂದು ಸ್ಪ್ರೇ ಸಿಡಿಸಲಾಗಿದೆ. ಇದೇನು ಗೊತ್ತಾಯ್ತಲ್ಲಾ ಎಂದು ಪ್ರಶ್ನಿಸಿದ್ದಾರೆ. ಅಸಲಿಗೆ ಅದು ಕಾಕ್ರೋಚ್​ ಜನತಾ ಪಕ್ಷದ ವಿರುದ್ಧ ಸಿಡಿದು ನಿಂತಿರುವ ಹಿಟ್​ ಜನತಾ ಪಕ್ಷವಾಗಿದೆ. ಜಿರಳೆಯನ್ನು ಓಡಿಸುವ ಹಿಟ್​. ನಿಮ್ಮನ್ನು ಕರ್ನಾಟಕದ ಒಳಗೆ ಬಿಟ್ಟುಕೊಳ್ಳುವುದಿಲ್ಲ ಎನ್ನುವುದು ಅದರ ಅರ್ಥ. ಆದ್ರೆ ಖುದ್ದು ಮುಖ್ಯಮಂತ್ರಿಗಳೇ ಖುಷಿ ಪಡುತ್ತಿರುವಾಗ ಮುಂದೇನು ಎಂದು ನೋಡಬೇಕಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories