ರಾಯಣ್ಣ ಪ್ರತಿಮೆ ವಿವಾದ ಇತ್ಯರ್ಥಗೊಳ್ಳುತ್ತಿದ್ದಂತೆಯೇ ಬೆಳಗಾವಿಗೆ ಮಂತ್ರಿಗಳ ದಂಡು

First Published | Aug 29, 2020, 6:42 PM IST

ಬೆಳಗಾವಿ ಮಹಾನಗರದ ಪಕ್ಕದಲ್ಲೇ ಇರುವ ಪೀರಣವಾಡಿ ಗ್ರಾಮದಲ್ಲಿ ಕಾಂತ್ರಿವೀರ ಸಂಗೊಳ್ಳಿ ರಾಯಣ್ಣ ಹಾಗೂ ಶಿವಾಜಿ ಮೂರ್ತಿ ವಿವಾದ ತಾರಕಕ್ಕೇದ್ದು, ಬಳಿಕ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಅಧಿಕಾರಿಗಳು ಸೇರಿ ವಿವಾದವನ್ನು ಇತ್ಯರ್ಥಗೊಳ್ಳುತ್ತಿದ್ದಂತೆಯೇ ಮಂತ್ರಿಗಳ ದಂಡು ಪೀರನವಾಡಿಗೆ ದೌಡಾಯಿಸಿದೆ. ಅಲ್ಲದೇ ಪೋಟೋಗೆ ಫೋಸ್ ಕೊಟ್ಟಿದ್ದಾರೆ.

ಬೆಳಗಾವಿ ಮಹಾನಗರದ ಪಕ್ಕದಲ್ಲೇ ಇರುವ ಪೀರಣವಾಡಿ ಗ್ರಾಮದ ಮೂರ್ತಿ ವಿವಾದ ಇತ್ಯರ್ಥಗೊಳ್ಳುತ್ತಿದ್ದಂತೆಯೇ ಮಂತ್ರಿಗಳ ದಂಡು ಪೀರನವಾಡಿಗೆ ದೌಡಾಯಿಸಿದೆ.
ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ,ಜಿಲ್ಲಾ ಉಸ್ತುವಾರಿ ಮತ್ತು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ,ಅಬಕಾರಿ ಸಚಿವ ಎನ್ ನಾಗೇಶ ಅವರು ಇಂದು ಪೀರನವಾಡಿ ಗ್ರಾಮಕ್ಕೆ ಭೇಟಿ
Tap to resize

ಛತ್ರಪತಿ ಶಿವಾಜಿ ಪ್ರತಿಮೆಗಳಿಗೆ ಹೂವಿನ ಹಾರ ಹಾಕಿದರು.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆಗ ಹಾರ ಹಾಕಿ ಗೌರವ ಸಮರ್ಪಿಸಿದರು.
ಪೀರಣವಾಡಿಯಲ್ಲಿ ರಾತ್ರೋರಾತ್ರಿ ಸಂಗೊಳ್ಳಿ ರಾಯಣ್ಣ ಮೂರ್ತಿಯನ್ನು ತೆರವುಗೊಳಿಸಲಾಗಿತ್ತು
ಬಳಿಕ ರಾಜ್ಯಾದ್ಯಂತ ಸಂಗೊಳ್ಳಿ ರಾಯಣ್ಣನ ಅಭಿಮಾನಿಗಳು ಬೀದಿಗಿಳಿದು ದೊಡ್ಡ ಮಟ್ಟದಲ್ಲಿ ಪ್ರತಿಭಟನೆಗಿಳಿದರು, ಇದು ತೀವ್ರವಾಗುತ್ತಿದ್ದಂತೆಯೆ ಕಾಗಿನೆಲೆ ಶ್ರೀಗಳು ಸಿಎಂ ಅವರನ್ನ ಭೇಟಿ ಮಾಡಿ ವಿವಾದ ಬಗೆಹರಿಸಿಕೊಡುವಂತೆ ಮನವಿ ಮಾಡಿದ್ದರು.
ನಂತರ ರಾತ್ರೋರಾತ್ರಿ ಅದೇ ಜಾಗದಲ್ಲಿ ರಾಯಣ್ಣ ಮೂರ್ತಿಯನ್ನು ಪ್ರತಿಷ್ಟಾಪನೆ ಮಾಡಲಾಗಿದೆ.

Latest Videos

click me!