ಕೋವಿಡ್ ಸೆಂಟರ್‌ನಲ್ಲಿ ಹೋಳಿಗೆ ಮಾಡಿ ಊಟ ಬಡಿಸಿದ ರೇಣುಕಾಚಾರ್ಯ

First Published | Aug 25, 2020, 10:37 PM IST

ಹೊನ್ನಾಳಿ ಬಿಜೆಪಿ ಶಾಸಕ, ಸಿಎಂ ರಾಜಕೀಯ ಕಾರ್ಯದರ್ಶಿ ಎಂ,ಪಿ.ರೇಣುಕಾಚಾರ್ಯ ಅವರು ಕೋವಿಡ್ ಕೇರ್ ಸೆಂಟರ್‌ನಲ್ಲಿ ಕೊರೋನಾ ಸೋಂಕಿತರು ಹಾಗೂ ಆಸ್ಪತ್ರೆ ಸಿಬ್ಬಂದಿಗೆ ಹೋಳಿಗೆ ಊಟ ಬಡಿಸಿದ್ದಾರೆ.

ರೇಣುಕಾಚಾರ್ಯ ಕುಟುಂಬದ ಹಾಗೂ ಆಪ್ತರ ಜೊತೆ ಸೇರಿ ಕೋವಿಡ್ ಕೇರ್ ಸೆಂಟರ್ ನಲ್ಲಿ ಇರುವವರಿಗೆ ಹೋಳಿಗೆ ಊಟ ನೀಡಿದ್ದಾರೆ.
ದಾವಣಗೆರೆಯ ಮಾದನಬಾವಿಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ನಿಲಯದಲ್ಲಿರುವ ಕೋವಿಡ್ ಕೇರ್ ಸೆಂಟರ್
Tap to resize

ಈ ಕೋವಿಡ್ ಕೇರ್ ಸೆಂಟರಿನಲ್ಲಿ 150ಕ್ಕೂ ಹೆಚ್ಚು ಪಾಸಿಟಿವ್ ಬಂದಿರುವ ಜನರಿದ್ದಾರೆ
ಸ್ವತಃ ಶಾಸಕರೇ ತೆರಳಿ ಹೋಳಿಗೆ ಮಾಡಿ ಅಲ್ಲಿರುವ ಸಿಬ್ಬಂದಿಗೆ ಹಾಗೂ ಸೋಂಕಿತರಿಗೆ ಬಡಿಸಿದ್ದಾರೆ.
ಅಲ್ಲದೆ ಅಲ್ಲಿರುವ ಸೋಂಕಿತರಿಗೆ ಧೈರ್ಯ ತುಂಬಿ ಬೇಗ ಗುಣಮುಖರಾಗಿ ಬರುವಂತೆ ಹಾರೈಸಿದರು.
ಕ್ವಾರಂಟೈನ್‌ನಲ್ಲಿದ್ದುಕೊಂಡೇ ಗೌರಿ-ಗಣೇಶ ಹಬ್ಬ ಆಚರಿಸಿ, ಹೋಳಿಗೆ ಊಟ ಮಾಡಿದ ಸೋಂಕಿತರು ಹಾಗೂ ಆಸ್ಪತ್ರೆ ಸಿಬ್ಬಂದಿಗಳು
ಕೊನೆಗೆ ಎಂಪಿ ರೇಣುಕಾಚಾರ್ಯ ಅವರ ಕಾರ್ಯಕ್ಕೆ ಎಲ್ಲರೂ ಕೃತಜ್ಞತೆ ಸಲ್ಲಿಸಿದರು

Latest Videos

click me!