ಲೋಕಸಭಾ ಚುನಾವಣೆ 2024: ಮತದಾನ ಮಾಡಿ ತಮ್ಮ ಹಕ್ಕು ಚಲಾಯಿಸಿದ ಅಭ್ಯರ್ಥಿಗಳು

First Published | Apr 26, 2024, 1:11 PM IST

ಬೆಂಗಳೂರು(ಏ.25):  ಲೋಕಸಭಾ ಚುವಾವಣೆಗೆ ರಾಜ್ಯದಲ್ಲಿ ಇಂದು(ಏ.26) ಬೆಳಗ್ಗೆಯಿಂದಲೇ ಮತದಾನ ನಡೆಯುತ್ತಿದೆ. ರಾಜ್ಯದ ದಕ್ಷಿಣ ಭಾಗದ 14 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ಆರಂಭವಾಗಿದೆ. ಜನರು ಬಹಳ ಉತ್ಸಾಹದಿಂದ ಬಂದು ಮತ ಹಾಕುವ ತಮ್ಮ ಹಕ್ಕು ಚಲಾಯಿಸಿದ್ದಾರೆ. ಇನ್ನು 14 ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳೂ ಕೂಡ ಮತದಾನ ಮಾಡಿದ್ದಾರೆ. ಯಾರ್ಯಾರು ಎಲ್ಲಿ ಮತ ಹಾಕಿದ್ದಾರೆ ಎಂಬುದರ ಮಾಹಿತಿ ಇಲ್ಲಿದೆ.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರು ಮತದಾನ ಮಾಡಿದ್ದಾರೆ. ಪರಿವಾರ ಸಮೇತ ಆಗಮಿಸಿದ ಮತದಾನ ಮಾಡಿದ್ದಾರೆ. 

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಮನ್ಸೂರ್‌ ಅಲಿ ಖಾನ್‌ ಅವರು ಮತದಾನ ಮಾಡಿದ್ದಾರೆ. ಬಳಿಕ ಮಾತನಾಡಿದ ಅವರು, ಇಂದು ಬೆಳಗ್ಗೆ ಜಯನಗರದ ಎನ್.ಎಮ್.ಕೆ.ಆರ್.ವಿ ಕಾಲೇಜಿನ ಮತಗಟ್ಟೆಯಲ್ಲಿ  ಮತ ಚಲಾಯಿಸಿದೆ. ಬದಲಾವಣೆಗೆ, ಸಂವಿಧಾನದ ರಕ್ಷಣೆಗೆ ಮತ್ತು ದೇಶದ ಅಭ್ಯುದಯಕ್ಕೆ ನನ್ನ ಹಕ್ಕನ್ನು ಚಲಾಯಿಸಿದ್ದೇನೆ‌. ನೀವೂ ಕೂಡಾ ತಪ್ಪದೆ ನಿಮ್ಮ ಹಕ್ಕನ್ನು ಚಲಾಯಿಸಿ, ಬದಲಾವಣೆಗೆ ನಾಂದಿ ಹಾಡಿ ಎಂದು ಹೇಳಿದ್ದಾರೆ. 

Latest Videos


ಮಂಡ್ಯ ಲೋಕಸಭಾ ಕ್ಷೇತ್ರದ ಬಿಜೆಪಿ-ಜೆಡಿಎಸ್‌(ಎನ್‌ಡಿಎ) ಅಭ್ಯರ್ಥಿ ಎಚ್‌.ಡಿ. ಕುಮಾರಸ್ವಾಮಿ ಅವರು ರಾಮನಗರ ಜಿಲ್ಲೆಯ ಬಿಡದಿ ಸಮೀಪದ ಕೇತಿಗಾನಹಳ್ಳಿ ಗ್ರಾಮದ ಸಖೀ ಮತಗಟ್ಟೆಯಲ್ಲಿ (ಪಿಂಕ್ ಬೂತ್) ನನ್ನ ಕುಟುಂಬ ಸಮೇತವಾಗಿ ಮತದಾನ ಮಾಡಿದ್ದಾರೆ. ಬಳಿಕ ಮಾತನಾಡಿದ ಅವರು, ಪ್ರಜಾಪ್ರಭುತ್ವದ ಗೆಲುವಿಗಾಗಿ ಮತದ ಹಕ್ಕು ಚಲಾಯಿಸಿದ್ದು ನನಗೆ ಬಹಳ ಸಂತೋಷ ತಂದಿದೆ. ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡಬೇಕು ಎನ್ನುವುದು ನನ್ನ ಕಳಕಳಿ ಎಂದು ಮನವಿ ಮಾಡಿಕೊಂಡಿದ್ದಾರೆ. 

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬ್ರಿಜೇಷ್‌ ಚೌಟ ಅವರು ಮತಗಟ್ಟೆಗೆ ತೆರಳಿ ಮತ ಹಾಕಿದ್ದಾರೆ. ಬಳಿಕ ಮಾತನಾಡಿದ ಅವರು, ಎಲ್ಲರೂ ತಪ್ಪದೆ ಮತ ಹಾಕಿ ಎಂದು ಮನವಿ ಮಾಡಿಕೊಂಡಿದ್ದಾರೆ. 

ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ-ಜೆಡಿಎಸ್‌(ಎನ್‌ಡಿಎ) ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಕೂಡ ಮತ ಹಾಕಿದ್ದಾರೆ. ತಮ್ಮ ಕುಟುಂಬದ ಸದಸ್ಯರೊಂದಿಗೆ ಅಗಮಿಸಿ ಮತದಾನ ಮಾಡಿದ್ದಾರೆ. 

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರು ಕೂಡು ಮತದಾನ ಮಾಡುವ ಮೂಲಕ ತಮ್ಮ ಹಕ್ಕು ಚಲಾಯಿಸಿದ್ದಾರೆ.

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ತಮ್ಮ ಪತ್ನಿ ಜೊತೆ ಆಗಮಿಸಿದ ಮತದಾನ ಮಾಡಿದ್ದಾರೆ. 

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ರಾಜೀವ್‌ ಗೌಡ ಅವರು ಮತ ಹಾಕಿದ್ದಾರೆ. ಬಳಿಕ ಮಾತನಾಡಿದ ಅವರು, ಆತ್ಮೀಯ ಮತಬಾಂಧವರೇ, ನಾನು ನನ್ನ ಮತವನ್ನು ಕರ್ನಾಟಕದ ಅಭಿವೃದ್ಧಿಗಾಗಿ ಜನತೆಯ ಹಿತಕ್ಕಾಗಿ ಚಲಾಯಿಸಿದ್ದೇನೆ. ನೀವೂ ಕೂಡ; ಅಭಿವೃದ್ಧಿ ಶೂನ್ಯ ಹತ್ತು ವರ್ಷಗಳ ಅವಧಿಯ ಆಡಳಿತದ ಬದಲಾವಣೆಗಾಗಿ ಮತ ಚಲಾಯಿಸಿರಿ. ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಉಳಿವಿಗಾಗಿ ಮತ ಚಲಾಯಿಸಿರಿ  ಸುಂದರ, ಸ್ವಚ್ಛ, ಸಮೃದ್ಧ, ಸೌಹಾರ್ದ ಬೆಂಗಳೂರಿಗೆ ಮತ ಚಲಾಯಿಸಿರಿ. ಸ್ವಾಭಿಮಾನಿ ಕನ್ನಡಿಗರ ಕರ್ನಾಟಕದ ಆರ್ಥಿಕ ನ್ಯಾಯಕ್ಕಾಗಿ ಮತ ಚಲಾಯಿಸಿರಿ. ಗ್ಯಾರಂಟಿ ಯೋಜನೆಗಳ ಉತ್ತಮ ಅನುಷ್ಠಾನಕ್ಕಾಗಿ ಮತ ಚಲಾಯಿಸಿರಿ ಎಂದು ಹೇಳಿದ್ದಾರೆ. 

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಜಯಪ್ರಕಾಶ್‌ ಹೆಗ್ಡೆ ಅವರು ಮತದಾನ ಮಾಡಿದ್ದಾರೆ. ತಮ್ಮ ಪತ್ನಿ ಸಮೇತ ಮತಗಟ್ಟೆಗೆ ಆಗಮಿಸಿ ಮತ ಹಾಕಿದ್ದಾರೆ. 

ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಅವರು ಮತಗಟ್ಟೆಗೆ ತೆರಳಿ ಮತದಾನ ಮಾಡಿದ್ದಾರೆ.  ಬಳಿಕ ಮಾತನಾಡಿದ ಅವರು, ಇದು ಸಂವಿಧಾನದ ಹಬ್ಬವಾಗಿದ್ದು, ನಾನು ನನ್ನ ಹಕ್ಕನ್ನು ಚಲಾಯಿಸಿದೆ, ನೀವೂ ಕೂಡ ತಪ್ಪದೇ ಮತದಾನ ಮಾಡಿ, ನಿಮ್ಮ ಹಕ್ಕನ್ನು ಚಲಾಯಿಸಿ. ದೇಶದ ಭದ್ರತೆಗೆ, ಧರ್ಮದ ರಕ್ಷಣೆಗೆ, ಅಭಿವೃದ್ಧಿಗಾಗಿ ಮತ ನೀಡಿ ಎಂದು ಹೇಳಿದ್ದಾರೆ. 

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಅವರು ತಮ್ಮ ಪತ್ನಿ ಜತೆ ಆಗಮಿಸಿ ಮತ ಚಲಾಯಿಸುವ ಮೂಲಕ ತಮ್ಮ ಹಕ್ಕು ಚಲಾಯಿಸಿದ್ದಾರೆ. 

click me!