ಚುನಾವಣೆ ಗಿಮಿಕ್, ಯುಗಾದಿ ಹಬ್ಬದ ಪ್ರಯುಕ್ತ ಜನರಿಗೆ ಕೋಳಿ ಹಂಚಿದ ಶಾಸಕ!
First Published | Mar 23, 2023, 4:41 PM ISTಬೆಂಗಳೂರು ಗ್ರಾ.(ಮಾ.23): ಚುನಾವಣೆ ಸಮೀಸುತ್ತಿದ್ದಂತೆ ಮತದಾರನ್ನು ಸೆಳೆಯುವ ಸಲುವಾಗಿ ರಾಜಕಾರಣಿಗಳು ಒಂದಿಲ್ಲ ಒಂದು ಕಸರತ್ತು ಮಾಡುತ್ತಿದ್ದಾರೆ. ಯುಗಾದಿ ಹಬ್ಬ ನೆಪಮಾಡಿಕೊಂಡು ಮತದಾರರಿಗೆ ಬಲೆ ಬೀಸಿರುವ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಯುಗಾದಿ ಹಬ್ಬದ ಪ್ರಯುಕ್ತ ಕ್ಷೇತ್ರದ ಜನರಿಗೆ ಕೋಳಿ ಹಂಚಿಕೆ ಮಾಡಿದ್ದಾರೆ. ಪುಟ್ಟೇನಹಳ್ಳಿ ವಾರ್ಡ್ ನ 187 ರಲ್ಲಿ ಲೋಡ್ ಗಟ್ಟಲೆ ಕೋಳಿ ಹಂಚಿದ ಶಾಸಕರ ಬೆಂಬಲಿಗ ಮಾಜಿ ಉಪ ಮೇಯರ್ ಮೋಹನ್ ರಾಜ್. ಉಚಿತ ಕೋಳಿ ತೆಗೆದುಕೊಳ್ಳಲು ಮುಗಿಬಿದ್ದ ಸಾರ್ವಜನಿಕರು.