ಕೋಲಾರ ಸ್ಪರ್ಧೆಗೆ ಸಿದ್ದರಾಮಯ್ಯನ ಪ್ರಣಾಳಿಕೆ, ಬ್ಯಾನರ್, ಹಾಡು ಹೇಗಿತ್ತು.?

First Published | Mar 19, 2023, 12:10 PM IST

ಬೆಂಗಳೂರು (ಮಾ.19): ರಾಜ್ಯ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೋಲಾರದಿಂದ ಸ್ಪರ್ಧೆ ಮಾಡದಂತೆ ಹೈಕಮಾಂಡ್‌ ಸೂಚನೆ ನೀಡಿದೆ. ಆದರೆ, ಸಿದ್ದರಾಮಯ್ಯ ಅವರು ಪ್ರಜಾಧ್ವನಿ ಯಾತ್ರೆಯನ್ನು ಮುಗಿಸಿ ಕೋಲಾರದಲ್ಲಿ ಪ್ರಚಾರಕ್ಕೆ ಮಾಡಿಕೊಂಡಿದ್ದ ಎಲ್ಲ ಸಿದ್ಧತೆಗಳು ಕೂಡ ವ್ಯರ್ಥವಾಗಿವೆ. ಪ್ರತ್ಯೇಕ ಪ್ರಣಾಳಿಕೆ, ಪೋಸ್ಟರ್‌ ಹಾಗೂ ಪ್ರತ್ಯೇಕ ಹಾಡು ಎಲ್ಲವೂ ವ್ಯರ್ಥವಾಗಿದೆ. ಪ್ರಣಾಳಿಕೆ ಮತ್ತೊ ಪೋಸ್ಟರ್‌ಗಳ ಇಲ್ಲಿವೆ ನೋಡಿ.
 

ಕೋಲಾರದ ರೈತರ ಆದಾಯ ಅಭಿವೃದ್ಧಿಗೆ ಕ್ರಮ. ಮಾರುಕಟ್ಟೆ ವ್ಯವಸ್ಥೆ, ದಾಸ್ತಾನು ಮತ್ತು ಸಂಸ್ಕರಣಾ ಘಟಕಗಳನ್ನು ನಿರ್ಮಾಣ ಮಾಡುವುದು.

ಗುಡಿಸಲು ಮುಕ್ತ ಕೋಲಾರಕ್ಕೆ ವಿಶೇಷ ಆದ್ಯತೆ: ಕೋಲಾರ ನಗರ ಮತ್ತು ಗ್ರಾಮಾಂತರ ಪ್ರದೇಶ ಆರ್ಥಿಕವಾಗಿ ಹಿಂದುಳಿದ್ದಿದ್ದು, ಹಿಂದುಳಿದ ಎಲ್ಲ ಸಮುದಾಯದ ವರ್ಗಗಳಿಗೆ ಮನೆಗಳ ನಿರ್ಮಾಣ

Tap to resize

ಕೋಲಾರ ನಗರದಲ್ಲಿ 500 ಹಾಸಿಗೆ ಸಾಮರ್ಥ್ಯದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಾಣ ಮಾಡುವ ಮೂಲಕ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವುದು.

 ಮೈಸೂರು ಜನ್ಮಭೂಮಿ ಕೋಲಾರ ಕರ್ಮಭೂಮಿ. ಕೋಲಾರದಲ್ಲಿ ಉತ್ತಮ ರಸ್ತೆ, ನೀರು ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸಿ ಅಭಿವೃದ್ಧಿ ಮಾಡುವುದು.

ಸಿದ್ದರಾಮಯ್ಯ ಇಂದು ಯಾವ ಯಾವ ಕಾರ್ಯಕ್ರಮ ನಿಗದಿ ಆಗಿತ್ತು. ಪ್ರಣಾಳಿಕೆ, ಹಾಡು, ಯಾರ ಯಾರ ಜೊತೆ ಇಂಟ್ರಾಕ್ಷನ್? ಕೋಲಾರಕ್ಕೆ ಎನೇನು ಘೋಷಣೆ.. ಸಂಪೂರ್ಣ ಮಾಹಿತಿ .

ಕೋಲಾರ ನಗರದಲ್ಲಿ ಇಂದಿರಾ ಕ್ಯಾಂಟೀನ್- ಹಳೆ ಬಸ್ ಸ್ಟ್ಯಾಂಡ್ ಹತ್ತಿರ ಇರೋ ಇಂದಿರಾ ಕ್ಯಾಂಟೀನ್ ನ ಬಿಜೆಪಿ ಮುಚ್ಚಿದೆ. ಈಗ ನಗರದ 3 ಹೃದಯ ಭಾಗದಲ್ಲಿ ಹೊಸದಾಗಿ ತೆರೆಯಲಾಗುವುದು.

Latest Videos

click me!