ಡಿಕೆ ಶಿವಕುಮಾರ್(DK Shivakumar) ಸಿಎಂ ಆಗಲಿ ಎಂದು ರಾಮನಗರದ ಈಶ್ವರಪ್ಪ ಮೂರು ವರ್ಷಗಳಿಂದ ತಲೆಕೂದಲು, ಗಡ್ಡ ತೆಗೆಯದೆ ಹರಕೆ ಹೊತ್ತಿದ್ದರು. ಕುಂಭಮೇಳದಲ್ಲಿ ಮಾಡಿದ ಸಂಕಲ್ಪ ಈಗ ನೆರವೇರಿದ್ದು, ಮಂತ್ರಾಲಯದಲ್ಲಿ ಹರಕೆ ಪೂರ್ಣಗೊಳಿಸುವುದಾಗಿ ತಿಳಿಸಿದ್ದಾರೆ.
ರಾಜಕೀಯ ನಾಯಕರಿಗೆ ಅಭಿಮಾನಿಗಳು, ಬೆಂಬಲಿಗರು ಇರುವುದು ಸಾಮಾನ್ಯ. ಆದರೆ ಕೆಲವು ನಾಯಕರು ತಮ್ಮ ಅಭಿಮಾನಿಗಳ ಮೇಲೆ ಯಾವ ರೀತಿ ಪ್ರಭಾವಿಸಿರುತ್ತಾರೆ ಎಂದರೆ ಅಭಿಮಾನಿಗಳ ಪಾಲಿಗೆ ಅವರು ಕೇವಲ ರಾಜಕಾರಣಿಯಲ್ಲ, ನಾಯಕನಲ್ಲ ಅವರಲ್ಲಿ ದೇವರನ್ನ ಕಾಣುತ್ತಿರುತ್ತಾರೆ ಎಂದರೆ ನಂಬುತ್ತೀರ? ಹೌದು ಅಂಥ ನಾಯಕನಿಗಾಗಿ ಯಾವ ತ್ಯಾಗಕ್ಕೂ ಸಿದ್ಧರಿರುತ್ತಾರೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ.
25
ಡಿಕೆ ಶಿವಕುಮಾರ್ ಅಭಿಮಾನಿ ವಿಶೇಷ ಹರಕೆ ಫಲಿಸಿತು!
ರಾಮನಗರ ಜಿಲ್ಲೆಯ ಹಾರೋಹಳ್ಳಿ ತಾಲೂಕಿನ ಚಿಕ್ಕಸಾದೇನಹಳ್ಳಿ ಗ್ರಾಮದವರಾದ ಈಶ್ವರಪ್ಪ ಎಂಬ ಅಭಿಮಾನಿಯ ವಿಶೇಷ ಹರಕೆ ಇದೀಗ ಎಲ್ಲರ ಗಮನ ಸೆಳೆದಿದೆ.ಡಿಕೆ ಶಿವಕುಮಾರ್ ಕರ್ನಾಟಕದ ಮುಖ್ಯಮಂತ್ರಿ ಆಗಬೇಕು ಎಂಬ ಒಂದೇ ಕನಸಿಗಾಗಿ ಅವರು ಮೂರು ವರ್ಷಗಳ ಹಿಂದೆ ಅಪರೂಪದ ಹರಕೆಯೊಂದನ್ನು ಹೊತ್ತಿದ್ದರಂತೆ.
35
ಕುಂಭಮೇಳದಲ್ಲಿ ಪ್ರತಿಜ್ಞೆ; ತ್ರಿವೇಣಿ ಸಂಗಮದಲ್ಲಿ ವಿಶೇಷ ಪೂಜೆ!
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾಕುಂಭಮೇಳಕ್ಕೆ ತೆರಳಿದ್ದ ಈಶ್ವರಪ್ಪ, ಅಲ್ಲಿ ತ್ರಿವೇಣಿ ಸಂಗಮದಲ್ಲಿ ಡಿಕೆ ಶಿವಕುಮಾರ್ ಅವರ ಭಾವಚಿತ್ರ ಹಿಡಿದು ಪವಿತ್ರ ಸ್ನಾನ ಮಾಡಿದ್ದರು. ಇದೇ ವೇಳೆ 'ಡಿಕೆಶಿ ಮುಖ್ಯಮಂತ್ರಿ ಆಗುವವರೆಗೂ ನಾನು ತಲೆಕೂದಲು ಮತ್ತು ಗಡ್ಡ ತೆಗೆಯುವುದಿಲ್ಲ' ಎಂದು ದೇವರ ಮುಂದೆ ಸಂಕಲ್ಪ ಮಾಡಿದ್ದರು. ಅಂದಿನಿಂದ ಇಂದಿನವರೆಗೂ ಸಂಕಲ್ಪದಿಂದ ಹಿಂದೆ ಸರಿಯಲಿಲ್ಲ.
ಡಿಕೆಶಿ ಸಿಎಂ ಆಗಬೇಕು ಎಂಬ ಹರಕೆ ಹೊತ್ತು ದಿನಗಳು ಕಳೆದವು, ತಿಂಗಳುಗಳಾದವು, ತಿಂಗಳುಗಳು ವರ್ಷಗಳಾದವು. ಆದರೆ ಈಶ್ವರಪ್ಪ ತಮ್ಮ ಸಂಕಲ್ಪದಿಂದ ಹಿಂದೆ ಸರಿಯಲಿಲ್ಲ. ಮೂರು ವರ್ಷಗಳಿಂದ ತಲೆಕೂದಲು ಮತ್ತು ಗಡ್ಡವನ್ನು ಕತ್ತರಿಸದೇ ಹರಕೆಯನ್ನು ಮುಂದುವರಿಸಿದರು. ಅವರ ಈ ಅಭಿಮಾನ ಮತ್ತು ನಂಬಿಕೆ ಗ್ರಾಮದಲ್ಲಷ್ಟೇ ಅಲ್ಲ, ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ಚರ್ಚೆಯ ವಿಷಯವಾಗಿತ್ತು. ಡಿಕೆಶಿ ಸಿಎಂ ಆಗುವ ಸುದ್ದಿ ಕೇಳುವ ದಿನಕ್ಕಾಗಿ ಅವರು ಕಾತರದಿಂದ ಕಾಯುತ್ತಿದ್ದರು.
ಕನಸು ನನಸಾದ ಕ್ಷಣ; ಅಭಿಮಾನಿ ಈಶ್ವರಪ್ಪ ಭಾವುಕ
ಡಿ.ಕೆ. ಶಿವಕುಮಾರ್ ಸದ್ಯದಲ್ಲೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಸುದ್ದಿ ಹೊರಬಿದ್ದ ತಕ್ಷಣ ಈಶ್ವರಪ್ಪ ಅವರ ಸಂತಸಕ್ಕೆ ಪಾರವೇ ಇರಲಿಲ್ಲ. ಮೂರು ವರ್ಷಗಳ ತಪಸ್ಸಿಗೆ ಫಲ ಸಿಕ್ಕಂತಾಯಿತು. ಡಿಕೆಶಿ ಅವರನ್ನು ಖುದ್ದಾಗಿ ಭೇಟಿ ಮಾಡಿ ಶುಭಾಶಯ ಕೋರಿ, ತಮ್ಮ ಹರಕೆಯ ಬಗ್ಗೆ ಹೇಳಬೇಕೆಂಬ ಆಸೆಯಿದೆ ಎಂದು ಹೇಳಿಕೊಂಡಿದ್ದಾರೆ.
55
ಡಿಕೆಶಿ ಭೇಟಿಯ ಬಳಿಕ ಹರಕೆ ತೀರಿಸಲು ಸಿದ್ಧತೆ
ಅದರಂತೆ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಪ್ರಮಾಣ ಸ್ವೀಕರಿಸುವ ದಿನದಂದು ಅಥವಾ ಮರುದಿನ ಅವರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿದ ಬಳಿಕ ಹರಕೆ ತೀರಿಸುವ ಕಾರ್ಯ ಆರಂಭಿಸುವುದಾಗಿ, ಮೂರು ವರ್ಷಗಳಿಂದ ಬೆಳೆದಿರುವ ಗಡ್ಡ, ತಲೆಗೂದಲನ್ನು ತೆಗೆಯುವ ಮೂಲಕ ತಮ್ಮ ಸಂಕಲ್ಪವನ್ನು ಪೂರ್ಣಗೊಳಿಸುವುದಾಗಿ ಈಶ್ವರಪ್ಪ ತಿಳಿಸಿದ್ದಾರೆ.
ಮಂತ್ರಾಲಯಕ್ಕೆ ಭೇಟಿ
ಹರಕೆ ತೀರಿಸಿದ ಬಳಿಕ ಮಂತ್ರಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಲು ನಿರ್ಧರಿಸಿದ್ದಾರೆ. ಒಬ್ಬ ರಾಜಕೀಯ ನಾಯಕನ ಮೇಲಿನ ಅಭಿಮಾನ ಹೇಗೆ ಭಕ್ತಿ ಮತ್ತು ನಂಬಿಕೆಯ ರೂಪ ತಾಳಬಹುದು ಎಂಬುದಕ್ಕೆ ಈಶ್ವರಪ್ಪ ಅವರ ಸಂಕಲ್ಪ ಒಂದು ಜೀವಂತ ಉದಾಹರಣೆಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.