ಡಿಕೆ ಶಿವಕುಮಾರ್ ಸಂಪುಟದ ಸಂಭಾವ್ಯ ಸಚಿವರ ಪಟ್ಟಿ: ಕಾಂಗ್ರೆಸ್ 2.O ಸರ್ಕಾರದಲ್ಲಿ ಯಾರಿಗೆ ಅದೃಷ್ಟ?

Published : May 30, 2026, 01:24 PM IST

ಡಿಕೆ ಶಿವಕುಮಾರ್ ಕರ್ನಾಟಕದ ನೂತನ ಮುಖ್ಯಮಂತ್ರಿಯಾಗುವುದು ಬಹುತೇಕ ಖಚಿತವಾಗಿದ್ದು, ಅವರೊಂದಿಗೆ ಹಲವು ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ನಿರೀಕ್ಷೆಯಿದೆ. ಸಂಭಾವ್ಯ ಸಚಿವರ ಪಟ್ಟಿ ಮತ್ತು ಉಪಮುಖ್ಯಮಂತ್ರಿ ಸ್ಥಾನಗಳ ಕುರಿತು ಚರ್ಚೆಗಳು ನಡೆಯುತ್ತಿವೆ.

PREV
15
ಡಿಕೆ ಶಿವಕುಮಾರ್

ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಪ್ರಮಾಣವಚನ ಸ್ವೀಕರಿಸೋದು ಬಹುತೇಕ ಖಚಿತವಾಗಿದೆ. ಸದ್ಯದ ಮಾಹಿತಿಗಳ ಪ್ರಕಾರ, ಜೂನ್ 3ರಂದು ಡಿಕೆ ಶಿವಕುಮಾರ್ ಅವರ ಪದಗ್ರಹಣ ನಡೆಯುಲಿದೆ ಎಂದು ಹೇಳಲಾಗುತ್ತಿದೆ. ಈ ಎಲ್ಲಾ ಬೆಳವಣಿಗೆ ಡಿಕೆ ಶಿವಕುಮಾರ್ ಜೊತೆಯಲ್ಲಿ ಸುಮಾರು 10 ರಿಂದ 12 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಗಳಿವೆ.

25
ಸಚಿವ ಸ್ಥಾನದ ಆಕಾಂಕ್ಷಿಗಳು

ಈಗಾಗಲೇ ಸಚಿವ ಸ್ಥಾನದ ಆಕಾಂಕ್ಷಿಗಳು ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿಯಾಗುತ್ತಿದ್ದಾರೆ. ಸಿದ್ದರಾಮಯ್ಯನವರು ಸಹ ರಾಜೀನಾಮೆ ಸಲ್ಲಿಸಿದ ಬಳಿಕ ನೇರವಾಗಿ ದಹೆಲಿಗೆ ಪ್ರಯಾಣ ಬೆಳೆಸಿದ್ದರು. ಆಪ್ತರಿಗೆ ಸಚಿವ ಸ್ಥಾನ ಕೊಡಿಸುವ ಉದ್ದೇಶದಿಂದ ಸಿದ್ದರಾಮಯ್ಯ ದೆಹಲಿಗೆ ತೆರಳಿದ್ರು ಎಂಬ ಮಾತುಗಳು ಸಹ ಕೇಳಿ ಬಂದಿದ್ದವು.

35
ಸಂಭಾವ್ಯ ಸಚಿವರ ಪಟ್ಟಿ

ಹೆಚ್‌ಕೆ ಪಾಟೀಲ್ (ಗದಗ), ಜಿ.ಪರಮೇಶ್ವರ್ (ಕೊರಟಗೆರೆ), ಎಂ.ಬಿ.ಪಾಟೀಲ್ (ಬಬಲೇಶ್ವರ), ಜಮೀರ್ ಅಹ್ಮದ್ ಖಾನ್ (ಚಾಮರಾಜಪೇಟೆ), ಸತೀಶ್ ಜಾರಕಿಹೊಳಿ (ಯಮಕನಮರಡಿ), ಯತೀಂದ್ರ ಸಿದ್ದರಾಮಯ್ಯ (ಎಂಎಲ್‌ಸಿ), ಈಶ್ವರ್ ಖಂಡ್ರೆ (ಭಾಲ್ಕಿ), ಎನ್‌.ಎ.ಹ್ಯಾರಿಸ್ (ಶಾಂತಿನಗರ), ರಾಮಲಿಂಗಾರೆಡ್ಡಿ (ಬಿಟಿಎಂ ಲೇಔಟ್), ಕೆ.ಹೆಚ್‌.ಮುನಿಯಪ್ಪ (ದೇವನಹಳ್ಳಿ), ರೂಪಾ ಶಶಿಧರ (ಕೆಜಿಎಫ್‌), ಚಲುವರಾಯಸ್ವಾಮಿ (ನಾಗಮಂಗಲ), ಕೃಷ್ಣ ಬೈರೇಗೌಡ (ಬ್ಯಾಟರಾಯನಪುರ), ಪ್ರಿಯಾಂಕ್ ಖರ್ಗೆ (ಚಿತ್ತಾಪುರ), ಸಿಎಸ್ ನಾಡಗೌಡ (ಮುದ್ದೇಬಿಹಾಳ), ಲಕ್ಷ್ಮೀ ಹೆಬ್ಬಾಳ್ಕರ್ (ಬೆಳಗಾವಿ ಗ್ರಾಮಾಂತರ), ಶಿವರಾಜ್ ತಂಗಡಗಿ (ಕನಕಗಿರಿ)

45
ಸಂಭಾವ್ಯ ಸಚಿವರ ಪಟ್ಟಿ

ಸಲೀಂ ಅಹ್ಮದ್ (ಎಂಎಲ್‌ಸಿ), ಬೈರತಿ ಸುರೇಶ್ (ಹೆಬ್ಬಾಳ), ನಾಗೇಂದ್ರ (ಬಳ್ಳಾರಿ ಗ್ರಾಮಾಂತರ), ಯು.ಟಿ.ಖಾದರ್ (ಮಂಗಳೂರು), ನರೇಂದ್ರ ಸ್ವಾಮಿ (ಮಳವಳ್ಳಿ), ಬಿ.ಶಿವಣ್ಣ (ಆನೇಕಲ್), ಶ್ರೀನಿವಾಸ್ (ತರೀಕೆರೆ), ದಿನೇಶ್ ಗುಂಡೂರಾವ್ (ಗಾಂಧಿನಗರ), ಬಸನಗೌಡ ಪಾಟೀಲ್ ಬಾದರ್ಲಿ (ಎಂಎಲ್‌ಸಿ), ರಘುಮೂರ್ತಿ (ಚಳ್ಳಕೆರೆ), ಶಿವಲಿಂಗೆಗೌಡ (ಅರಸೀಕೆರೆ), ಟಿ.ಡಿ.ರಾಜೇಗೌಡ (ಶೃಂಗೇರಿ), ಎಸ್‌ಆರ್ ಶ್ರೀನಿವಾಸ್ (ಗುಬ್ಬಿ), ವಸಂತ್ ಕುಮಾರ್ (ಎಂಎಲ್‌ಸಿ), ಪ್ರಿಯಾಕೃಷ್ಣ (ಗೋವಿಂದರಾಜನಗರ), ಕೃಷ್ಣಪ್ಪ (ವಿಜಯನಗರ)

55
ಎಷ್ಟು ಜನ ಡಿಸಿಎಂ?

ಸಿದ್ದರಾಮಯ್ಯ ಅವರ ರಾಜೀನಾಮೆ ಬಳಿಕ ಮೂರು ಅಥವಾ ನಾಲ್ಕು ಜನರು ಉಪಮುಖ್ಯಮಂತ್ರಿ ಆಗ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಡಿಸಿಎಂ ಸ್ಥಾನಕ್ಕಾಗಿ ಸತೀಶ್ ಜಾರಕಿಹೊಳಿ, ಈಶ್ವರ್ ಖಂಡ್ರೆ, ಪ್ರಿಯಾಂಕ್ ಖರ್ಗೆ, ಜಮೀರ್ ಅಹ್ಮದ್ ಖಾನ್, ಜಿ.ಪರಮೇಶ್ವರ್, ಕೆಎಚ್ ಮುನಿಯಪ್ಪ ಸೇರಿದಂತೆ ಹಲವರು ಹೆಸರುಗಳು ಪಟ್ಟಿಯಲ್ಲಿವೆ. ಆದರೆ ಯಾವುದೇ ಡಿಸಿಎಂ ಸ್ಥಾನ ಬೇಡವೆಂದು ಡಿಕೆ ಶಿವಕುಮಾರ್ ಹೈಕಮಾಂಡ್ ಮುಂದೆ ಮನವಿ ಮಾಡಿಕೊಂಡಿದ್ದಾರಂತೆ. ಇದರ ಜೊತೆ ಕೆಪಿಸಿಸಿ ಘಟಕದ ಅಧ್ಯಕ್ಷರು ಯಾರ್ ಆಗ್ತಾರೆ ಎಂಬುದರ ಬಗ್ಗೆಯೂ ಕುತೂಹಲ ಮನೆ ಮಾಡಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories