ನಾಗಮಲೆಗೆ ಮಾಜಿ ಸಿಎಂ ಪುತ್ರ ಯತೀಂದ್ರ ಸಿದ್ಧರಾಮಯ್ಯ ಕಾಲ್ನಡಿಗೆ

Published : Nov 28, 2020, 07:59 PM ISTUpdated : Nov 28, 2020, 08:05 PM IST

ಪ್ರಸಿದ್ದ ಧಾರ್ಮಿಕ ಪುಣ್ಯಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ವರುಣಾ ಕ್ಷೇತ್ರದ ಶಾಸಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಪುತ್ರ ಯತೀಂದ್ರ ಸಿದ್ಧರಾಮಯ್ಯ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕೆ ಅಲ್ಲಿಂದ ಕಾಲ್ನಡಿಗೆಯ ಮೂಲಕ ಶ್ರೀ ನಾಗಮಲೆ ಕ್ಷೇತ್ರಕ್ಕೆ ತೆರಳಿ ಸ್ವಾಮಿಯ ದರ್ಶನ ಪಡೆದರು.

PREV
15
ನಾಗಮಲೆಗೆ ಮಾಜಿ ಸಿಎಂ ಪುತ್ರ ಯತೀಂದ್ರ ಸಿದ್ಧರಾಮಯ್ಯ  ಕಾಲ್ನಡಿಗೆ

ಪ್ರಸಿದ್ದ ಧಾರ್ಮಿಕ ಪುಣ್ಯಕ್ಷೇತ್ರ ಮಲೆ ಮಹದೇಶ್ವರ ಬೆಟ್ಟ ಮತ್ತು ನಾಗಮಲೆ ಕ್ಷೇತ್ರಗಳಿಗೆ ವರುಣಾ ಕ್ಷೇತ್ರದ ಶಾಸಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಪುತ್ರ ಯತೀಂದ್ರ ಸಿದ್ಧರಾಮಯ್ಯ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

25

ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಶುಕ್ರವಾರ ತಡರಾತ್ರಿಯೇ ಆಗಮಿಸಿದ್ದ ಯತೀಂದ್ರ ಸಿದ್ಧರಾಮಯ್ಯ ರಾಷ್ಟ್ರಪತಿ ಭವನ (ಅತಿಥಿ ಗೃಹ) ದಲ್ಲಿ ವಾಸ್ತವ್ಯ ಹೂಡಿದ್ದರು. ಬಳಿಕ ಬೆಳ್ಳಂಬೆಳಗ್ಗೆಯೇ 6 ಗಂಟೆಯ ವೇಳೆಗೆ ಮಲೆ ಮಾದಪ್ಪನ ದರ್ಶನ ಪಡೆದರು. 

35

 ಬಳಿಕ ಮುಖಂಡರ ಜೊತೆ ಇಂಡಿಗನತ್ತ ಗ್ರಾಮದವರೆಗೆ ಜೀಪ್‍ನಲ್ಲಿ ತೆರಳಿ ಬಳಿಕ ಕಾಲ್ನಡಿಗೆಯ ಮೂಲಕ ಶ್ರೀ ನಾಗಮಲೆ ಕ್ಷೇತ್ರಕ್ಕೆ ತೆರಳಿದರು.

45

ಬಳಿಕ ನಾಗಮಲೆ ಕ್ಷೇತ್ರದಿಂದ ಬೆಟ್ಟ ಇಳಿದು ವಾಹನದ ಮೂಲಕ ಗೋಪಿನಾಥಂಗೆ ತೆರಳಿ ಅಲ್ಲಿಂದ ಮಲೆ ಮಹದೇಶ್ವರ ಬೆಟ್ಟ ತಲುಪಿದರು.

55

ಈ ವೇಳೆ ಯತೀಂದ್ರ ಸಿದ್ಧರಾಮಯ್ಯ ಆಗಮಿಸಿರುವುದನ್ನು ತಿಳಿದ ಕೆಲ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ಅವರನ್ನು ಮಾತನಾಡಿಸಲು ಶ್ರೀ ಕ್ಷೇತ್ರದಲ್ಲಿ ಕಾದು ಕುಳಿತಿದ್ದರು. ಈ ವೇಳೆಗೆ ಆಗಮಿಸಿದ ಯತೀಂದ್ರ ಕುಶಲೋಪರಿ ವಿಚಾರಿಸಿ ಔಪಚಾರಿಕ ಚರ್ಚೆ ನಡೆಸಿದರು.

click me!

Recommended Stories