ಕಾಂಗ್ರೆಸ್ ನಾಯಕನಿಗೂ ಕೊರೋನಾ ಅಟ್ಯಾಕ್ : ಆದ್ರೂ ಇತರರಿಗೆ ಆರೋಗ್ಯವಾಗಿರಿ ಅಂದ್ರು..!

ಕೊರೋನಾ ವೈರಸ್‌ ಸೋಂಕು ಬಡವ, ಶ್ರೀಮಂತ ಎನ್ನದೆ ಎಲ್ಲರನ್ನೂ ಕಾಡುತ್ತಿದೆ. ಇದಕ್ಕೆ ರಾಜಕೀಯ ನಾಯಕರು ಹೊರತಾಗಿಲ್ಲ. ಕಾಂಗ್ರೆಸ್ ವಕ್ತಾರರೊಬ್ಬರಿಗೆ ಕೊರೋನಾ ವೈರಸ್ ಪೊಸಿಟಿವ್ ಇರುವುದು ದೃಢವಾಗಿದೆ. ಈ ಬಗ್ಗೆ ಅವರೇ ಇಂದು (ಶುಕ್ರವಾರ) ತಮ್ಮ ಟ್ವಿಟ್ಟರ್ ಖಾತೆ ಮೂಲಕ ಕೊರೋನಾ ಸೋಂಕು ಇರುವುದನ್ನು ಖಚಿತಪಡಿಸಿದ್ದಾರೆ. ಇನ್ನು ಕೊರೋನಾ ಖಚಿತವಾಗುತ್ತಿದ್ದಂತೆ ನಾಯಕರು ಬೇಗ ಗುಣಮುಖರಾಗಿ ಬನ್ನಿ ಹಾರೈಸಿದ್ದಾರೆ. 

ಕಾಂಗ್ರೆಸ್ ವಕ್ತಾರರೊಬ್ಬರಿಗೆ ಕೊರೋನಾ ವೈರಸ್ ಪೊಸಿಟಿವ್ ಇರುವುದು ದೃಢವಾಗಿದೆ. ಈ ಬಗ್ಗೆ ಅವರೇ ಇಂದು (ಶಕ್ರವಾರ) ತಮ್ಮ ಟ್ವಿಟ್ಟರ್ ಖಾತೆ ಮೂಲಕ ಕೊರೋನಾ ಸೋಂಕು ಇರುವುದನ್ನು ಖಚಿತಪಡಿಸಿದ್ದಾರೆ.
ಕಾಂಗ್ರೆಸ್ ವಕ್ತಾರ ಸಂಜಯ್ ಜಾ ಅವರಿಗೆ ಕೊರೋನಾ ವೈರಸ್ ಪೊಸಿಟಿವ್ ಇರುವುದನ್ನು ತಮ್ಮ ಟ್ವಿಟ್ಟರ್ ಖಾತೆ ಮೂಲಕ ಖಚಿತಪಡಿಸಿದ್ದಾರೆ.

ತಮಗೆ ಕೊರೋನಾ ವೈರಸ್ ಅಟ್ಯಾಕ್ ಆಗಿದ್ರೂ ಸಹ ಇತರರಿಗೆ ಆರೋಗ್ಯ ಕಾಳಜಿ ವಹಿಸಿ ಎಂದು ಹೇಳಿದ್ದಾರೆ.
"ನನ್ನ ಕೊರೋನಾ ಪರೀಕ್ಷಾ ವರದಿಯಲ್ಲಿ ಪಾಸಿಟಿವ್ ಬಂದಿದೆ. ಆದ್ರೆ, ರೋಗ ಲಕ್ಷಣಗಳು ಇನ್ನೂ ಕಾಣಿಸಿಕೊಳ್ಳದ ಕಾರಣ ಮುಂದಿನ 10ರಿಂದ 12 ದಿನಗಳ ವರೆಗೆ ನನ್ನ ಮನೆಯಲ್ಲೇ ಸೆಲ್ಫ್ ಕ್ವಾರಂಟೈನ್‌ಗೆ ಒಳಗಾಗಲಿದ್ದಾನೆ. ಕೊರೋನಾ ವೈರಸ್ ವಿಚಾರದಲ್ಲಿ ನಾವೆಲ್ಲಾ ದುರ್ಬಲರು. ಹೀಗಾಗಿ ಸೋಂಕು ಒಬ್ಬರಿಂದ ಒಬ್ಬರಿಗೆ ಹರಡುತ್ತಿದ್ದು, ಯಾರು ನಿರ್ಲಕ್ಷ್ಯ ಮಾಡಬೇಡಿ. ಎಲ್ಲರೂ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು ಸಂಜಯ್ ಜಾ ಅವರಿಗೆ ಸೊಂಕು ತಗುಲಿರುವುದು ತಿಳಿಯುತ್ತಿದ್ದಂತೆಯೇ, ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಜ್ಯೋತಿರಾದತ್ಯ ಸಿಂಧೀಯಾ ಟ್ವೀಟ್ ಮಾಡಿದ್ದು, ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಆದಷ್ಟು ಬೇಗ ಗುಣಮುಖರಾಗಿ ಬನ್ನಿ ಎಂದಿದ್ದಾರೆ.
ಇನ್ನು ರಾಜ್ಯಸಭಾ ಸದಸ್ಯೆ, ಶಿವಸೇನಾ ನಾಯಕಿ ಪ್ರಿಯಾಂಕ ಚತುರ್ವೇದಿ ಸಹ ಟ್ವೀಟ್ ಮಾಡಿದ್ದು, ಬೇಗ ಗುಣಮುಖರಾಗಿ ಬನ್ನಿ ಎಂದು ಹಾರೈಸಿದ್ದಾರೆ.

Latest Videos

click me!