ವಿಪಕ್ಷ ನಾಯಕರೊಂದಿಗೆ ಸೋನಿಯಾ ವಿಡಿಯೋ ಸಂವಾದ: ಮಣ್ಣಿನ ಮಗನಿಗೆ ಮೊದಲ ಪ್ರಾಶಸ್ತ್ಯ

First Published May 22, 2020, 5:35 PM IST

ವಿಪಕ್ಷ ನಾಯಕರೊಂದಿಗೆ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ನಡೆಸಿದ ವಿಡಿಯೋ ಸಂವಾದದಲ್ಲಿ ಮಾಜಿ ಪ್ರಧಾನಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಭಾಗವಹಿಸಿದ್ದರು. ವಿವಿಧ ರಾಜ್ಯಗಳ ಮುಖಂಡರ ಜೊತೆ ಜೊತೆಗಿನ ವಿಡಿಯೋ ಸಂವಾದದಲ್ಲಿ ದೇವೇಗೌಡರಿಗೆ ಮೊದಲ ಪ್ರಾಶಸ್ತ್ಯ ನೀಡಲಾಯಿತು. ಇನ್ನು ಪ್ರಮುಖವಾಗಿ ಇಬ್ಬರು ಮಾಜಿ ಸಿಎಂಗಳು ಸಭೆಗೆ ಗೈರಾಗಿರುವುದು ಹಲವು ಚರ್ಚೆಗಳಿಗೆ ಗ್ರಾಸವಾಗಿದೆ.

ವಿಪಕ್ಷ ನಾಯಕರೊಂದಿಗೆ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ವಿಡಿಯೋ ಸಂವಾದ ನಡೆಸಿದರು. ಇದೇ ವೇಳೆ ಕೊರೋನಾ ವಿಚಾರದಲ್ಲಿ ಕೇಂದ್ರ ಸರ್ಕಾರದ 20 ಲಕ್ಷ ಕೋಟಿ ಪ್ಯಾಕೇಜ್ ಬಗ್ಗೆ ಸೋನಿಯಾ ಗಾಂಧಿಯ ಜೊತೆ ಸುದೀರ್ಘ ಚರ್ಚೆ ನಡೆಸಿದರು.
undefined
ಸೋನಿಯಾಗಾಂಧಿ ನಡೆಸಿದ ವಿಡಿಯೋ ಸಂವಾದದಲ್ಲಿ ಮಾಜಿ ಪ್ರಧಾನಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಭಾಗವಹಿಸಿದ್ದರು.
undefined
ಸಂವಾದದಲ್ಲಿ ಸೋನಿಯಾ ಗಾಂಧಿ ಎದುರಾಗುತ್ತಲೆ ಗೌಡರು ಎದ್ದು ನಿಂತಾಗ ಸೋನಿಯಾಗಾಂಧಿ ದೇವೇಗೌಡರಿಗೆ ಪ್ರತಿಯಾಗಿ ಕೈ ಮುಗಿದು, ಗೌಡರ ಆರೋಗ್ಯ ವಿಚಾರಿಸಿದರು.
undefined
ವಿವಿಧ ರಾಜ್ಯಗಳ ಮುಖಂಡರ ಜೊತೆ ಜೊತೆಗಿನ ವಿಡಿಯೋ ಸಂವಾದದಲ್ಲಿ ದೇವೇಗೌಡರಿಗೆ ಮೊದಲ ಪ್ರಾಶಸ್ತ್ಯ ನೀಡಲಾಯಿತು.
undefined
ಗೌಡರ ವಿಡಿಯೋ ಕಾನ್ಫರೆನ್ಸ್ ನಲ್ಲಿ ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ ಸಾಥ್ ನೀಡಿದರು.
undefined
22 ರಾಜಕೀಯ ಪಕ್ಷಗಳು ಸಭೆಯಲ್ಲಿ ಭಾಗಿದ್ದರು. ಆದ್ರೆ, ದೆಹಲಿ ಸಿಎಂ ಕೇಜ್ರಿವಾಲ್, ಮಾಜಿ ಸಿಎಂಗಳಾದ ಮಯಾವತಿ, ಅಖಿಲೇಶ್ ಯಾದವ್ ಗೈರಾಗಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ
undefined
click me!