ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಕಾಲೇಜು ದಿನಗಳ ಪ್ರೇಮಕಥೆಯನ್ನು ಬಹಿರಂಗಪಡಿಸಿದ್ದಾರೆ. ಜೊತೆಗೆ, ತಮ್ಮ ಪತ್ನಿಯ ಟೆಂಪಲ್ ರನ್ ಹಾಗೂ ತಮ್ಮ ಸರ್ಕಾರದ 'ಭಾಗ್ಯ' ಯೋಜನೆಗಳ ಹಿಂದಿನ ನಿಜವಾದ ಅರ್ಥವನ್ನು ಸಂದರ್ಶನವೊಂದರಲ್ಲಿ ವಿವರಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಟೆಂಪಲ್‌ರನ್ ಮಾಡುವಲ್ಲಿ ಬಿಜಿಯಾಗಿದ್ದಾರೆ. ಒಂದೆಡೆ ಸಿದ್ದರಾಮಯ್ಯನವರು ಈಚೆಗಷ್ಟೇ ನಾನು ಯುಗಾದಿ ಸೇರಿದಂತೆ ಎಲ್ಲಾ ಹಿಂದೂ ಹಬ್ಬಗಳಲ್ಲ ನಾನ್‌ವೆಜ್ ತಿನ್ನುತ್ತೇನೆ ಎಂದು ಹೇಳಿದ್ದರು, ಅದರ ಬೆನ್ನಲ್ಲೇ ಇದೀಗ ಅವರ ಪತ್ನಿ ಪತಿಯ ಶ್ರೇಯಸ್ಸಿಗಾಗಿ ದೇವರ ಮೊರೆ ಹೋಗುತ್ತಿರುವುದು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ.
26
ಲವ್ ಮಾಡಿದ್ರಾ ಸಿದ್ದರಾಮಯ್ಯ
ಅದರ ನಡುವೆಯೇ ಇದೀಗ ಮುಖ್ಯಮಂತ್ರಿಯವರು ತಮ್ಮ ಲವ್ ಸ್ಟೋರಿ ಹಾಗೂ ಭಾಗ್ಯ ಬಗ್ಗೆ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ. ನೀವು ನಿಮ್ಮ ಲೈಫ್‌ನಲ್ಲಿ ಯಾರನ್ನಾದರೂ ಲವ್ ಮಾಡಿದ್ರಾ ಎನ್ನುವ ಪ್ರಶ್ನೆಗೆ ಸಿಎಂ, ಹಾ ಮಾಡಿದ್ದೆ ಅದೆಲ್ಲಾ ಈಗ ರಿವೀಲ್ ಮಾಡಲು ಆಗುವುದಿಲ್ಲ ಎಂದಿದ್ದಾರೆ.
36
ಕಾಲೇಜು ದಿನಗಳ ಮೆಲುಕು
ಆದರೆ, ಇದಾಗಲೇ ಸಂದರ್ಶನವೊಂದರಲ್ಲಿ ಸಿದ್ದರಾಮಯ್ಯನವರು ತಮ್ಮ ಲವ್‌ಸ್ಟೋರಿ ರಿವೀಲ್ ಮಾಡಿದ್ದರು. ಮೈಸೂರಿನಲ್ಲಿ ನಡೆದ ಅವರ ಕಾನೂನು ಕಾಲೇಜು ದಿನಗಳ ನೆನಪು ಮಾಡಿಕೊಂಡಿದ್ದ ಅವರು, ಅಂದು ಬೇರೆ ಜಾತಿಯ ಹುಡುಗಿಯನ್ನು ಮದುವೆಯಾಗುವ ಆಸೆ ಇತ್ತು. ಹುಡುಗಿ ಒಪ್ಪದ ಕಾರಣ ಈ ಪ್ರೇಮ ಯಶಸ್ವಿಯಾಗಲಿಲ್ಲ ಎಂದಿದ್ದರು.
ಆದರೆ ಇದೀಗ ಅವರು ಆ ವಿಷಯವನ್ನು ಮತ್ತೆ ಬಹಿರಂಗಮಾಡಲಿಲ್ಲ. ಆದರೆ ಭಾಗ್ಯ ಬಗ್ಗೆ ಕೇಳಿದ ಪ್ರಶ್ನೆಗೆ ಸ್ವಾರಸ್ಯಕರವಾಗಿ ಉತ್ತರಿಸಿದ್ದಾರೆ.
56
ಯಾರೀ ಭಾಗ್ಯ?
ಸಿದ್ದರಾಮಯ್ಯ ಎಂದರೆ ಆ ಭಾಗ್ಯ, ಈ ಭಾಗ್ಯ. ಹಾಗಿದ್ದರೆ ಆ ಭಾಗ್ಯ ಯಾವುದು ಎಂದು ಕೇಳಿದ ಪ್ರಶ್ನೆಗೆ ಸಿದ್ದರಾಮಯ್ಯನವರು, ಅದು ಯಾರೊಬ್ಬಳ ಹೆಸರಲ್ಲ, ಬದಲಿಗೆ ಒಂದು ಶಬ್ದ ಅಷ್ಟೇ. ಅದು ಒಂದು ವಸ್ತು ಎಂದಿದ್ದಾರೆ.
66
ಭಾಗ್ಯದ ಮುಂದುವರೆದ ಭಾಗ
ಬಡ ಜನರು ನೆಮ್ಮದಿಯಿಂದ ಇರಬೇಕು ಎಂದು ಭಾಗ್ಯ ಕೊಡುತ್ತಿದ್ದೇನೆ. ಭಾಗ್ಯದ ಮುಂದುವರೆದಿರುವ ಭಾಗವಾಗಿ ಗ್ಯಾರೆಂಟಿ ಕೊಡುತ್ತಿದ್ದೇನೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.