4ನೇ ಆಷಾಢ ಶುಕ್ರವಾರ ಹಿನ್ನೆಲೆಯಲ್ಲಿ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಕುಟುಂಬ ಸಮೇತ ಚಾಮುಂಡೇಶ್ವರಿ ದರ್ಶನ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅಂದರೆ ಸಮಾವೇಶ, ಸಮಾವೇಶ ಅಂದರೆ ಸಿದ್ದರಾಮಯ್ಯ. ಸಿಎಂ ಸ್ಥಾನ ಅಲ್ಲಾಡುವ ವೇಳೆಯಲ್ಲಿ ಈ ರೀತಿಯ ಸಮಾವೇಶ ಮಾಡಿ ಕಾಂಗ್ರೆಸ್ ಹೈಕಮಾಂಡ್‌ಗೆ ಬೆದರಿಸುವ ತಂತ್ರ ಸಿದ್ದರಾಮಯ್ಯಗೆ ಸಿದ್ಧಿಸಿದೆ ಎಂದು ಆರೋಪಿಸಿದರು.