ಎಂಟಿಬಿ ನಾಗರಾಜ್ ಮನೆಯಲ್ಲಿ ಆಯುಧ ಪೂಜೆ: ಕಂಗೊಳಿಸಿದ ಫೆರಾರಿ, ರೋಲ್ಸ್ ರಾಯ್ಸ್

First Published | Oct 25, 2020, 4:55 PM IST

ವಿಧಾನ ಪರಿಷತ್ ಸದಸ್ಯ, ಬಿಜೆಪಿ ನಾಯಕ ಎಂಟಿಬಿ ನಾಗರಾಜ್ ಮನೆಯಲ್ಲಿ ಆಯುಧ ಪೂಜೆ ಕಳೆಗಟ್ಟಿದೆ. ಹೂಡಿ ಸಮೀಪದ ತಮ್ಮ ನಿವಾಸದಲ್ಲಿ ಫೆರಾರಿ, ರೋಲ್ಸ್ ರಾಯ್ಸ್ ಸೇರಿದಂತೆ ದುಬಾರಿ ಬೆಲೆಯ ಕಾರುಗಳಿಗೆ ನಾಗರಾಜ್ ಕುಟುಂಬದ ಸದಸ್ಯರು ಪೂಜೆ ಸಲ್ಲಿಸಿದ್ದಾರೆ. ಐಷಾರಾಮಿ ಕಾರುಗಳಿಗೆ ಪೂಜೆ ಮಾಡಿರುವ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. 

ಬಿಜೆಪಿ ವಿಧಾನ ಪರಿಷತ್​ ಸದಸ್ಯ ಎಂಟಿಬಿ ನಾಗರಾಜ್ ನಿವಾಸದಲ್ಲಿ ಆಯುಧ ಪೂಜೆಯನ್ನು ಸಂಭ್ರಮದಿಂದ ಆಚರಿಸಿದರು.
ಹೂಡಿ ಸಮೀಪದ ತಮ್ಮ ನಿವಾಸದಲ್ಲಿ ಫೆರಾರಿ, ರೋಲ್ಸ್ ರಾಯ್ಸ್ ಸೇರಿದಂತೆ ದುಬಾರಿ ಬೆಲೆಯ ಕಾರುಗಳಿಗೆ ನಾಗರಾಜ್ ಕುಟುಂಬದ ಸದಸ್ಯರು ಪೂಜೆ ಸಲ್ಲಿಸಿದ್ದಾರೆ.
Tap to resize

ರೋಲ್ಸ್ ರಾಯ್ಸ್ ಫ್ಯಾಂಟಮ್‌, ಫೆರಾರಿ, ಮರ್ಸಿಡಿಸ್ ಬೆಂಝ್, ಟೊಯೋಟಾ ಫಾರ್ಚುನರ್, ಇನ್ನೋವಾ ಸೇರಿದಂತೆ 8 ಐಷಾರಾಮಿ ಕಾರು, ತಮ್ಮ ಲೈಸೆನ್ಸ್ ಹೊಂದಿದ ಪಿಸ್ತೂಲ್ ಗೆ ಸಹ ಎಂಟಿಬಿ ನಾಗರಾಜ್ ಪೂಜೆ ಸಲ್ಲಿಸಿದರು.
ಕಳೆದ ಅಗಸ್ಟ್​ನಲ್ಲಿ ಎಂಟಿಬಿ ನಾಗರಾಜ್​ 6 ಕೋಟಿ ರೂಪಾಯಿಯ ನೀಲಿ ಬಣ್ಣದ ಫೆರಾರಿ ಕಾರ್​ ಖರೀದಿಸಿದ್ದರು.
ಅಲ್ಲದೇ ಅದಕ್ಕೂ ಮುನ್ನ ಅನರ್ಹ ಶಾಸಕರಾಗಿದ್ದ ವೇಳೆ ಸುಮಾರು 12 ಕೋಟಿ ರೂಪಾಯಿಯ ಬಿಳಿ ಬಣ್ಣದ ರೋಲ್ಸ್ ರಾಯ್ಸ್ ಕಾರ್​ ಎಂಟಿಬಿ ನಿವಾಸಕ್ಕೆ ಸೇರಿತ್ತು.

Latest Videos

click me!