ಖ್ಯಾತ ಗಾಲ್ಫರ್‌ ಟೈಗರ್‌ ವುಡ್ಸ್‌ ಕಾರು ಭೀಕರ ಅಪಘಾತ..! ನೂರಾರು ಅಡಿ ಪ್ರಪಾತಕ್ಕೆ ಬಿದ್ದ ಕಾರು

Suvarna News   | Asianet News
Published : Feb 24, 2021, 10:40 AM ISTUpdated : Feb 24, 2021, 11:51 AM IST

ನ್ಯೂಯಾರ್ಕ್‌: ಅಮೆರಿಕದ ಖ್ಯಾತ ವೃತ್ತಿಪರ ಗಾಲ್ಫರ್‌ ಟೈಗರ್ ವುಡ್ಸ್‌ ಕಾರು ಭೀಕರ ಅಪಘಾತಕ್ಕೆ ತುತ್ತಾಗಿದ್ದು, ಗಂಭೀರ ಗಾಯಗೊಂಡಿರುವ ವುಡ್ಸ್‌ರನ್ನು ಲಾಸ್‌ ಏಂಜಲೀಸ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಮಂಗಳವಾರ(ಫೆ.23) ಈ ಅವಘಡ ಸಂಭವಿದ್ದು, ಟೈಗರ್‌ ವುಡ್ಸ್ ಪ್ರಯಾಣಿಸುತ್ತಿದ್ದ ಕಾರು ನೂರಾರು ಅಡಿ ಪ್ರಪಾತಕ್ಕೆ ಬಿದ್ದಿದ್ದು, ಅಕ್ಷರಶಃ ನುಜ್ಜು-ಗುಜ್ಜಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕಾರು ಅಪಘಾತದ ರಬಸಕ್ಕೆ ಟೈಗರ್‌ ವುಡ್ಸ್‌ ಕಾಲುಗಳೆರಡು ಗಾಯಕ್ಕೆ ತುತ್ತಾಗಿವೆ.  

PREV
16
ಖ್ಯಾತ ಗಾಲ್ಫರ್‌ ಟೈಗರ್‌ ವುಡ್ಸ್‌ ಕಾರು ಭೀಕರ ಅಪಘಾತ..! ನೂರಾರು ಅಡಿ ಪ್ರಪಾತಕ್ಕೆ ಬಿದ್ದ ಕಾರು

ದಿಗ್ಗಜ ವೃತ್ತಿಪರ ಗಾಲ್ಫರ್‌ ಎಡ್ರಿಕ್‌ ಟೈಗರ್‌ ವುಡ್ಸ್‌ ಕಾಲಿಪೋರ್ನಿಯಾದಲ್ಲಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಗಂಭೀರ ಗಾಯಕ್ಕೆ ತುತ್ತಾಗಿದ್ದು, ಸದ್ಯ ಲಾಸ್‌ ಏಂಜಲೀಸ್‌ನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.

26

ಪ್ರತ್ಯಕ್ಷದರ್ಶಿಗಳ ಮಾಹಿತಿಯಂತೆ ಭೀಕರ ಅಪಘಾತದ ಹೊರತಾಗಿಯೂ ಟೈಗರ್‌ ವುಡ್ಸ್‌ ಎಚ್ಚರ ತಪ್ಪಿರಲಿಲ್ಲ ಹಾಗೂ ಮಾತನಾಡುತ್ತಿದ್ದರು ಎಂದು ತಿಳಿಸಿದ್ದಾರೆ.

36

ಅಪಘಾತಕ್ಕೆ ತುತ್ತಾಗಿದ್ದ ಟೈಗರ್ ವುಡ್ಸ್‌ರನ್ನು ಹೈಡ್ರೊಲಿಕ್‌ ಸ್ಪ್ರೆಡರ್ ಟೂಲ್‌ ಬಳಸಿ ಕಾರಿನೊಳಗಿನಿಂದ ಹೊರತೆಗೆಯಲಾಯಿತು. ಆದರೆ ವುಡ್ಸ್‌ ತಮ್ಮ ಕಾಲಿನ ಮೇಲೆ ಸ್ವತಂತ್ರವಾಗಿ ನಿಲ್ಲಲು ಸಾಧ್ಯವಾಗಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

46

ಮಂಗಳವಾರ ಸ್ಥಳೀಯ ಕಾಲಮಾನ 7.12ರ ವೇಳೆಗೆ ಈ ಅಪಘಾತ ಸಂಭವಿಸಿದೆ, ಈ ಘಟನೆ ಗಮನಕ್ಕೆ ಬರುತ್ತಿದ್ದಂತೆ ಸ್ಥಳೀಯ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಸೂಕ್ತರೀತಿಯಲ್ಲಿ ಸ್ಪಂದಿಸಿದ್ದಾರೆಂದು ಲಾಸ್ ಏಂಜಲೀಸ್‌ ಕೌಂಟಿ ಅಧಿಕಾರಿಗಳು ತಿಳಿಸಿದ್ದಾರೆ.

56

ಟೈಗರ್‌ ವುಡ್ಸ್‌ ಪಾದ ಹಾಗೂ ಎರಡು ಕಾಲುಗಳಿಗೂ ಬಲವಾದ ಪೆಟ್ಟು ಬಿದ್ದಿದ್ದು, ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ವರದಿಯಾಗಿದೆ.

66

ಪ್ರಾಥಮಿಕ ಮಾಹಿತಿಯ ಪ್ರಕಾರ ವುಡ್ಸ್‌ ಹ್ಯುಂಡೈ ಜಿನಿಸಿಸ್‌ SUV ಕಾರನ್ನು ಚಲಾಯಿಸುತ್ತಿದ್ದರು. ಸಾಮಾನ್ಯ ವೇಗಕ್ಕಿಂತಲೂ ಹೆಚ್ಚಿನ ವೇಗದಲ್ಲಿ ಕಾರು ಓಡಿಸಿದ್ದರಿಂದ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಅಪ್ಪಳಿಸಿದೆ. ಬಳಿಕ ಕಾರು ನೂರಾರು ಅಡಿ ಆಳಕ್ಕೆ ಹೋಗಿ ಬಿದ್ದಿದೆ ಎನ್ನಲಾಗಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories