ಈಗಾಗಲೇ ಜಿಮ್, ಈಜು ತರಬೇತಿ ಸೇರಿದಂತೆ ಕೆಲ ಕ್ರೀಡಾ ತರಬೇತಿ ಆರಂಭಿಸಲು ಕ್ರೀಡಾ ಇಲಾಖೆ ಮಾರ್ಗಸೂಚಿ ಪ್ರಕಟಿಸಿದೆ. ಇದೀಗ ಸ್ಥಗಿತಗೊಂಡಿರುವ ಎಲ್ಲಾ ಕ್ರೀಡಾ ಸ್ಪರ್ಧೆ ಆಯೋಜಿಸಲು ಕೇಂದ್ರ SOP ಪ್ರಕಟಿಸಿದೆ. ಕೇಂದ್ರದ ನೂತನ ಮಾರ್ಗಸೂಚಿಗಳ ವಿವರ ಇಲ್ಲಿದೆ.
6 ಅಡಿಗಳ ಸಾಮಾಜಿಕ ಅಂತರ ಕಡ್ಡಾಯವಾಗಿದೆ. ಆಡುವಾಗ, ತರಬೇತಿ ವೇಳೆ ಹೊರತು ಪಡಿಸಿ ಉಳಿದೆಲ್ಲಾ ಕಡೆ ಫೇಸ್ ಮಾಸ್ಕ್ ಕಡ್ಡಯವಾಗಿದೆ. ಕ್ರೀಡಾಪಟುಗಳು ಕೈಗಳನ್ನು ಶುಚಿಯಾಗಿ ತೊಳೆಯುವುದು, ಸ್ಯಾನಿಟೈಸ್ ಬಳಕೆ ಮಾಡಬೇಕು.
ಕ್ರೀಡಾ ಆಯೋಜನೆಗೆ ಕೊರೋನಾ ನಿಘಾ ವಹಿಸಲು ಪ್ರತ್ಯೇಕ ತಂಡ ರಚನೆ ಮಾಡಬೇಕು. ಈ ತಂಡ ಕ್ರೀಡಾಪಟುಗಳ ಆರೋಗ್ಯ, ಕೊರೋನಾ ಪರೀಕ್ಷೆ ಕುರಿತು ತಪಾಸಣೆ ಮಾಡಬೇಕು. ಯಾವುದೇ ರೋಗಲಕ್ಷಣಗಲು ಕಂಡುಬಂದರೆ ಪರೀಕ್ಷೆ ಮಾಡಿಸಿ, ವರದಿ ಬಳಿಕ ಸೂಕ್ತ ಕ್ರಮ ಕೈಗೊಳ್ಳಬೇಕು.
ಕ್ರೀಡಾಭಿಮಾನಿಗಳಿಗೆ ಸಂಪೂರ್ಣ ಅವಕಾಶವಿಲ್ಲ. ಕೇವಲ ಶೇಕಡಾ 50 ರಷ್ಟು ಕ್ರೀಡಾಭಿಮಾನಿಗಳಿಗೆ ಮಾತ್ರ ಕ್ರೀಡಾಂಗಣ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ಕ್ರೀಡಾಭಿಮಾನಿಗಳ ನಡುವೆ ಸಾಮಾಜಿಕ ಅಂತರ, ಮಾಸ್ಕ, ಸ್ಯಾನಿಟೈಸೇಶನ್ ಕಡ್ಡಾಯವಾಗಿದೆ.
ಮೈದಾನದಲ್ಲಿ ಆಟಗಾರರು ಉಗುಳುವುದು, ಹಸ್ತಲಾಘವ ಮಾಡುವುದು ಸೇರಿದಂತೆ ಕೊರೋನಾ ಮಾರ್ಗಸೂಚಿಗಳನ್ನು ಉಲ್ಲಂಘಿಸುವಂತಿಲ್ಲ. ಉಲ್ಲಂಘಿಸಿದವರಿಗೆ ಪೆನಾಲ್ಟಿ ವಿಧಿಸಲಾಗುವುದು.
ಕೋಚ್, ಸಿಬ್ಬಂಧಿ ಅಥವಾ ಅಭಿಮಾನಿಗಳು ವಯಸ್ಸಾದವರೂ, ಗರ್ಭಿಣಿಯರು ಮಕ್ಕಳ ಕುರಿತು ತೀವ್ರ ಎಚ್ಚರಿಕೆ ವಹಿಸಬೇಕು. ಪ್ರತ್ಯೇಕ ತಂಡ ಇದರ ಕುರಿತು ನಿಘಾ ವಹಿಸಬೇಕು.
ಕ್ರೀಡಾ ಚಟುವಟಿಕೆ ಆಯೋಜಕರು ಸ್ಥಳೀಯ ಆರೋಗ್ಯ ಅಧಿಕಾರಿಗಳ ನೆರವಿನೊಂದಿಗೆ ಕ್ರೀಡಾ ವಲಯ, ಕ್ರೀಡಾಂಗಣ, ಕ್ರೀಡಾಪಟುಗಳು ತಂಗುವ ಹೊಟೆಲ್ ಸೇರಿದಂತೆ ಎಲ್ಲಡೆ ಶುಚಿತ್ವ, ಸ್ಯಾನಿಟೇಶನ್ ಸೇರಿದಂತ ಕೊರೋನಾ ಮಾರ್ಗಸೂಚಿ ಪಾಲಿಸುವಂತೆ ಹಾಗೂ ಹರಡದಂತೆ ನೋಡಿಕೊಳ್ಳಬೇಕು.
ಸಿಬ್ಬಂದಿಗಳು ಮಾಸ್ಕ್, ಪಿಪಿಇ ಕಿಟ್, ಸ್ಯಾನಿಟೈಸೇಶನ್ ಮಾಡಿಕೊಳ್ಳಬೇಕು. ಪ್ರತಿ ಪಂದ್ಯ ಆಥವಾ ಸ್ಪರ್ಧೆಗೂ ಮೊದಲು ಹಾಗೂ ಬಳಿಕ ಕ್ರೀಡಾಂಗಣವನ್ನು ಸ್ಯಾನಿಟೈಸೇಶನ್ ಮಾಡಬೇಕು. ಐಸೋಲೇಶನ್ ಸೆಂಟರ್, ಕೋವಿಡ್ ಸೆಂಟರ್, ಆರೋಗ್ಯ ತಪಾಸಣೆ ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ಮೊದಲೇ ಮಾಡಿಕೊಂಡಿರಬೇಕು.
ಇನ್ನು ಕ್ರೀಡಾಂಗಣಕ್ಕೆ ಬರದೆ ಮನೆಯಿಂದಲೂ ಕೆಲಸ ಮಾಡಬಹುದಾದ ಸಹಾಯಕ ಸಿಬ್ಬಂದಿಗಳು ಸೇರಿದಂತೆ ಆಡಳಿತ ಕಮಿಟಿ ಅಧಿಕಾರಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ಮಾಡಿಕೊಡಬೇಕು.
ಸಿಸಿಟಿವಿ ಅಳವಡಿಕೆ ಮಾಡಿಬೇಕು. ಈ ಮೂಲಕ ಎಲ್ಲೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದಂತೆ ನೋಡಿಕೊಳ್ಳಬೇಕು. ಕ್ರೀಡಾಪಟುಗಳ ಕೋಣೆಗಳು, ಕೀಡಾ ವಲಯಗಳು ಗಾಳಿಯಾಡುವಂತೆ ನೋಡಿಕೊಳ್ಳಬೇಕು.