ಉತ್ತಮ ವಿಚಾರಕ್ಕೆ ಧ್ವನಿ ಎತ್ತದಿದ್ದರೆ, ಇದ್ದೂ ಸತ್ತಂತೆ: ಮೋದಿಗೆ ವಿಜೇಂದರ್ ಪಂಚ್!
First Published | Dec 10, 2020, 6:03 PM ISTದೆಹಲಿಯ ಗಡಿ ಭಾಗದಲ್ಲಿ ನಡೆಯತ್ತಿರುವ ರೈತರ ಪ್ರತಿಭಟನೆಗೆ ಸೆಲೆಬ್ರೆಟಿಗಳು, ಕ್ರಿಕೆಟಿಗರು, ಕ್ರೀಡಾಪಟುಗಳು ಕೈಜೋಡಿಸುತ್ತಿದ್ದಾರೆ. ಈ ಮೂಲಕ ಪ್ರತಿಭಟನೆ ಕಾವು ಹೆಚ್ಚಿಸಿದ್ದಾರೆ. ದಿನದಿಂದ ದಿನಕ್ಕೆ ಪ್ರತಿಭಟನೆ ಉಗ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಇದೀಗ ಭಾರತದ ಬಾಕ್ಸರ್, ಕಾಂಗ್ರೆಸ್ ಪಕ್ಷದ ಸದಸ್ಯ ವಿಜೇಂದರ್ ಸಿಂಗ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಇದೇ ವೇಳೆ ಖೇಲ್ ರತ್ನ ವಾಪಸ್ ನೀಡುವುಜಾಗಿ ಕೇಂದ್ರದ ವಿರುದ್ಧ ಗುಡುಗಿದ್ದಾರೆ.