ಸಾರ್ವಕಾಲಿಕ ಶ್ರೇಷ್ಠ ಫುಟ್ಬಾಲ್ ಆಟಗಾರಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಒಬ್ಬರು. ಅವರ ವೈಯಕ್ತಿಕ ಜೀವನವೂ ಸಖತ್ ಇಂಟರೆಸ್ಟಿಂಗ್.
ರೊನೊಲ್ಡೊ ಹಲವು ಮಹಿಳೆಯರೊಂದಿಗೆ ಡೇಟಿಂಗ್ ಮಾಡಿದ್ದಾರೆ ಎಂದು ವರದಿಯಾಗಿದೆ.
ಪ್ರಸ್ತುತ ಅವರು ತಮ್ಮ ಈಗಿನ ಗರ್ಲ್‌ಫ್ರೆಂಡ್ ಜಾರ್ಜಿನಾ ರೊಡ್ರಿಗಸ್ ಜೊತೆ ಮುಂದಿನ ಜೀವನ ನೆಡೆಸಲು ಪ್ಲಾನ್ ಮಾಡುತ್ತಿದ್ದಾರೆ.
ಜಾರ್ಜಿನಾ ರೊಡ್ರಿಗಸ್ ಜೊತೆ ಡೇಟಿಂಗ್ ಮಾಡುತ್ತಿದ್ದು, ಈ ಕಪಲ್‌ಗೆ ಮಗಳು ಹಾಗೂ ಇಬ್ಬರು ಗಂಡು ಮಕ್ಕಳಿದ್ದಾರೆ.
ಈ ಹಿಂದೆ ಐರಿನಾ ಶೇಕ್ ಮತ್ತು ಗೆಮ್ಮಾ ಅಟ್ಕಿನ್ಸನ್ ಮುಂತಾದ ಮಾಡೆಲ್‌ಗಳ ಜೊತೆ ಡೇಟ್ ಮಾಡಿದ್ದರು.ಇನ್ನೂ ಹಲವು ಮಹಿಳೆಯರೊಂದಿಗೆ ಸಂಬಂಧ ಹೊಂದಿದ್ದರು.
ಪ್ಯಾರಿಸ್ ಹಿಲ್ಟನ್: ಅಮೆರಿಕನ್ ಟಿವಿ ನಿರೂಪಕಿ ಪ್ಯಾರಿಸ್ ಜೊತೆ ರೊನಾಲ್ಡೊ ಒಂದೆರಡು ಸಂದರ್ಭಗಳಲ್ಲಿ ಗುರುತಿಸಲ್ಪಟ್ಟರು. ಆದರೆ , ಇಬ್ಬರೂ ನಿಜವಾಗಿಯೂ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಎಂದು ದೃಢ ಪಡಿಸಲಿಲ್ಲ.
ಕಿಮ್ ಕಾರ್ಡಶಿಯಾನ್: ಮಾಡೆಲಿಂಗ್ ಇಂಡಸ್ಟಿಯ ಪ್ರಸಿದ್ಧ ಹೆಸರುಕಿಮ್ . ರೊನಾಲ್ಡೊ 2010ರಲ್ಲಿ ಅಮೇರಿಕನ್ ಮಾಡಲ್ ಜೊತೆಹಾಲಿಡೇಕಳೆದಿದ್ದಾರೆ ಎಂದು ವರದಿಯಾಗಿದೆ. ಆದರೆ, ಇಬ್ಬರೂ ನಂತರ ಒಟ್ಟಿಗೆ ಕಾಣಲಿಲ್ಲ ಮತ್ತು ಡೇಟಿಂಗ್ ಮಾಡುತ್ತಿದ್ದಾರೆ ಎಂದು ಯಾರೂ ಖಚಿತಪಡಿಸಿಲ್ಲ.
ಸೊರಾಯಾ ಚೇವ್ಸ್: ಎರಡನೇ ಗರ್ಲ್‌ಫ್ರೆಂಡ್ ಮರ್ಚೆ ರೊಮೆರೊ ಜೊತೆ ಬ್ರೇಕಪ್ ಆದ ನಂತರ, ಸೊರಾಯಾಳೊಂದಿಗೆ ಸಂಬಂಧದಲ್ಲಿದ್ದರು ಎಂದು ವರದಿಯಾಗಿದೆ.ಪೋರ್ಚುಗೀಸ್ ಚಲನಚಿತ್ರ 'ಕಾಲ್ ಗರ್ಲ್' ನಲ್ಲಿ ಲೀಡ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅದರೆ ಇವರ ರಿಲೆಷನ್‌ಶಿಪ್ ಬಗ್ಗೆ ಡೃಢಪಟ್ಟಿಲ್ಲ.
ಮಿಯಾ ಜುಡಾಕೆನ್: ರೊನಾಲ್ಡೊರ ಹಳೆಯ ಗೆಳತಿಯರಲ್ಲಿ ಒಬ್ಬರು. ಕೇವಲ 18 ವರ್ಷದವಳಿದ್ದಾಗ ಅವಳೊಂದಿಗೆ ಡೇಟಿಂಗ್ ಮಾಡಲು ಪ್ರಾರಂಭಿಸಿದರು ಹಾಗೂ ಇಬ್ಬರು ಫ್ಯಾಮಿಲಿ ಫ್ರೆಂಡ್ಸ್ ಆಗಿದ್ದರು.
ಬಿಪಾಶಾ ಬಸು: ಬಾಲಿವುಡ್‌ನ ಹಾಟ್ ನಟಿಯರಲ್ಲಿ ಬಿಪಾಶಾ ಒಬ್ಬರು.2007ರಲ್ಲಿ ಪಾರ್ಟಿಯಲ್ಲಿ ರೊನಾಲ್ಡೊ ಜೊತೆ ಕಾಣಿಸಿಕೊಂಡಿದ್ದರು ಬಿಪಾಶಾ. ಇವರಿಬ್ಬರು ರಿಲೆಷನ್‌ಶಿಪ್ ಹೊಂದಿದ್ದಾರೆಂದು ಬಲವಾದ ವದಂತಿಹಬ್ಬಿದ್ದರೂ, ಶೀಘ್ರದಲ್ಲೇ ಮರೆಯಾಯಿತು. ಏಕೆಂದರೆ ಬಸು ಬಾಲಿವುಡ್ ಕೋಸ್ಟಾರ್ ಜೊತೆ ಡೇಟಿಂಗ್ ಮಾಡುತ್ತಿದ್ದರು ಎಂದು ವರದಿಯಾಗಿದೆ.
ಲೂಸಿಯಾ ವಿಲ್ಲಾಲನ್: ಐರಿನಾ ಜೊತೆ ಬ್ರೇಕಪ್ ನಂತರ, ರೊನಾಲ್ಡೊ ಈ ಟಿವಿ ಆಂಕರ್ ಜೊತೆ ಡೇಟ್ ಮಾಡಲು ಪ್ರಾರಂಭಿಸಿದರು, ಆದರೆ ಸ್ಪಲ್ಪ ಸಮಯದಲ್ಲೇ ಬೇರೆಯಾದರು.ಆದರೆ ಜಾರ್ಜಿನಾ ಜೊತೆ ಸಿರಿಯಸ್ ರಿಲೆಷನ್‌ಶಿಪ್‌ಗಿಂತ ಮೊದಲು ಇವಳೇ ಅವರ ಕೊನೆಯ ಗರ್ಲ್‌ಫ್ರೆಂಡ್.
ಜೋರ್ಡಾನಾ ಜಾರ್ಡೆಲ್: 2003ರಲ್ಲಿ ಜೋರ್ಡಾನಾ ಜೊತೆ ಈ ಫುಟ್ಬಾಲ್ ಸ್ಟಾರ್‌ನ ಡೇಟಿಂಗ್‌ಪ್ರಾರಂಭವಾಯಿತು ಎಂದು ವರದಿಯಾಗಿದೆ. ಲಿಸ್ಬನ್ ತಂಡದ ಸಹ ಆಟಗಾರ ಮಾರಿಯೋ ಜಾರ್ಡೆಲ್ ಸಹೋದರಿಯಾಗಿರುವ ಜೋರ್ಡಾನಾ ಬ್ರೆಜಿಲ್ ಮಾಡೆಲ್ ಕೂಡ ಹೌದು. ಇವರ ಸಂಬಂಧ ಒಂದು ವರ್ಷಕ್ಕಿಂತ ಹೆಚ್ಚು ಕಾಲ ಉಳಿಯಲಿಲ್ಲ.