ತಮಿಳು ನಟನ ಜೊತೆ ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ ನಿಶ್ಚಿತಾರ್ಥ

First Published | Sep 8, 2020, 11:05 AM IST

ಹೈದರಾಬಾದ್‌: ಭಾರತದ ಮಾಜಿ ಬ್ಯಾಡ್ಮಿಂಟನ್‌ ಆಟಗಾರ್ತಿ ಜ್ವಾಲಾ ಗುಟ್ಟಾ, ಸೋಮವಾರ ತಮಿಳು ನಟ ವಿಶಾಲ್‌ ವಿಷ್ಣು ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸಾಮಾಜಿಕ ತಾಣಗಳಲ್ಲಿ ಫೋಟೋಗಳನ್ನು ಹಾಕಿರುವ ಜ್ವಾಲಾ ಹಾಗೂ ವಿಶಾಲ್‌, ನಿಶ್ಚಿತಾರ್ಥದ ವಿಷಯವನ್ನು ಖಚಿತಪಡಿಸಿದ್ದಾರೆ.
 

ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿಯರಲ್ಲಿ ಜ್ವಾಲಾ ಕೂಡಾ ಓರ್ವಪ್ರಮುಖ ಕ್ರೀಡಾಪಟು
ಇದೀಗ ಸಾಮಾಜಿಕ ಜಾಲತಾಣವಾದ ಟ್ವಿಟರ್‌ನಲ್ಲಿ ತಾವು ಎಂಗೇಜ್‌ಮೆಂಟ್ ಮಾಡಿಕೊಂಡಿರುವುದಾಗಿ ಖಚಿತಪಡಿಸಿದ ಜ್ವಾಲಾ
Tap to resize

ಈ ಹಿಂದೆ 2005ರಲ್ಲಿ ಬ್ಯಾಡ್ಮಿಂಟನ್‌ ಆಟಗಾರ ಚೇತನ್‌ ಆನಂದ್‌ ಜೊತೆ ವಿವಾಹವಾಗಿದ್ದ ಜ್ವಾಲಾ 2011ರಲ್ಲಿ ವಿಚ್ಛೇದನ ಪಡೆದಿದ್ದರು.
2011ರಲ್ಲಿ ಪ್ರೇಯಸಿ ರಜಿನಿ ಜೊತೆ ವಿವಾಹವಾಗಿದ್ದ ವಿಶಾಲ್‌ ಕೂಡಾ ಕಳೆದ ವರ್ಷ ಡಿವೋರ್ಸ್‌ ಪಡೆದಿದ್ದರು.
ವಿಶಾಲ್‌ಗೆ ಆರ್ಯನ್ ಎನ್ನುವ ಒಬ್ಬ ಮಗನಿದ್ದು, ನಾವೆಲ್ಲಾ ಸೇರಿ ಒಟ್ಟಾಗಿ ಸುಂದರ ಬದುಕನ್ನು ಕಟ್ಟಿಕೊಳ್ಳೋಣ ಎಂದು ವಿಶಾಲ್ ಟ್ವೀಟ್ ಮಾಡಿದ್ದಾರೆ.
ಸೆಪ್ಟೆಂಬರ್ 07 ಜ್ವಾಲಾ ಗುಟ್ಟಾ ಹುಟ್ಟುಹಬ್ಬವಾಗಿದ್ದು, ಈ ಶುಭ ಸಂದರ್ಭದಲ್ಲೇ ವಿಶಾಲ್-ಜ್ವಾಲಾಗೆ ರಿಂಗ್ ತೊಡಿಸಿದ್ದಾರೆ.
ದೇಶದ ಎರಡನೇ ಅತ್ಯುನ್ನತ ಕ್ರೀಡಾ ಪ್ರಶಸ್ತಿಯಾದ ಅರ್ಜುನ ಪ್ರಶಸ್ತಿಗೆ ಜ್ವಾಲಾ ಗುಟ್ಟಾ ಭಾಜನರಾಗಿದ್ದಾರೆ.
ಸಾಮಾಜಿಕ ತಾಣಗಳಲ್ಲಿ ವಿಶಾಲ್‌ ಹಾಗೂ ಜ್ವಾಲಾ ಫೋಟೋ ವೈರಲ್‌ ಆಗಿದ್ದು, ಸೆಲೆಬ್ರಿಟಿಗಳು ಸೇರಿದಂತೆ ಸಾವಿರಾರು ಅಭಿಮಾನಿಗಳು ಶುಭ ಕೋರಿದ್ದಾರೆ.

Latest Videos

click me!