ಈ ವರ್ಷ ಪ್ರೊ ಕಬಡ್ಡಿ ಟೂರ್ನಿ ನಡೆಯುತ್ತಾ..?

First Published | Aug 8, 2020, 1:59 PM IST

ಕೊರೋನಾ ಆತಂಕದ ನಡುವೆ ಕ್ರೀಡಾ ಚಟುವಟಿಕೆಗಳು ನಿಧಾನವಾಗಿ ಆರಂಭವಾಗತೊಡಗುವೆ. ಈಗಾಗಲೇ ಕ್ರಿಕೆಟ್ ಜನಕರ ನಾಡಾದ ಇಂಗ್ಲೆಂಡ್‌ನಲ್ಲಿ  ವೆಸ್ಟ್ ಇಂಡೀಸ್-ಇಂಗ್ಲೆಂಡ್ ಸರಣಿ ಯಶಸ್ವಿಯಾಗಿ ಮುಗಿದಿದೆ. ಸದ್ಯ ಇಂಗ್ಲೆಂಡ್-ಪಾಕಿಸ್ತಾನ ನಡುವಿನ ಟೆಸ್ಟ್ ಸರಣಿ ಆರಂಭವಾಗಿದೆ.
ಇದರ ನಡುವೆ ಐಪಿಎಲ್ ಟೂರ್ನಿ ನಡೆಯುವುದು ಖಚಿತ ಎನಿಸಿದೆ. ಹೀಗಾಗಿ ಈ ವರ್ಷ ದೇಶದ ಜನರನ್ನೇ ತುದಿಗಾಲಿನಲ್ಲಿ ನಿಲ್ಲಿಸಬಲ್ಲ ದೇಸಿ ಕ್ರೀಡೆಯಾದ ಪ್ರೊ ಕಬಡ್ಡಿ ಟೂರ್ನಿ ನಡೆಯುತ್ತಾ ಎನ್ನುವ ಕುತೂಹಲ ಜೋರಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
 

ಐಪಿಎಲ್ ಟೂರ್ನಿ ನಡೆಯುವುದು ಖಚಿತ ಎನಿಸಿರುವ ಬೆನ್ನಲ್ಲೇಈ ವರ್ಷ ದೇಶದ ಜನರನ್ನೇ ತುದಿಗಾಲಿನಲ್ಲಿ ನಿಲ್ಲಿಸಬಲ್ಲ ದೇಸಿ ಕ್ರೀಡೆಯಾದ ಪ್ರೊ ಕಬಡ್ಡಿ ಟೂರ್ನಿ ನಡೆಯುತ್ತಾ ಎನ್ನುವ ಕುತೂಹಲ ಜೋರಾಗಿದೆ.
undefined
ಕೊರೋನಾ ಸೋಂಕು ನಿಯಂತ್ರ​ಣಕ್ಕೆ ಬರದ ಹಿನ್ನೆಲೆಯಲ್ಲಿ ಈ ವರ್ಷದ ಪ್ರೊ ಕಬಡ್ಡಿ ಟೂರ್ನಿ ರದ್ದು​ಗೊ​ಳ್ಳುವ ಸಾಧ್ಯತೆ ದಟ್ಟ​ವಾ​ಗಿದೆ.
undefined

Latest Videos


ಜುಲೈನಿಂದ ಅಕ್ಟೋ​ಬರ್‌ ವರೆ​ಗೂ ನಡೆ​ಯ​ಬೇ​ಕಿದ್ದ ಟೂರ್ನಿಯನ್ನು ಕೊರೋನಾ ಹಿನ್ನೆಲೆಯಲ್ಲಿ ಮುಂದೂ​ಡ​ಲಾ​ಗಿತ್ತು.
undefined
ಆದರೆ ಸೆಪ್ಟೆಂಬರ್‌ನಿಂದ ನವೆಂಬರ್‌ ವರೆಗೂ ಐಪಿ​ಎಲ್‌ ನಡೆ​ಯ​ಲಿ​ರುವ ಕಾರಣ, ಒಂದೇ ಸಮ​ಯ​ದ​ಲ್ಲಿ ಎರ​ಡು ಪ್ರಮುಖ ಟೂರ್ನಿಗಳನ್ನು ನಿಭಾ​ಯಿ​ಸುವುದು ಪ್ರಸಾರ ಹಕ್ಕು ಹೊಂದಿ​ರುವ ಸ್ಟಾರ್‌ ವಾಹಿ​ನಿಗೆ ಸವಾ​ಲಾಗಿ ಪರಿ​ಣ​ಮಿ​ಸ​ಲಿದೆ.
undefined
ಎಲ್ಲ​ಕ್ಕಿಂತ ಮುಖ್ಯ​ವಾಗಿ ಕಬ​ಡ್ಡಿ​ಯಲ್ಲಿ ಸಾಮಾ​ಜಿಕ ಅಂತರ ಕಾಯ್ದು​ಕೊ​ಳ್ಳಲು ಸಾಧ್ಯ​ವಿಲ್ಲ ಹೀಗಾಗಿ ಪ್ರೊ ಕಬಡ್ಡಿ ಆಯೋಜನೆ ಕಷ್ಟಸಾಧ್ಯ.
undefined
ಒಂದು ಕಡೆಯಿಂದ ಮತ್ತೊಂದು ಕಡೆ ಪ್ರಯಾಣ ಸಹ ಕಷ್ಟ ಎನಿ​ಸಿ​ರುವ ಕಾರಣ, ಈ ವರ್ಷದ ಟೂರ್ನಿಯನ್ನು ರದ್ದು​ಗೊ​ಳಿ​ಸಲು ಆಯೋ​ಜ​ಕರು ಚಿಂತಿ​ಸಿ​ದ್ದಾರೆ ಎನ್ನ​ಲಾ​ಗಿದೆ.
undefined
click me!