ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟೆಕ್ಸಾಸ್ ರಾಜ್ಯದ ಹೂಸ್ಟನ್‌ನಲ್ಲಿ ಭಾನುವಾರ ನಡೆದ ‘ಹೌಡಿ, ಮೋದಿ’ ಸಮಾವೇಶದಲ್ಲಿ ಅದ್ಧೂರಿ ಹಾಗೂ ಐತಿಹಾಸಿಕ ಸ್ವಾಗತ ದೊರೆತಿದೆ. ಎನ್‌ಆರ್‌ಜಿ ಕ್ರೀಡಾಂಗಣದಲ್ಲಿ ಅನಿವಾಸಿ ಭಾರತೀಯ 600 ಸಂಘಟನೆಗಳು ಆಯೋಜಿಸಿದ್ದ ಸಮಾವೇಶದಲ್ಲಿ ಸುಮಾರು 50 ಸಾವಿರ ಮಂದಿ ನೆರೆದಿದ್ದರು. ವಿದೇಶಿ ಚುನಾಯಿತ ಪ್ರತಿನಿಧಿಯೊಬ್ಬರಿಗೆ ಅಮೆರಿಕದಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಜನರು ಸೇರಿದ್ದು ಇದೇ ಮೊದಲು. ಸ್ವತಂಃ ಟ್ರಂಪ್ ಈ ಸಮಾವೇಶದಲ್ಲಿ ಭಾಗಿಯಾಗಿದ್ದು, ಇಡೀ ವಿಶ್ವದಾದ್ಯಂತ ಈ ಸಮಾವೇಶ ಸದ್ದು ಮಾಡಿದೆ. ಹೀಗಿರುವಾಗ ಮೋದಿ-ಟ್ರಂಪ್ ಸ್ನೇಹ ವಿವರಿಸುವ ಫೋಟೋಗಳು ಹೀಗಿವೆ.