ಸೆ.19ರಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂಪೂರ್ಣವಾಗಿ ದೇಶೀ ನಿರ್ಮಿತ ತೇಜಸ್ ಲಘು ಯುದ್ಧ ವಿಮಾನ(ಎಲ್‌ಸಿಎ)ದಲ್ಲಿ ಹಾರಾಟ ನಡೆಸಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ತೇಜಸ್‌ನಲ್ಲಿ ಸುಮಾರು 30 ನಿಮಿಷಗಳ ಕಾಲ ಹಾರಾಟ ನಡೆಸಿದ್ದಾರೆ. ಇದಕ್ಕೂ ಮೊದಲು ಎಲ್‌ಸಿಎ ಕುರಿತು ಭಾರತೀಯ ವಾಯುಪಡೆ ಪೈಲಟ್‌ಗಳು ಅವರಿಗೆ ಸೂಕ್ತ ವಿವರಣೆ ನೀಡಿದ್ದಾರೆ. ಎಚ್‌ಎಎಲ್ ನಾಲ್ಕೂವರೆ ದಶಕಗಳ ಅವಧಿಯಲ್ಲಿ ಸಂಪೂರ್ಣ ದೇಶೀಯವಾಗಿ ಅಭಿವೃದ್ಧಿ ಪಡಿಸಿರುವ ಹಾಗೂ ಇತ್ತೀಚೆಗಷ್ಟೇ ಸೇನೆಯ ಸೇವೆಗೆ ಸೇರ್ಪಡೆಯಾಗಿರುವ ತೇಜಸ್ ಯುದ್ಧವಿಮಾನದಲ್ಲಿ ರಕ್ಷಣಾ ಸಚಿವರೊಬ್ಬರು ಹಾರಾಟ ನಡೆಸಿದ್ದು ಇದೇ ಮೊದಲು. ಈ ಹೆಗ್ಗಳಿಕೆಗೆ ರಾಜನಾಥ್ ಸಿಂಗ್ ಪಾಲಾಗಿದೆ. Photo credit: ವೀರಮಣಿ, ಕನ್ನಡಪ್ರಭ