ಮಳೆ ನೀರಲ್ಲಿ ಮುಳುಗಿದ ಕರ್ನಾಟಕದ ಕರುಣಾಜನಕ ಚಿತ್ರಗಳು!

First Published | Aug 7, 2019, 4:07 PM IST

ರಾಜ್ಯದ ಅರ್ಧಕ್ಕೂ ಹೆಚ್ಚು ಭಾಗದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಪ್ರವಾಹವನ್ನೆದುರಿಸುತ್ತಿದೆ. ರಾಜ್ಯದ ವಿವಿಧೆಡೆ ಮಳೆ ಅವಾಂತರ ಸೃಷ್ಟಿಸಿದ್ದು, ಜನರು ಕಂಗಾಲಾಗಿದ್ದಾರೆ. ವರುಣನ ಆರ್ಭಟಕ್ಕೆ ಮನೆ, ರಸ್ತೆಗಳು ಕುಸಿಯುತ್ತಿದ್ದು ಮೂಕ ಪ್ರಾಣಿಗಳು ನಿಂತಲ್ಲೇ ಪ್ರಾಣ ಕಳೆದುಕೊಂಡಿವೆ. ಮಳೆ ನೀರಲ್ಲಿ ಮುಳುಗಿದ ಕರ್ನಾಟಕದ ಕೆಲ ಕರುಣಾಜನಕ ಚಿತ್ರಗಳು

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಅವರೋಳಿ ಗ್ರಾಮದ ನವರತ್ನ ಜೋಳದ ಎಂಬ ಬಡ ರೈತನ ಮನೆ ಮಳೆಯಿಂದಾಗಿ ಕುಸಿದು ಬಿದ್ದ ಸಂದರ್ಭದಲ್ಲಿ ಮನೆಯಲ್ಲಿದ್ದ ಎರಡು ಎಮ್ಮೆ, ಒಂದು ಹಸು ಪ್ರಾಣ ಬಿಟ್ಟಿವೆ.
ಶಾಲೆಗಳಿಗೆ ರಜೆ ನೀಡಿದ್ದರಿಂದ ತಪ್ಪಿದ ಅನಾಹುತ. ಮಳೆಗೆ ಹಿರೇಕೆರೂರು ತಾಲೂಕಿನ ಯತ್ತಿನಹಳ್ಳಿ ಎಂಕೆ ಸರ್ಕಾರಿ ಶಾಲೆ ಗೋಡೆ ಕುಸಿತ.
Tap to resize

ಯಾಣದಲ್ಲಿ ಗುಡ್ಡ ಹಾಗೂ ಭೂಕುಸಿತ
ಗಂಗಾವಳಿ ತೀರದಲ್ಲಿ ಮುಳುಗಿದ ಮನೆ
ಅಂಕೋಲಾ ಅಗ್ರಗೋಣ
ನವಲಗುಂದ ತಾಲೂಕಿನ ತುಪರಿಹಳ್ಳದಲ್ಲಿ ಸಿಲುಕಿದ್ದ ಏಳು ಜನರ ರಕ್ಷಣೆ
ನವಲಗುಂದ -ನರಗುಂದ ರಸ್ತೆಯಲ್ಲಿ ಬರುವ ಬೆಣ್ಣಿಹಳ್ಳ ತುಂಬಿ ಹರಿಯುತ್ತಿದೆ. ಸುತ್ತ ಮುತ್ತಲಿನ ಹೊಲಗಳಿಗೆ ನೀರು ನುಗ್ಗಿದೆ
ಅಂಕೋಲಾದಲ್ಲಿ ಮನೆ ಜಲಾವೃತವಾಗಿ ಆಪಾಯದಲ್ಲಿದ್ದ ವೃದ್ಧೆಯ ರಕ್ಷಣೆ
ತೀರ್ಥಹಳ್ಳಿ ಸಮೀಪದ ಅರಗ ಗೇಟ್ ಬಳಿಯ ಹಿರೇಸರ ಗ್ರಾಮದಲ್ಲಿ ಕುಶಾವತಿ ನದಿಯಿಂದ ಮನೆಯೊಂದು ಆವೃತ್ತವಾಗಿದ್ದ, ಮನೆಯಲ್ಲಿ ಸಿಲುಕಿದ್ದ 4 ಜನರನ್ನು ಮತ್ತು ಆರು ಜಾನುವಾರುಗಳನ್ನು ಬೆಳಗ್ಗೆ ಅಗ್ನಿಶಾಮಕ ದಳದವರು ರಕ್ಷಿಸಿದರು.
ಹುಬ್ಬಳ್ಳಿಯಲ್ಲಿ ‌ಮನೆ ಕುಸಿತ
ಹುಬ್ಬಳ್ಳಿ ಅಂಕೋಲಾ ರಾಷ್ಟ್ರೀಯ ಹೆದ್ದಾರಿ
ನವಲಗುಂದ ತಾಲೂಕಿನ ಯಮನೂರು ಬಳಿಯಿರುವ ಬೆಣ್ಣಿಹಳ್ಳ ತುಂಬಿರುವುದು
ಮಳೆಗೆ ರಾಣೆಬೆನ್ನೂರು ತಾಲೂಕಿನ ಅಸುಂಡಿ ಗ್ರಾಮದಲ್ಲಿ ಬಿದ್ದ ಮನೆ
ಮರ ಬಿದ್ದು ಶಿರಾಡಿ ಘಾಟ್ ಸಂಚಾರ ಆತಂಕ
ಶಿವಮೊಗ್ಗ ನಗರದಲ್ಲಿರುವ ಶಿವಪ್ಪನಾಯಕನ ಅರಮನೆ ಆವರಣದಲ್ಲಿ ಮರವೊಂದು ಉರುಳಿಬಿದ್ದು ಹಾನಿ ಸಂಭವಿಸಿದೆ.
ಧಾರವಾಡ ಗಾಂಧಿನಗರದ ಮನೆ ಮೇಲೆ ಬಿದ್ದಿರುವ ಮರ
ಬೆಳಗಾವಿ ರೇಲ್ವೆ ನೂತನ ಓವರ್ ಬ್ರಿಡ್ಜ್ ಪ್ರದೇಶದಲ್ಲಿ ಭಾರಿ ನಿರು ಆವರಿಸಿ ಕಾರಣ ಚನ್ನಮ್ಮ ಎಕ್ಸಪ್ರೆಸ್ ನಗರ ತಲುಪದೇ ದೂರದಲ್ಲೇ ನಿಂತಿದೆ.
ಕಾಳಿ ಪ್ರವಾಹ. ಹಣಕೋಣಜೂಗ ಜನರ ಸ್ಥಳಾಂತರ
ಕದಂಬ ನೌಕಾನೆಲೆ ರಕ್ಷಣಾ ತಂಡದಿಂದ 150 ಕ್ಕೂ ಹೆಚ್ಚು ಜನರ ರಕ್ಷಣೆ.
ಶಿರಸಿ ಭಾರಿ ಮಳೆ. ನಗರದ ರಸ್ತೆಗಳು ಜಲಾವೃತ
ಕಮರಿಪೇಟೆ ನಾಲೆ ಕುಸಿತ ಸ್ಥಳದಲ್ಲಿ ಪಾಲಿಕೆ ಹಾಗೂ ಹೆಸ್ಕಾಂ ಅಧಿಕಾರಿಗಳು 250 ಕೆವಿ ಸಾಮರ್ಥ್ಯದ ಟಿ. ಸಿ. ಸ್ಥಳಾಂತರಿಸುವ ಕಾರ್ಯ ಆರಂಭವಾಗಿದೆ.
ಅಂಬೇಡ್ಕರ್ ನಗರದ ದುರಗಪ್ಪ ಕಾಶೆಪ್ಪ ಹುಣಸಿಮರದರವರ ಮನೆ ಸತತವಾಗಿ ಸುರಿದ ಮಳೆಗೆ ನೆನದು ಬಿದ್ದಿರುತ್ತದೆ
ಶಿರಸಿ ಹಾವೇರಿ ರಸ್ತೆಯಲ್ಲಿ ಚಲಿಸುತ್ತಿದ್ದ ಬಸ್ ಮೇಲೆ ಉರುಳಿದ ಮರ. ಕೆಲವರಿಗೆ ಗಾಯ
ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರೀ ಮಳೆ ಹಿನ್ನೆಲೆ. ಗೋಕಾಕ್ ನಗರ ಅರ್ಧದಷ್ಟು ಜಲಾವೃತ
ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂದುವರಿದ ಮಳೆ ಆರ್ಭಟ ಕದ್ರಾದಲ್ಲಿ ರೆಡ್ ಅಲರ್ಟ್ ಘೋಷಣೆ
ಭೀಮಾನದಿಗೆ ಉಜನಿ ಹಾಗೂ‌ ಮಿರಾ ಜಲಾಶಯದಿಂದ ನೀರು ಬಿಡುಗಡೆ
ಹರಿಹರ ತಾಲೂಕಿನ ನದಿಪಾತ್ರದ ಗ್ರಾಮಗಳಿಗೆ ಮುಳುಗಡ ಭೀತಿ, ಕೆಲ ಸೇತುವೆ ಮುಳುಗಡೆ. ಉಕ್ಕಡಗಾತ್ರಿಗೆ ನುಗ್ಗಿದ ತುಂಗಭದ್ರೆ
ಅಳ್ನಾವರ ಪಟ್ಟಣದ ಉಮಾಭವನದ ಪುನರ್ವಸತಿಪರಿಹಾರ ಕೇಂದ್ರ.
ಪ್ರವಾಹ, ಅಂಕೋಲಾ ಮೊಗಟಾ ಹರಶ್ಚಂದ್ರ ಆಚಾರ್ಯರ ಮನೆ ನೆಲಸಮ.

Latest Videos

click me!