ರಾಜ್ಯದಲ್ಲಿ ಮಳೆಯಬ್ಬರ, ಕೊಚ್ಚಿ ಹೋಗುತ್ತಿದೆ ಬದುಕು!: ಮನಕಲಕುವ ಚಿತ್ರಗಳು

First Published Aug 6, 2019, 4:22 PM IST

ಉತ್ತರ ಕರ್ನಾಟಕ, ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ಮನೆ-ಮಠಗಳಿಗೆ ನೀರು ನುಗ್ಗಿ ಜನರು ಬೇರೆ ದಾರಿ ಇಲ್ಲದೇ ನಿರಾಶ್ರಿತರ ಕೇಂದ್ರಕ್ಕೆ ತೆರಳುತ್ತಿದ್ದಾರೆ. ವರುಣನ ಆರ್ಭಟಕ್ಕೆ ಕೆಲವೆಡೆ ಮನೆಗೋಡೆ ಕುಸಿದಿದ್ದರೆ, ಮತ್ತೆ ಕೆಲವೆಡೆ ರಸ್ತೆಗಳೇ ಬಿರುಕು ಬಿಟ್ಟಿವೆ. ಮೂರು ತಿಂಗಳಿಂದ ಮಳೆ ಇಲ್ಲದೇ ಕಂಗಾಲಾಗಿದ್ದ ಜನರು ಇಂದು ಮಳೆಯಬ್ಬರಕ್ಕೆ ನಿರಾಶ್ರಿತರಾಗಿದ್ದಾರೆ. ಮಳೆಯಬ್ಬರ ಸೃಷ್ಟಿಸಿದ ಅವಾಂತರ ಕ್ಯಾಮೆರಾ ಕಣ್ಣಿನಲ್ಲಿ ಕಂಡಿದ್ದು ಹೀಗೆ

ಮಲೆನಾಡು ಶೃಂಗೇರಿಯಲ್ಲಿ‌ ಭಾರೀ ಮಳೆ, ಶೃಂಗೇರಿ ಶಾರದಾಂಬೆಯ ಸನ್ನಿಧಿಯ ಸ್ನಾನಘಟ್ಟಕ್ಕೆ ಅಪ್ಪಳಿಸಿದ ತುಂಗಾ ನದಿ . ಕಪ್ಪೆ ಶಂಕರ ದೇವಸ್ಥಾನ, ಸಂದ್ಯಾವಂದನ ಮಂಟಪ ಮುಳುಗಡೆ
undefined
ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಭಾರಿ ಪ್ರಮಾಣದ ಭೂಕುಸಿತ. ಪುಣೆ ಬೆಂಗಳೂರು ರಸ್ತೆ ಸಂಪರ್ಕ ಕಡಿತ
undefined
ಮಹಾರಾಷ್ಟ್ರದ‌ ಇನ್ನಿತರ ನಗರಗಳಿಗೆ ‌ಸಂಚರಿಸುವ ವಾಹನಗಳನ್ನು ನಿಪ್ಪಾಣಿ ಹಾಗೂ ಗಡಿಭಾಗದಿಂದ ಈಚೇಗೆ ಪೊಲೀಸರು ತಡೆಹಿಡಿಯುವ ಕಾರ್ಯ ಮಾಡುತಿದ್ದಾರೆ.
undefined
ಭಾಗಮಂಡಲ ಈ ಬಾರಿಯ ಮಳೆಗೆ ಮೊದಲ ಬಾರಿ ಜಲಾವೃತ
undefined
ಬೆಳಗಾವಿ ಪಣಜಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತ. ಮಲಪ್ರಭಾ ನದಿಯ ಸೇತುವೆ ಮೇಲೆ ನೀರು
undefined
ಮಡಿಕೇರಿ-ಸೋಮವಾರಪೇಟೆ ರಾಜ್ಯ ಹೆದ್ದಾರಿ
undefined
ಗದಗ ಜಿಲ್ಲೆಯಾದ್ಯಂತ ಸೋರುತ್ತಿರುವ ಮಣ್ಣಿನ ಮನೆಗಳನ್ನು ರಕ್ಷಿಸಿಕೊಳ್ಳಲು ಪ್ಲಾಸ್ಟಿಕ್ ಹಾಳೆಗಳಿಗೆ ಮೊರೆ ಹೋದ ಸಾರ್ವಜನಿಕರು.
undefined
ನವಲಗುಂದ ತಾಲೂಕಿನ ಬೆಣ್ಣಿಹಳ್ಳ ತುಂಬಿ ಹರಿಯುತ್ತಿದೆ . ಬೆಣ್ಣಿಹಳ್ಳದ ಅಕ್ಕಪಕ್ಕದ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.
undefined
ಕುಮಟ ತಾಲ್ಲೂಕಿನ ಅಘನಾಶಿನಿ ಮೇಲಿನಕೇರಿ ಗ್ರಾಮದ ಮನೆಗಳಿಗೆ ನೀರು ತುಂಬಿದ ಕಾರಣ ಇಲ್ಲಿನ ಕುಟುಂದ ಸದಸ್ಯರನ್ನು ಸ.ಹಿ.ಪ್ರಾ. ಶಾಲೆ ಅಘನಾಶಿನಿ ಮೇಲಿನಕೇರಿ ಯಲ್ಲಿ ಗಂಜಿ ಕೇಂದ್ರವನ್ನು ತೆರೆದು ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಲಾಗಿದೆ
undefined
ಮಂಗಳೂರಿಗೆ ತೆರಳುತಿದ್ದ ನೇತ್ರಾವತಿ ಎಕ್ಸ್‌ಪ್ರೆಸ್ ಮೇಲೆ ಬಿದ್ದ ಮರ.
undefined
ಹುಬ್ಬಳ್ಳಿಯಲ್ಲಿ ಮನೆ ಕುಸಿತ.
undefined
ಕುಮಟಾ ಶಿರಸಿ ಸಂಪರ್ಕ ಕಡಿತ. ಕತಗಾಲ ಬಳಿ ಮುಳುಗಿದ ಹೆದ್ದಾರಿ
undefined
ಅಂಕೋಲಾದ ಡೋಂಗ್ರಿ ಗ್ರಾಪಂ ಜಲಾವೃತ
undefined
ಕುಮಟಾ ಶಿರಸಿ ರಾಜ್ಯ ಹೆದ್ದಾರಿ ಮೇಲೆ ಕತಗಾಲ ಬಳಿ ದೋಣಿಯಲ್ಲಿ ಜನಸಂಚಾರ
undefined
ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾವಿರಾರು ಜನರ ಸ್ಥಳ‌ಾಂತರ
undefined
ದಕ್ಷಿಣ ಕೊಡಗಿನ ಬಾಳೆಲೆ ಮತ್ತು ನಿಟ್ಟೂರು ಗ್ರಾಮದ ಲಕ್ಷ್ಮಣ ತೀರ್ಥ ನದಿ
undefined
ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮಣ್ಣಿನ ಮನೆಗಳ ಕುಸಿತ.
undefined
ಚಾರ್ಮಾಡಿ ಘಾಟಿಯಲ್ಲಿ ಗುಡ್ಡ ಕುಸಿತ. ಕ್ಷಿಪ್ರ ಕಾರ್ಯಾಚರಣೆ ಮೂಲಕ ತೆರವು.
undefined
ಕೊಟ್ಟಿಗೆ ಗೋಡೆ ಕುಸಿದು ಎಮ್ಮೆ ಸಾವು. ರಾಣಿಬೆನ್ನೂರು ತಾಲೂಕಿನ ಚಳಗೇರಿಯಲ್ಲಿ ಘಟನೆ.
undefined
ಇದು ಕೈಗಾ ಅಣು ವಿದ್ಯುತ್ ಸ್ಥಾವರದ ಟೌನಶಿಪ್
undefined
ಕುಮಟಾದ ಕೋನಳ್ಳಿಯಲ್ಲಿ ಬಿದಿರಿನ ಬುಟ್ಟಿಯಲ್ಲಿ ಹೊತ್ತುತಂದು ಪ್ರವಾಹದಿಂದ ರಕ್ಷಿಸಿದ ಸ್ಥಳೀಯರು
undefined
ಮಡಿಕೇರಿ-ಚೆಟ್ಟಳ್ಳಿ ರಸ್ತೆ
undefined
ಹುಬ್ಬಳ್ಳಿಯ ಉಣಕಲ್ ಕೆರೆ ಕೋಡಿ ಹರಿಯುತ್ತಿದೆ
undefined
ಕರ್ನಾಟಕ ಮಹಾರಾಷ್ಟ್ರದಲ್ಲಿ ಬಾರಿ ಮಳೆ ಹಿನ್ನೆಲೆ ಮಲೇಯ ರಭಸಕ್ಕೆ ಕೊಚ್ಚಿಹೋದ ರೈಲ್ವೇ ಹಳಿ.
undefined
ಕಲ್ಲತ್ತಿಗಿರಿ ವೀರಭದ್ರೇಶ್ವರ ದೇವಾಲಯದಲ್ಲಿ ಮಳೆಗೆ ಹೊರ ಬರಲರದೆ ಸಿಲುಕಿದ ಭಕ್ತರು
undefined
ಬೆಳಗಾವಿಯ ಐತಿಹಾಸಿಕ ಕಿತ್ತೂರು ಕೋಟೆ ಗೋಡೆ ಕುಸಿತ
undefined
ಹೊನ್ನಾವರ ತಾಲ್ಲೂಕಿನ ಗುಂಡಬಾಳ ನದಿ ಪ್ರವಾಹದ
undefined
ಖಾನಾಪೂರದಲ್ಲಿ ಹೆಚ್ಚಾದ ಮಳೆ ಹಿನ್ನಲೆ, ಶಾಸಕಿ ಅಂಜಲಿ ನಿಂಬಾಳ್ಕರ್ ಮನೆಯ ಸುತ್ತ ಆವರಿಸಿದ ನೀರು
undefined
click me!