ಇನ್ಮೇಲೆ ಕಪ್ ಬಿದ್ರೂ ಅಷ್ಟು ಸುಲಭಕ್ಕೆ ಒಡೆಯಲ್ಲ, ನೀವೂ ಟ್ರೈ ಮಾಡಿ ಈ ಹೊಸ ಟ್ರಿಕ್ಸ್

Published : Jul 18, 2025, 11:39 AM IST

ಈ ರೀಲ್ಸ್ ಇಲ್ಲಿಯವರೆಗೆ 40 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಕೆಲವರು ಈ ಹ್ಯಾಕ್ ಅನ್ನು ಪ್ರಯತ್ನಿಸುವ ಮೂಲಕ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. 

PREV
15
ಕಸದ ಬುಟ್ಟಿ ಸೇರುವ ಕಪ್‌ಗಳು

ಭಾರತದಲ್ಲಿ ಚಹಾ ಪ್ರಿಯರಿಗೆ ಕೊರತೆಯೇನಿಲ್ಲ ಬಿಡಿ. ಜನರು ತಮ್ಮ ಬೆಳಗ್ಗೆಯನ್ನು ಒಂದು ಕಪ್ ಚಹಾದೊಂದಿಗೇ ಪ್ರಾರಂಭಿಸುವುದು. ಇನ್ನು ಚಹಾ ಕುಡಿಯಲು ಈಗೆಲ್ಲಾ ಫ್ಯಾನ್ಸಿ ಕಪ್‌ಗಳನ್ನು ಖರೀದಿಸುವುದೇ ಹೆಚ್ಚು. ಆದರೆ ಅವು ಒಡೆಯಲ್ಲ ಎನ್ನುವ ಬಗ್ಗೆ ಯಾವುದೇ ಗ್ಯಾರಂಟಿ ಇರಲ್ಲ. ಅಷ್ಟೇ ಅಲ್ಲ, ಈ ಕಪ್‌ಗಳು ನೋಡಲು ಸುಂದರವಾಗಿರುತ್ತವೆ. ಆದರೆ ಬಳಸೋಣವೆಂದರೆ ಸೂಕ್ಷ್ಮವಾಗಿರುತ್ತವೆ. ಸ್ವಲ್ಪ ಅಜಾಗರೂಕತೆ ವಹಿಸಿದರೂ ಕಪ್‌ ಒಡೆದು ಹೋಗಬಹುದು. ಅದೆಷ್ಟೋ ಬಾರಿ ಚಹಾ ಕುಡಿಯುವಾಗ ಅಥವಾ ಕಪ್‌ಗಳನ್ನು ತೊಳೆಯುವಾಗ ಅವು ಕೈಯಿಂದ ಜಾರಿ ಕ್ಷಣಾರ್ಧದಲ್ಲಿ ಒಡೆದಿವೆ. ರಿಪೇರಿ ಮಾಡೋಕು ಬರಲ್ಲ, ಆ ಲೆವೆಲ್‌ಗೆ ಅವು ಒಡೆದು ನೇರವಾಗಿ ಕಸದ ಬುಟ್ಟಿಗೆ ಹೋಗುತ್ತವೆ.

25
ಈ ಐಡಿಯಾ ಟ್ರೈ ಮಾಡಿ

ನಾವೆಲ್ಲ ಇಲ್ಲಿ ಹೀಗೆ ಯೋಚನೆ ಮಾಡುತ್ತಿದ್ರೆ, ಸಾಮಾಜಿಕ ಮಾಧ್ಯಮದಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದೆ. ಇದರಲ್ಲಿ ಮಹಿಳೆಯೊಬ್ಬರು ಕಪ್‌ಗಳು ಗಟ್ಟಿಯಾಗಿರುವಂತೆ ನೋಡಿಕೊಳ್ಳಲು ಒಂದು ಈಸಿ ಮಾರ್ಗವನ್ನು ಶೇರ್ ಮಾಡಿದ್ದಾರೆ. ಈ ಐಡಿಯಾ ಟ್ರೈ ಮಾಡುವುದರಿಂದ ಅದೆಂಥಹ ಕಪ್‌ಗಳು ಸಹ ಅಷ್ಟು ಸುಲಭಕ್ಕೆ ಒಡೆಯುವುದಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.

35
ವಿಡಿಯೋದಲ್ಲಿ ಏನಿದೆ?

ವಿಡಿಯೋದಲ್ಲಿ ತೋರಿಸಿರುವ ಪ್ರಕಾರ, ಆಕೆ ಪ್ಯಾನ್‌ ತೆಗೆದುಕೊಂಡು ಅದರೊಳಗೆ ನೀರನ್ನು ಹಾಕಿ, ಗ್ಯಾಸ್ ಮೇಲೆ ಬಿಸಿ ಮಾಡುತ್ತಾಳೆ. ನಂತರ ಎಲ್ಲಾ ಕಪ್‌ಗಳನ್ನು ಒಂದೊಂದಾಗಿ ಬಿಸಿ ನೀರಿನಲ್ಲಿ ಹಾಕುತ್ತಾಳೆ. ನಂತರ ಕಪ್‌ಗಳನ್ನು 5 ನಿಮಿಷಗಳ ಕಾಲ ನೀರಿನಲ್ಲಿ ಬಿಸಿ ಮಾಡಿ. ನಂತರ ಅವುಗಳನ್ನು ಸಾಮಾನ್ಯ ನೀರಿನಿಂದ ತೊಳೆದು ಬಳಸಿ ಎಂದು ಹೇಳುತ್ತಾಳೆ. ಇದು ಕಪ್‌ ಗಟ್ಟಿಯಾಗಿರುವಂತೆ ನೋಡಿಕೊಳ್ಳುತ್ತದೆ. ಮತ್ತೆ ಸುಲಭವಾಗಿ ಒಡೆಯುವುದಿಲ್ಲ.

45
ಈ ವೈರಲ್ ಹ್ಯಾಕ್ ನೋಡಿ ಜನ ಏನಂದ್ರು?nts

ಕುದಿಯುವ ನೀರಿನಲ್ಲಿ ಕಪ್ ಹಾಕುವ ಈ ಹ್ಯಾಕ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಜನರು ಇದನ್ನು ತುಂಬಾ ಇಷ್ಟಪಡುತ್ತಿದ್ದಾರೆ. ಈ ಜುಗಾಡ್ ಅನ್ನು @chanda_and_family_vlogs ಎಂಬ ಪೇಜ್‌ನಿಂದ Instagram ನಲ್ಲಿ ಹಂಚಿಕೊಳ್ಳಲಾಗಿದೆ. ಈ ರೀಲ್ಸ್ ಇಲ್ಲಿಯವರೆಗೆ 40 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ.

55
ಟೆರೆಸ್ ಮೇಲಿಂದ ನಿಂತು ಎಸೆದರೂ ಕಪ್ ಒಡೆಯುವುದಿಲ್ಲವೇ?

ಅನೇಕ ಜನರು ಈ ವಿಡಿಯೋ ನೋಡಿ ತಮಾಷೆಯಾಗಿ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಆದರೆ ಕೆಲವರು ಈ ಹ್ಯಾಕ್ ಅನ್ನು ಪ್ರಯತ್ನಿಸುವ ಮೂಲಕ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. 'ನನ್ನ ತಾಯಿ ಕೂಡ ಈ ಹ್ಯಾಕ್ ಟ್ರೈ ಮಾಡಿದರು. ಇದು ಸಾಕಷ್ಟು ಪರಿಣಾಮಕಾರಿಯಾಗಿದೆ' ಎಂದರೆ ಮತ್ತೆ ಕೆಲವರು '1 ಕೆಜಿ ಸಿಮೆಂಟ್ ಸೇರಿಸಿ, ಅದು ಗಟ್ಟಿಯಾಗುತ್ತದೆ', 'ಈ ಹ್ಯಾಕ್ ಮಾಡಿದ ನಂತರ, ನೀವು ಅದನ್ನು ಟೆರೆಸ್ ಮೇಲಿಂದ ನಿಂತು ಎಸೆದರೂ ಕಪ್ ಒಡೆಯುವುದಿಲ್ಲವೇ?' ಎಂದು ತಮಾಷೆಯಾಗಿ ಪ್ರಶ್ನೆ ಕೇಳಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories