ಮೈಸೂರು ಅರಮನೆಯಲ್ಲಿ ಸಂಭ್ರಮದ ಸ್ವರ್ಣಗೌರಿ, ಶ್ರೀ ವರಸಿದ್ಧಿ ವಿನಾಯಕ ವ್ರತ ಆಚರಣೆ!

Published : Sep 19, 2023, 04:30 PM IST

ಮೈಸೂರು ಅರಮನೆಯಲ್ಲಿ ಸಂಭ್ರಮದ ಗಣೇಶೋತ್ಸವ ನಡೆದಿದ್ದು, ಮಹಾರಾಜ ಯದುವೀರ್ ಕೃಷ್ಣರಾಜ ಒಡೆಯರ್ ಮತ್ತು ಮಹಾರಾಣಿ ತ್ರಿಷಿಕಾ ಪೂಜೆ ನೆರವೇರಿಸಿದ್ದರು.   

PREV
17
ಮೈಸೂರು ಅರಮನೆಯಲ್ಲಿ ಸಂಭ್ರಮದ ಸ್ವರ್ಣಗೌರಿ,  ಶ್ರೀ ವರಸಿದ್ಧಿ ವಿನಾಯಕ ವ್ರತ ಆಚರಣೆ!

ದೇಶದೆಲ್ಲೆಡೆ ಇಂದು ಸಂಭ್ರಮದ ಗಣೇಶೋತ್ಸವ (Ganeshotsav) ನಡೆಯುತ್ತಿದ್ದು, ಗಣೇಶನನ್ನು ಕೂರಿಸಿ ಅಥವ ಗಣೇಶನ ಮೂರ್ತಿಗೆ ಪೂಜೆ ಸಲ್ಲಿಸಿ ಶಾಸ್ತ್ರೋಸ್ತಕವಾಗಿ ಪೂಜೆ ಮಾಡಲಾಗುತ್ತದೆ. ಮೈಸೂರು ಅರಮನೆಯಲ್ಲೂ ಈ ಪೂಜೆ ಸಂಭ್ರಮದಿಂದ ನಡೆಯುತ್ತದೆ. 
 

27

ಮೈಸೂರು ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ್ ಒಡೆಯರ್ (Yaduveer Krishnadatta Chamaraj Wadedyar) ಮತ್ತು ಮಹಾರಾಣಿ ತ್ರಿಷಿಕಾ ರಾಣಿ ಗೌರಿ, ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.  ಈ ಸಂದರ್ಭದ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡೀಯಾದಲ್ಲಿ ಹಂಚಿಕೊಂಡಿದ್ದಾರೆ. 
 

37

ಮಹಾರಾಜ ಯದುವೀರ್ ತಮ್ಮ ಸೋಶಿಯಲ್ ಮೀಡೀಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದು, ಅರಮನೆ ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ಶ್ರೀ ಸ್ವರ್ಣಗೌರಿ ಹಾಗು ಶ್ರೀ ವರಸಿದ್ಧಿ ವಿನಾಯಕ ವ್ರತವನ್ನು ಮೈಸೂರು ಅರಮನೆಯಲ್ಲಿ ಆಚರಿಸಲಾಯಿತು ಎಂದು ಬರೆದುಕೊಂಡಿದ್ದಾರೆ. 
 

47

ರಾಜ್ಯದ ಜನರೆಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭ ಕೋರಿದ ರಾಜರೂ ಶ್ರೀ ಅಮ್ಮನವರು ಹಾಗು ಶ್ರೀ ಸ್ವಾಮಿಯವರು ಎಲ್ಲರಿಗೂ ಸಮಸ್ತ ಸನ್ಮಂಗಳವನ್ನುಂಟುಮಾಡಲಿ ಎಂದು ಪ್ರಾರ್ಥಿಸಲಾಯಿತು ಎಂದು ಬರೆದುಕೊಂಡಿದ್ದಾರೆ. 
 

57

ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ನಾಡಹಬ್ಬ ದಸರಾ ಮಹೋತ್ಸವದಲ್ಲಿ (Dasara festival) ಭಾಗವಹಿಸಲು ಆಗಮಿಸಿರುವ ಅಭಿಮನ್ಯು ನೇತೃತ್ವದ ದಸರಾ ಗಜಪಡೆಗೆ ಅರಮನೆಯ ಮುಂಭಾಗದಲ್ಲಿ ವಿಶೇಷವಾಗಿ ಸಾಂಪ್ರದಾಯಿಕ ಪೂಜೆ ಸಲ್ಲಿಸಲಾಯಿತು. 
 

67

ಮೈಸೂರು ಅರಮನೆಯಲ್ಲಿ ನಡೆಯುವ ವೈಭವದ ಗಣೇಶೋತ್ಸವ ನೋಡುವುದೇ ಚಂದ, ಗಣೇಶ ಚತುರ್ಥಿಯ (Ganesha Chathurthi) ಸಮಯದಲ್ಲಿ ಮೈಸೂರು ಅರಮನೆ ಗಣಪತಿ ಪೆಂಡಾಲ್ ಅನ್ನು ಆಯೋಜಿಸುತ್ತದೆ. ಅರಮನೆಯಲ್ಲಿ ಗಣೇಶೋತ್ಸವವು ಶ್ರೀಮಂತಿಕೆಯ ಪ್ರತೀಕವಾಗಿದೆ. 
 

77

ಮಹಾರಾಣಿ ತ್ರಿಷಿಕಾ ಸ್ವರ್ಣ ಗೌರಿ ವೃತವನ್ನು ಕೈಗೊಂಡು, ಪೂಜೆ ನೆರವೇರಿಸಿದರು. ಅಲ್ಲದೇ ಅವರು ಮಹಿಳೆಯರಿಗೆ ಬಾಗಿಣ ನೀಡಿದರು. ಅರಮನೆಯ ಗಣೇಶೋತ್ಸವದ ಸಂಭ್ರಮವನ್ನ ಕಣ್ತುಂಬಿಕೊಂಡ ಜನರು ಸಂತಸ ವ್ಯಕ್ತಪಡಿಸಿದ್ದಾರೆ. 
 

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories