ಕೇಂದ್ರ ಸರ್ಕಾರದ ಕರೆದ ವಿಶೇಷ 5 ದಿನಗಳ ಅಧಿವೇಶನ ಇಂದು ಎರಡನೇ ದಿನಕ್ಕೆ ಕಾಲಿಟ್ಟಿದೆ. ಇಂದು ಹಳೇ ಸಂಸತ್ ಭವನದಲ್ಲಿ ಕೊನೆಯ ಬಾರಿಗೆ ಸಂಸದರು ಕಾಣಿಸಿಕೊಂಡಿದ್ದಾರೆ.
ಹಳೇ ಸಂಸತ್ ಭವನಕ್ಕೆ ವಿದಾಯ ಹೇಳುವ ಮುನ್ನ ಸಂಸದರು ಫೋಟೋಶೂಟ್ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಎಲ್ಲಾ ಸಂಸದರು, ಸ್ಪೀಕರ್ ಈ ಪೋಟೋಶೂಟ್‌ನಲ್ಲಿ ಭಾಗಿಯಾಗಿದ್ದಾರೆ.
1927ರ ಜ.18ರಂದು ಈಗಿನ ಹಳೇ ಸಂಸತ್ ಭವನ ಉದ್ಘಾಟನೆಯಾಗಿತ್ತು. ಬರೋಬ್ಬರಿ 96 ವರ್ಷಗಳ ಇತಿಹಾಸವಿರುವ ಹಳೇ ಸಂಸತ್ ಭವನ ಹಲವು ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಿದೆ.
ಅಂದಿನ ಭಾರತದ ವೈಸ್‌ರಾಯ್ ಲಾರ್ಡ್ ಇರ್ವಿನ್ ಹಳೇ ಸಂಸತ್ ಕಟ್ಟಡವನ್ನು ಚಿನ್ನದ ಕೀಲಿ ಕೈ ಮೂಲಕ ಬಾಗಿಲು ತೆರೆದು ಉದ್ಘಾಟಿಸಿದ್ದರು. ಆರು ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ಈ ಕಟ್ಟಡವಿದೆ.
144 ಕಲ್ಲಿನ ಕಂಬಗಳನ್ನು ಹೊಂದಿರುವ ಈ ಸಂಸತ್ ಭವನ, 560 ಅಡಿ ವ್ಯಾಸ ಹಾಗೂ ಮೂರನೇ ಒಂದು ಮೈಲಿಯಷ್ಟು ಸುತ್ತಳತೆಯನ್ನು ಹೊಂದಿದೆ. ಭಾರತದ ಹೆಗ್ಗುರುತಾಗಿರುವ ಈ ಸಂಸತ್ ಭವನ ಇನ್ನು ಸ್ಮಾರಕವಾಗಿ ಉಳಿಯಲಿದೆ.
ಭಾರತದ ಪುನರ್ಜನ್ಮದ ಪ್ರತೀಕ, ಉನ್ನತ ಭವಿಷ್ಯದ ಸಂಕೇತ’ ಎಂದೇ ಕರೆಯಲಾಗಿದ್ದ ಹಳೇ ಸಂಸತ್ ಭವನ, ದೆಹಲಿಯ ರೈಸಿನಾ ಹಿಲ್‌ನಲ್ಲಿ ಸರ್ ಹರ್ಬಟ್ ಬೇಕರ್ ಹಾಗೂ ಸರ್ ಎಡ್ವಿನ್ ಲ್ಯೂಟನ್ಸ್ ಈ ಸಂಸತ್ ಕಟ್ಟಡವನ್ನು ವಿನ್ಯಾಸಗೊಳಿಸಿದ್ದರು.
ಇಂದು ಗಣೇಶ ಚರ್ತುರ್ಥಿ. ಇದೇ ಶುಭದಿನದಲ್ಲಿ ಹೊಸ ಸಂಸತ್ ಭವನದಲ್ಲಿ ಕಲಾಪ ಆರಂಭಗೊಳ್ಳುತ್ತಿದೆ. ಅತ್ಯಾಧುನಿಕ ಸಂಸತ್ ಭವನದಲ್ಲಿ ಇನ್ನು ಮುಂದೆ ಕಲಾಪಗಳು ನಡೆಯಲಿ
ಹೊಸ ಸಂಸತ್ ಭವನದ ಮೊದಲ ದಿನದ ಕಲಾಪದಲ್ಲೇ ಐತಿಹಾಸಿಕ ಮಸೂದೆಗಳು ಮಂಡನೆಯಾಗುವ ಸಾಧ್ಯತೆ ಇದೆ. ಮಹಿಳಾ ಮೀಸಲು ಮಸೂದೆ, ಒಂದು ದೇಶ ಒಂದು ಚುನಾವಣೆ, ಏಕರೂಪ ನಾಗರಿಕ ಸಂಹಿತೆಯಂತಹ ಮಹತ್ವದ ಮಸೂದೆ ಇಂದು ಮಂಡನೆ ಸಾಧ್ಯತೆ ಇದೆ.