ವನ್ಯಜೀವಿ ಆಂಬುಲೆನ್ಸ್ ಆರಂಭಿಸಿದ ನಟಿ Samyukta Hornad: ಚಾಲನೆ ನೀಡಿದ Anil Kumble

Published : Dec 31, 2025, 04:36 PM IST

ನಟಿ ಸಂಯುಕ್ತ ಹೊರನಾಡ್ ಅವರು ಸ್ಥಾಪಿಸಿರುವ ಪ್ರಾಣ ಅನಿಮಲ್ ಫೌಂಡೇಶನ್ ಇದೀಗ ಬೆಂಗಳೂರಿನಲ್ಲಿ ವನ್ಯಜೀವಿ ಆಂಬುಲೆನ್ಸ್ ಶುರುಮಾಡಿದ್ದು, ಅದಕ್ಕೆ ಇತ್ತೀಚೆಗೆ ಮಾಜಿ ಕ್ರಿಕೆಟರ್ ಹಾಗೂ ವನ್ಯಜೀವಿ ರಾಯಭಾರಿ ಅನಿಲ್ ಕುಂಬ್ಳೆ ಚಾಲನೆ ನೀಡಿದ್ದಾರೆ. 

PREV
17
ವನ್ಯಜೀವಿಗಳ ತುರ್ತು ರಕ್ಷಣೆ

ನಗರದಲ್ಲಿ ವನ್ಯಜೀವಿಗಳಿಗೆ ಸಮಸ್ಯೆ ಉಂಟಾದಾಗ, ತುರ್ತು ರಕ್ಷಣೆಗಾಗಿ ತುರ್ತು ಸ್ಪಂದನೆ ನೀಡಲು ಎಐ ಆಟೋಮೋಟೀವ್ ಪ್ಲಾಟ್ ಫಾರ್ಮ್ ಸಂಸ್ಥೆ ಟೇಕಿಯಾನ್ ಮತ್ತು ಪ್ರಾಣ ಆನಿಮಲ್ ಫೌಂಡೇಶನ್ ಜಂಟಿಯಾಗಿ ವನ್ಯಜೀವಿ ಆಂಬುಲೆನ್ಸ್ ಗೆ ಚಾಲನೆ ನೀಡಿದೆ.

27
ಸಂಯುಕ್ತ ಹೊರನಾಡು

ನಟಿ ಸಂಯುಕ್ತ ಹೊರನಾಡು ಪ್ರಾಣಿಪ್ರಿಯೆಯಾಗಿದ್ದು, ಇವರು ಹಲವು ವರ್ಷಗಳಿಂದ ಪ್ರಾಣಿಗಳಿಗಾಗಿ ಪ್ರಾಣ ಅನಿಮಲ್ ಫೌಂಡೇಶನ್ ನಡೆಸುತ್ತಿದ್ದಾರೆ. ಇದೀಗ ವನ್ಯಪ್ರಾಣಿಗಳ ಸಮಸ್ಯೆಗೆ ಸ್ಪಂದಿಸಲು ಆಂಬುಲೆನ್ಸ್ ಸೇವೆಯನ್ನು ಶುರು ಮಾಡಿದ್ದಾರೆ.

37
ವನ್ಯಜೀವಿ ಅಂಬುಲೆನ್ಸ್ ಗೆ ಅನಿಲ್ ಕುಂಬ್ಳೆ ಚಾಲನೆ

ಇತ್ತೀಚೆಗೆ ವನ್ಯಜೀವಿ ರಾಯಭಾರಿ ಹಾಗೂ ಮಾಜಿ ಕ್ರಿಕೆಟರ್ ಆಗಿರುವ ಅನಿಲ್ ಕುಂಬ್ಳೆಯವರು ವನ್ಯಜೀವಿ ಅಂಬುಲೆನ್ಸ್ ಗೆ ಚಾಲನೆ ನೀಡಿದ್ದರು. ಈ ಫೋಟೊಗಳನ್ನು ಸಂಯುಕ್ತಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

47
ಮಾನವ ಮತ್ತು ವನ್ಯಜೀವಿಗಳ ಸಂಘರ್ಷ

ಇತ್ತೀಚಿನ ದಿನಗಳಲ್ಲಿ ನಗರಗಳಲ್ಲೂ ಸಹ ಮಾನವ ಮತ್ತು ವನ್ಯಜೀವಿಗಳ ನಡುವೆ ಸಂಘರ್ಷ ನಡೆಯುತ್ತಿದ್ದೆ. ಪ್ರಾಣಿಗಳು ಗಾಯಗೊಂಡ ಸಂದರ್ಭದಲ್ಲಿ ಅವುಗಳಿಗೆ ತುರ್ತು ನೆರವಿನ ಅವಶ್ಯಕತೆ ಇರುವುದರಿಂದ ವನ್ಯಜೀವಿ ಆಂಬುಲೆನ್ಸ್ ಶುರುಮಾಡಲಾಗಿದೆ ಎಂದಿದ್ದಾರೆ ಸಂಯುಕ್ತಾ.

57
ತರಬೇತಿ ಪಡೆದ ಪಶುವೈದ್ಯ

ವಲಸೆ ಹಕ್ಕಿಗಳು ಇರಬಹುದು, ಹಾವು ಮೊದಲಾದ ಸರೀಸೃಪಗಳು, ಮಂಗ ಇನ್ನಿತರ ಸಣ್ಣ ಪುಟ್ಟ, ದೊಡ್ಡ ಪ್ರಾಣಿಗಳನ್ನು ಸಾಗಿಸಲು ಅನುಕೂಲವಾಗುವಂತೆ ಆಂಬುಲೆನ್ಸ್ ನಿರ್ಮಾಣ ಮಾಡಲಾಗಿದ್ದು, ಅದರಲ್ಲೇ ತರಬೇತಿ ಪಡೆದ ಪಶುವೈದ್ಯರೂ ಇರುತ್ತಾರೆ ಎನ್ನುವುದನ್ನು ಸಂಯುಕ್ತಾ ತಿಳಿಸಿದ್ದಾರೆ.

67
ವೃತ್ತಿಪರ ಚಿಕಿತ್ಸೆ ಹಾಗು ಪುರ್ನರ್ವಸತಿ

ಇದಲ್ಲದೇ ಈ ಸೇವೆಯ ಮೂಲಕ ರಕ್ಷಿಸಲಾದ ಪ್ರಾಣಿ-ಪಕ್ಷಿಗಳನ್ನು ವೃತ್ತಿಪರ ಚಿಕಿತ್ಸೆ ಹಾಗು ಪುರ್ನರ್ವಸತಿಗಾಗಿ ಬನ್ನೇರುಘಟ್ಟ ಜೈವಿಕ ಉದ್ಯಾನ ಅಥವಾ ಬರ್ಡ್ಸ್ ಆಫ್ ಪ್ಯಾರಡೈಸ್ ಪುನರ್ವಸತಿ ಕೇಂದ್ರಕ್ಕೆ ವರ್ಗಾಯಿಸಲಾಗುವುದು.

77
ಪ್ರಾಣ ಆನಿಮಲ್ ಫೌಂಡೇಶನ್

ನಟಿ ಸಂಯುಕ್ತಾ ಹೊರನಾಡು ಇತ್ತೀಚಿನ ದಿನಗಳಲ್ಲಿ ನಟನೆಯಿಂದ ದೂರ ಉಳಿದಿದ್ದಾರೆ. ಇವರು ಕೊನೆಯದಾಗಿ ಟೋಬಿ ಸಿನಿಮಾದಲ್ಲಿ ನಟಿಸಿದ್ದರು. ಸದ್ಯ ತಮ್ಮ ಪ್ರಾಣ ಆನಿಮಲ್ ಫೌಂಡೇಶನ್ ಮೂಲಕ ಪ್ರಾಣಿಗಳ ಸೇವೆ ಮಾಡುತ್ತಿದ್ದಾರೆ ನಟಿ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories