ವಿಜಯ್ ನಟಿಸಿರೋ ಜನನಾಯಕನ್ ಚಿತ್ರೀಕರಣ ಭರದಿಂದ ಸಾಗ್ತಿದೆ. ಹೆಚ್.ವಿನೋದ್ ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಜೂನ್ ತಿಂಗಳ ಒಳಗೆ ಮುಗಿಯುತ್ತೆ ಅಂತ ನಿರೀಕ್ಷಿಸಲಾಗಿದೆ. ಅನಿರುದ್ ಸಂಗೀತ ನೀಡಿರೋ ಈ ಚಿತ್ರದಲ್ಲಿ ಬಾಬಿ ಡಿಯೋಲ್, ಪೂಜಾ ಹೆಗ್ಡೆ, ಪ್ರಕಾಶ್ ರಾಜ್, ಗೌತಮ್ ವಾಸುದೇವ್ ಮೆನನ್, ನರೇನ್, ಪ್ರಿಯಾಮಣಿ, ಮಮಿತಾ ಬಳಗ ನಟಿಸಿದೆ. ವೆಂಕಟ್ ಕೆ ನಾರಾಯಣನ್ ಅವರ ಕೆವಿಎನ್ ಪ್ರೊಡಕ್ಷನ್ಸ್ ಈ ಚಿತ್ರ ನಿರ್ಮಿಸಿದೆ.