ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಮತ್ತೊಂದು ಹಾಟ್ ಸಾಂಗ್‌ನ ಮೂಲಕ ಬಾಲಿವುಡ್‌ನ ತೆರೆಗೆ ಬಂದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅವರ ಐಟಂ ಸಾಂಗ್‌ಗಳು ಭಾರೀ ಜನಪ್ರಿಯವಾಗುತ್ತಿದೆ.
ರಜನಿಕಾಂತ್ ಅಭಿನಯದ ಜೈಲರ್ ಸಿನಿಮಾದಲ್ಲಿ ತಮನ್ನಾ ಭಾಟಿಯಾ ಯಾವುದೇ ದೊಡ್ಡ ಪಾತ್ರದಲ್ಲಿ ನಟಿಸಿರಲಿಲ್ಲ. ಆದರೂ ಅವರು ಜನಪ್ರಿಯರಾಗಿದ್ದರು.
ಅದಕ್ಕೆ ಕಾರಣ ಅವರ ಒಂದೇ ಒಂದು ಐಟಂ ಸಾಂಗ್. ನೀ ಕಾವಾಲಯ್ಯ ಹಾಡು ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆಯನ್ನು ತಂದುಕೊಟ್ಟಿತು.
ಈ ಹಾಡಿನಲ್ಲಿ ತಮನ್ನಾ ಭಾಟಿಯಾ ಅವರ ಡಾನ್ಸ್ ಎಷ್ಟು ಹಾಟ್ ಆಗಿತ್ತೆಂದರೆ, ಹೆಚ್ಚಿನವರಿಗೆ ಈ ಹಾಡಿನಲ್ಲಿ ರಜನಿಕಾಂತ್ ಕೂಡ ಬಂದು ಡಾನ್ಸ್ ಮಾಡಿ ಹೋಗಿದ್ದು ಗೊತ್ತಾಗಿರಲಿಲ್ಲ.
ಈಗ ತಮನ್ನಾ ಭಾಟಿಯಾ ಇವತ್ತಿನ ರಾತ್ರಿ ವಿಧ್ವಂಸದ ರಾತ್ರಿ.. ಅನ್ನೋ ಅರ್ಥದ ಹಾಡಿನಲ್ಲಿ ಕುಣಿದಿದ್ದಾರೆ. ಇದು ಕೂಡ ಕಾವಾಲಯ್ಯ ರೀತಿಯಲ್ಲೇ ಜನಪ್ರಿಯವಾಗಬಹುದು ಎನ್ನುವ ನಿರೀಕ್ಷೆ ಇಟ್ಟಿದ್ದಾರೆ.
ರಾಜ್‌ಕುಮಾರ್ ರಾವ್ ಹಾಗೂ ಶ್ರದ್ಧಾ ಕಪೂರ್ ಅಭಿನಯದ ಸ್ತೀ 2 ಸಿನಿಮಾ ಮುಂದಿನ ಆಗಸ್ಟ್ 15 ರಂದು ಬಿಡುಗಡೆಯಾಗಲಿದೆ. ಈ ಸಿನಿಮಾದಲ್ಲಿ ತಮನ್ನಾ ಐಟಂ ಡಾನ್ಸ್‌ನಲ್ಲಿ ಕುಣಿದಿದ್ದಾರೆ.
ಆಜ್ ಕೀ ರಾತ್ ಎನ್ನುವ ಹಾಡಿನಲ್ಲಿ ತಮನ್ನಾ ಕುಣಿದಿದ್ದು, ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಆದರೆ, ಫ್ಯಾನ್ಸ್‌ಗೆ ಮಾತ್ರ ಈ ಸಾಂಗ್ ಇಷ್ಟವಾಗಿಲ್ಲ.
ಹಾರರ್-ಕಾಮಿಡಿ ಸಿನಿಮಾ 'ಸ್ತ್ರೀ..'ಯ ಮೊದಲ ಭಾಗ 2018ರಲ್ಲಿ ರಿಲೀಸ್ ಆಗಿತ್ತು. ಅಂದು ಕಮರಿಯಾ ಎನ್ನುವ ಐಟಂ ಡಾನ್ಸ್‌ನಲ್ಲಿ ನೋರಾ ಫತೇಹಿ ಕುಣಿದಿದ್ದರು.
ತಮನ್ನಾ ಅವರ ಡಾನ್ಸ್‌ಅನ್ನು ಹೆಚ್ಚಿನವರು ನೋರಾ ಫತೇಹಿ ಡಾನ್ಸ್‌ಗೆ ಹೋಲಿಕೆ ಮಾಡಿದ್ದಾರೆ. ನೋರಾಗೆ ಹೋಲಿಸಿದರೆ, ತಮನ್ನಾ ಡಾನ್ಸ್ ಏನೇನೂ ಚೆನ್ನಾಗಿಲ್ಲ ಎಂದಿದ್ದಾರೆ.
ನೋರಾ ಫತೇಹಿ 'ಕಮರಿಯಾ..' ಹಾಡಿನಲ್ಲಿ ಎಷ್ಟು ಚೆನ್ನಾಗಿ ಸೊಂಟ ಕುಣಿಸಿದಿದ್ದರು. ಆದರೆ, ತಮ್ಮನಾ ಈ ಹಾಡಿನಲ್ಲಿ ಬರಿ ಓಡಾಟ ಮಾಡ್ಕೊಂಡು ಇದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ.
ಈ ವರ್ಷ ತಮನ್ನಾ ಅಭಿನಯದ ಕಾಮಿಡಿ ಹಾರರ್ ಸಿನಿಮಾ ಅರಮನೈ-4 ಅಲ್ಲಿ ನಟಿಸಿದ್ದರು. ಅದರ ಹೊರತಾಗಿ ಮತ್ತೆ ಯಾವ ಚಿತ್ರಗಳೂ ರಿಲೀಸ್ ಆಗಿಲ್ಲ.
ಸ್ತ್ರೀ 2 ಸಿನಿಮಾದಲ್ಲಿ ತಮನ್ನಾ ಭಾಟಿಯಾ ಶಮಾ ಎನ್ನುವ ಪಾತ್ರದಲ್ಲಿ ನಟಿಸಿದ್ದಾರೆ. ಅದರೊಂದಿಗೆ ಅವರ ವೇದಾ ಚಿತ್ರ ಕೂಡ ರಿಲೀಸ್‌ಗೆ ರೆಡಿಯಾಗಿದೆ.