‘ಕಾಂತಾರ’ ವಿವಾದಕ್ಕೆ ಬಿಗ್ ಟ್ವಿಸ್ಟ್: ನಟ ರಣವೀರ್ ಸಿಂಗ್ ಚಾವುಂಡಿ ದೈವಕ್ಕೆ ಬಂದು ಕ್ಷಮೆ ಕೇಳಲಿದ್ದಾರೆ-ಹೈಕೋರ್ಟ್

Published : Mar 24, 2026, 05:16 PM IST

ಕಾಂತಾರ ಚಾಪ್ಟರ್-1 ಸಿನಿಮಾ ಕುರಿತ ಹೇಳಿಕೆಯಿಂದ ಕಾನೂನು ಸಂಕಷ್ಟಕ್ಕೆ ಸಿಲುಕಿರುವ ನಟ ರಣವೀರ್ ಸಿಂಗ್, ಎಫ್‌ಐಆರ್ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ದೂರುದಾರರು, ರಣವೀರ್ ದೇವಸ್ಥಾನಕ್ಕೆ ಬಂದು ದೈವದ ಮುಂದೆ ಕ್ಷಮೆ ಕೇಳುವಂತೆ ಪಟ್ಟು ಹಿಡಿದರು. ಇದಕ್ಕೆ ನಟನ ಪರ ವಕೀಲರು ಒಪ್ಪಿಕೊಂಡಿದ್ದಾರೆ.

PREV
16
ದೇವಸ್ಥಾನಕ್ಕೆ ಬಂದು ಪಶ್ಚಾತ್ತಾಪ ಪಡಬೇಕು

ಬೆಂಗಳೂರು (ಮಾ.24): ರಿಷಬ್ ಶೆಟ್ಟಿ ನಿರ್ದೇಶನದ 'ಕಾಂತಾರ ಚಾಪ್ಟರ್-1' ಚಿತ್ರದ ಪಾತ್ರವೊಂದಕ್ಕೆ ಸಂಬಂಧಿಸಿದಂತೆ ನೀಡಿದ್ದ ಹೇಳಿಕೆ ಬಾಲಿವುಡ್ ಸ್ಟಾರ್ ನಟ ರಣವೀರ್ ಸಿಂಗ್ ಅವರಿಗೆ ಕಾನೂನು ಸಂಕಷ್ಟ ತಂದೊಡ್ಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಎಫ್‌ಐಆರ್ (FIR) ರದ್ದು ಕೋರಿ ರಣವೀರ್ ಸಿಂಗ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಕುತೂಹಲಕಾರಿ ಬೆಳವಣಿಗೆಗಳು ನಡೆದಿವೆ. ಕೇವಲ ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆ ಕೇಳಿದರೆ ಸಾಲದು, ದೇವಸ್ಥಾನಕ್ಕೆ ಬಂದು ಪಶ್ಚಾತ್ತಾಪ ಪಡಬೇಕು ಎಂಬ ವಾದ ಹೈಕೋರ್ಟ್‌ನಲ್ಲಿ ಕೇಳಿಬಂದಿದೆ.

26
ಏನಿದು ವಿವಾದ?

ಕೆಲವು ದಿನಗಳ ಹಿಂದೆ ಸಂದರ್ಶನವೊಂದರಲ್ಲಿ ‘ಕಾಂತಾರ ಚಾಪ್ಟರ್-1’ ಚಿತ್ರದ ಪಾತ್ರವೊಂದರ ಬಗ್ಗೆ ರಣವೀರ್ ಸಿಂಗ್ ನೀಡಿದ್ದ ಹೇಳಿಕೆ ದೈವಾರಾಧನೆ ಮತ್ತು ಭಕ್ತರ ಭಾವನೆಗಳಿಗೆ ಧಕ್ಕೆ ತಂದಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಸಂಬಂಧ ಪ್ರಶಾಂತ್ ಮೆತಾಲ್ ಎಂಬುವವರು ರಣವೀರ್ ಸಿಂಗ್ ವಿರುದ್ಧ ದೂರು ದಾಖಲಿಸಿದ್ದರು. ಈ ಎಫ್‌ಐಆರ್ ಅನ್ನು ರದ್ದುಗೊಳಿಸುವಂತೆ ಕೋರಿ ನಟ ಹೈಕೋರ್ಟ್ ಮೆಟ್ಟಿಲೇರಿದ್ದರು.

36
ಟ್ವೀಟ್ ಮೂಲಕ ಕ್ಷಮೆ ಕೇಳಿದ ರಣವೀರ್

ತಮ್ಮ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ತಾವು ಕ್ಷಮೆ ಕೇಳುವುದಾಗಿ ರಣವೀರ್ ಸಿಂಗ್ ಈಗಾಗಲೇ ‘ಎಕ್ಸ್’ (ಟ್ವಿಟರ್) ಮೂಲಕ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ನ್ಯಾಯಾಲಯಕ್ಕೂ ಕ್ಷಮೆಯಾಚನೆಯ ಪ್ರಮಾಣಪತ್ರ ಸಲ್ಲಿಸುವುದಾಗಿ ರಣವೀರ್ ಪರ ವಕೀಲರು ತಿಳಿಸಿದ್ದಾರೆ. ಆದರೆ, ದೂರುದಾರ ಪ್ರಶಾಂತ್ ಮೆತಾಲ್ ಮಾತ್ರ ನಟನ ಕೇವಲ ಲಿಖಿತ ಕ್ಷಮೆಯಾಚನೆಗೆ ತೃಪ್ತರಾಗಿಲ್ಲ.

46
ಚಾವುಂಡಿ ದೇವಸ್ಥಾನಕ್ಕೆ ಭೇಟಿ ನೀಡುವಂತೆ ಒತ್ತಾಯ

ಹೈಕೋರ್ಟ್ ಏಕಸದಸ್ಯ ಪೀಠದ ಮುಂದೆ ನಡೆದ ವಿಚಾರಣೆ ವೇಳೆ ದೂರುದಾರರ ಪರ ವಕೀಲರು ಕಠಿಣ ಪಟ್ಟು ಹಿಡಿದರು. 'ನಟ ರಣವೀರ್ ಸಿಂಗ್ ಕೇವಲ ನ್ಯಾಯಾಲಯಕ್ಕೆ ಪೇಪರ್‌ನಲ್ಲಿ ಕ್ಷಮೆ ಸಲ್ಲಿಸಿದರೆ ಸಾಲದು. ಅವರಲ್ಲಿ ನೈಜ ಪಶ್ಚಾತ್ತಾಪ ಇರಬೇಕು. ಹೀಗಾಗಿ ಅವರು ದಕ್ಷಿಣ ಕನ್ನಡ ಅಥವಾ ಉಡುಪಿ ಭಾಗದ ಚಾವುಂಡಿ ದೇವಸ್ಥಾನಕ್ಕೆ ಭೇಟಿ ನೀಡಿ, ಅಲ್ಲಿ ದೈವದ ಮುಂದೆ ಕ್ಷಮೆ ಕೇಳಬೇಕು' ಎಂದು ಪ್ರಶಾಂತ್ ಮೆತಾಲ್ ಪರ ವಾದ ಮಂಡಿಸಲಾಯಿತು.

56
ವಕೀಲರ ಒಪ್ಪಿಗೆ, ಏಪ್ರಿಲ್ 10ಕ್ಕೆ ವಿಚಾರಣೆ ಮುಂದೂಡಿಕೆ

ದೂರುದಾರರ ಈ ಬೇಡಿಕೆಗೆ ಪ್ರತಿಕ್ರಿಯಿಸಿದ ರಣವೀರ್ ಸಿಂಗ್ ಪರ ವಕೀಲರು, ನಟರು ದೇವಸ್ಥಾನಕ್ಕೆ ಭೇಟಿ ನೀಡಲು ಮತ್ತು ಅಲ್ಲಿ ಕ್ಷಮೆ ಕೇಳಲು ಸಿದ್ಧರಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಅಲ್ಲದೆ, ನ್ಯಾಯಾಲಯಕ್ಕೆ ಅಧಿಕೃತವಾಗಿ ಕ್ಷಮೆಯಾಚನೆಯ ಪ್ರಮಾಣಪತ್ರವನ್ನೂ ಸಲ್ಲಿಸುವುದಾಗಿ ಭರವಸೆ ನೀಡಿದರು. ಉಭಯ ಪಕ್ಷಗಳ ವಾದವನ್ನು ಆಲಿಸಿದ ಹೈಕೋರ್ಟ್, ಪ್ರಕರಣದ ಮುಂದಿನ ವಿಚಾರಣೆಯನ್ನು ಏಪ್ರಿಲ್ 10ಕ್ಕೆ ಮುಂದೂಡಿದೆ.

66
ನ್ಯಾಯಾಲಯ ತೀರ್ಪಿಗೆ ಕಾತರ

ಒಟ್ಟಾರೆಯಾಗಿ, ಕಾಂತಾರ ಸಿನಿಮಾ ಮತ್ತು ದೈವಾರಾಧನೆಯ ವಿಷಯದಲ್ಲಿ ಕರ್ನಾಟಕದ ಜನತೆ ಎಷ್ಟು ಭಾವನಾತ್ಮಕವಾಗಿದ್ದಾರೆ ಎಂಬುದು ಈ ಪ್ರಕರಣದಿಂದ ಮತ್ತೊಮ್ಮೆ ಸಾಬೀತಾಗಿದೆ. ಬಾಲಿವುಡ್‌ನ ಖ್ಯಾತ ನಟರೊಬ್ಬರು ಈಗ ತಮ್ಮ ಹೇಳಿಕೆಗೆ ದಕ್ಷಿಣದ ದೇವಸ್ಥಾನಕ್ಕೆ ಬಂದು ಕ್ಷಮೆ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಏಪ್ರಿಲ್ 10ರಂದು ನ್ಯಾಯಾಲಯವು ಎಫ್‌ಐಆರ್ ರದ್ದುಗೊಳಿಸುತ್ತದೆಯೇ ಅಥವಾ ಹೊಸ ಷರತ್ತುಗಳನ್ನು ವಿಧಿಸುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories